ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲು ನನ್ನನ್ನು ಬೆಂಬಲಿಸಿ: ಬಿವೈಆರ್ ಮನವಿ

byr-brp

(ಹೊಸ ನಾವಿಕ ಸುದ್ದಿ)
ಭಧ್ರಾವತಿ: ಎಬಿವಿಪಿ ಸಂಘಟನೆ ಸದಸ್ಯನಾಗಿ ಕುವೆಂಪು ವಿವಿಯ ಸೆನೆಟ್ ಚುನಾವಣೆಗೆ ಸ್ಪರ್ಧಿಸುವ ಮೂಲಕ ಚನಾವಣಾ ರಾಜಕೀಯ ರಂಗಕ್ಕೆ ಪಾದಾರ್ಪಣೆ ಮಾಡಿ ಸಾರ್ವಜನಿಕ ಕ್ಷೇತ್ರವನ್ನು ಪ್ರವೇಶಿಸಿದ್ದು. ಅಲ್ಲಿ ಸಂಪೂರ್ಣ ಯಶ ಕಂಡ ನಂತರ ಜಿ ಸಂಸದನಾಗಿ ಸರ್ವತೋಮುಖ ಅಭಿವೃದ್ಧಿ ಪಡಿಸಿದ್ದು, ಈಗ ನಾಲ್ಕೇ ಭಾರಿಗೆ ಚುನಾವಣೆಗೆ ಸ್ಪರ್ಧಿಸಿದ್ದು ಮತದಾರರು ಆಶೀರ್ವಾದ ಮಾಡುವ ಮೂಲಕ ಮತ್ತೊಮ್ಮೆ ಜಿಯ ಸಮಗ್ರ ಅಭಿವೃದ್ಧಿಗೆ ಕಾರಣಕರ್ತರಾಗಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಮನವಿ ಮಾಡಿದರು.
ನಗರಕ್ಕೆ ಬಿಆರ್‌ಪಿಯಲ್ಲಿ ಏರ್ಪಡಿಸಿದ್ದ ಬಿಜೆಪಿ ಲೋಕಸಭಾ ಚುನಾವಣಾ ಸಭೆಯಲ್ಲಿ ಮಾತನಾಡಿದ ಅವರು, ಬಿಆರ್‌ಪಿಯ ಡ್ಯಾಂ ಬಳಿ ಮೈಸೂರಿನಲ್ಲಿರುವ ಕೆಆರ್‌ಎಸ್ ಮಾದರಿ ಬೃಂದಾವನ ನಿರ್ಮಾಣ ಮಾಡುವ ಯೋಜನೆ ರೂಪಿಸಿ ಅದಕ್ಕೆ ಅಗತ್ಯವಾದ ಅನುದಾನವನ್ನು ನೀಡಲಾಗಿತ್ತು. ಆದರೆ ಅನುದಾನ ಹಾಗೆ ಇದೆ. ಆದರೆ ಕಾಮಗಾರಿ ಮಾತ್ರ ಪ್ರಾರಂಭ ಆಗಲಿಲ್ಲ. ಈ ಭಾರಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ಆ ಕಾರ್ಯವನ್ನು ಶುಭಾರಂಭ ಮಾಡಿ ಮುಗಿಸುವುದು ಶತಃಸಿಧ್ದ ಎಂದರು.
ಇದಲ್ಲದೆ ಸಮೀಪದ ರಂಗನಾಥ ಬೆಟ್ಟದ ಶ್ರೀ ರಂಗನಾಥ ಸ್ವಾಮಿ ದೇವಾಲಯವನ್ನು ಸಮಗ್ರವಾಗಿ ಅಭಿವೃದ್ದಿ ಪಡಿಸುವುದು, ಯುವ ಜನರ ಆರೋಗ್ಯಕ್ಕೆ ಸುಸುಜ್ಜಿತವಾದ ಜಿಮ್, ಕ್ರೀಡೆಗಾಗಿ ಟೆನ್ನಿಸ್ ಕ್ರೀಡಾಂಗಣ ಸೇರಿದಂತೆ ಇತರೆ ಕೆಲಸಗಳನ್ನು ಮಾಡಿಕೊಡುವುದಾಗಿ ಸಭೆಯಲ್ಲಿ ಪ್ರಶ್ನಿಸಿದವರಿಗೆ ಉತ್ತರಿಸಿದರು. ಬಿಜೆಪಿಯವರು ಸಂವಿಧಾನವನ್ನು ಬದಲಿಸುತ್ತಾರೆ ಎಂದು ಕಾಂಗ್ರೇಸ್ ಪಕ್ಷದವರು ಸುಳ್ಳೆ ಅರೋಪಿಸುತ್ತಿzರೆ ಎಂದರು.
ಸುಮಾರು ೨೦ ದಿನಗಳ ಕಾಲ ತಮ್ಮ ಅಮೂಲ್ಯವಾದ ಸಮಯ ವನ್ನು ನನಗೆ ಕೊಡಿ. ಮುಂದಿನ ಐದು ವರ್ಷಗಳ ಕಾಲ ನಿಮ್ಮ ಸೇವಕನಾಗಿ ಸೇವೆ ಮಾಡುತ್ತೇನೆ. ಇದರಲ್ಲಿ ಯಾವುದೆ ಅನುಮಾನ ಬೇಡ. ಅದಕ್ಕಾಗಿ ತಾವು ಏ.೧೮ ರ ಗುರುವಾರದಂದು ನಾಮಪತ್ರವನ್ನು ಸಲ್ಲಿಸಲಿದ್ದು ತಾವೆಲ್ಲರೂ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನನಗೆ ಬಲ ತುಂಬಬೇಕು ಎಂದು ಮನವಿ ಮಾಡಿದರು.
ಜೆಡಿಎಸ್ ಮುಖಂಡೆ ಹಾಗೂ ಕಳೆದ ವಿಧಾನಸಭಾ ಚುನಾವಣಾ ಪರಾಜಿತ ಅಭ್ಯರ್ಥಿ ಶಾರದಾ ಅಪ್ಪಾಜಿ ಅವರು ಮಾತನಾಡಿ, ದೇಶ ಹಾಗು ರಾಜ್ಯದ ಉಳಿವಿಗಾಗಿ ಜೆಡಿಎಸ್ ಮತ್ತು ಬಿಜೆಪಿ ಒಟ್ಟಾಗಿದ್ದು, ಈ ಭಾರಿ ನಡೆಯ ಲಿರುವ ಚುನಾವಣೆಯಲ್ಲಿ ಕಡ್ಡಾಯ ವಾಗಿ ಬಿಜೆಪಿಯ ಕಮಲದ ಗುರುತಿಗೆ ಮತ ಹಾಕುವುದರ ಮೂಲಕ ರಾಘವೇಂದ್ರರವನ್ನು ಅತಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕೆಂದು ಕರೆ ನೀಡಿದರು.
ಮಾಜಿ ಶಾಸಕ ಅಪ್ಪಾಜಿ ಅವರ ಮೇಲಿನ ಅಭಿಮಾನದಿಂದ ಇಷ್ಟೊಂದು ಸಂಖ್ಯೆಯಲ್ಲಿ ಸೇರಿದ್ದು ಇವುಗಳೆಲ್ಲವನ್ನೂ ಮತಗಳಾಗಿ ಪರಿವರ್ತನೆ ಮಾಡಿದಾಗ ಅಪ್ಪಾಜಿಯ ಪ್ರೀತಿ ಎಷ್ಟಿತ್ತು ಎಂಬುದು ಈ ಸಭೆಯ ಮೂಲಕ ಸಾಬೀತಾಗಿ ಜನರಿಗೆ ಗೋತ್ತಾಗುತ್ತದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಜೆಡಿಎಸ್ ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್ ಮಾಜಿ ಶಾಸಕ ರಘುಪತಿ ಭಟ್ ಇನ್ನಿತರರಿದ್ದರು.