ಮನಸ್ಫೂರ್ತಿ, ಮನಸ್ಸಿಗೆ ಸ್ಫೂರ್ತಿ : ಸುಧೀಂದ್ರ

SUMMER-CAMP

(ಹೊಸ ನಾವಿಕ)
ಶಿವಮೊಗ್ಗ : ಮಾನಸಧಾರಾ ಟ್ರಸ್ಟ್(ರಿ), ಮನಸ್ಫೂರ್ತಿ ಕಲಿಕಾ ಕೇಂದ್ರ ಹಾಗೂ ನಮ್ಮ ಹಳ್ಳಿ ಥಿಯೇಟರ್ (ರಿ) ಆಶ್ರಯದಲ್ಲಿ ಮನಸ್ಫೂರ್ತಿ ಕಲಿಕಾ ಕೇಂದ್ರದ ಸಭಾಂಗಣದಲ್ಲಿ ಮುದ್ದು ಮಕ್ಕಳ ನಲಿದಾಟಕ್ಕೊಂದು ವೇದಿಕೆ ಎಂಬ ಘೋಷವಾಕ್ಯದೊಂದಿಗೆ ಬೇಸಿಗೆ ಶಿಬಿರವನ್ನು ಉದ್ಘಾಟಿಸಲಾಯಿತು.
ಸಮಾರಂಭದ ಉದ್ಘಾಟಿಸಿ ಮಾತನಾಡಿ ಡಾ.ಸುಧೀಂದ್ರ ಅವರು, ಮನಸ್ಫೂರ್ತಿ, ಮನಸ್ಸಿಗೆ ಸ್ಫೂರ್ತಿ ಎಂದು ಶಬ್ದದ ವಿಶೇಷ ಅರ್ಥವನ್ನು ವಿವರಿಸಿದರು. ಈ ಮನಸ್ಫೂರ್ತಿಗೆ ಉತ್ತಮ ಪ್ರೇರಣೆ ನೀಡುವಲ್ಲಿ ಡಾ.ಅಶೋಕ್ ಪೈರವರ ಪಾತ್ರವನ್ನು ಹಾಗೂ ಅವರ ಸಮಾಜಮುಖಿ ಚಿಂತನೆಗಳನ್ನು ಸ್ಮರಿಸಿದರು. ಅಂತಹ ಮಹಾನುಭಾವರ ಸ್ಫೂರ್ತಿಯನ್ನು ತುಂಬಿಕೊಂಡು ಈ ಶಿಬಿರದ ಸದುಪಯೋಗವನ್ನು ಪಡೆದು ಕೊಳ್ಳುವಂತೆ ಶಿಬಿರಾರ್ಥಿಗಳನ್ನು ಹುರಿದುಂಬಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ.ವಿದ್ಯಾ ರಘುನಾಥ್ ಅವರು ಮಕ್ಕಳಿಗೆ ಸ್ಫೂರ್ತಿದಾಯಕ ಕಥೆಯನ್ನು ಹೇಳಿದರು. ಕಥೆಯಲ್ಲಿ ಬರುವ ರಾಜನ ಮೂರನೇ ಮಗನ ಬುದ್ಧಿವಂತಿಕೆಯನ್ನು ಹೊಗಳಿ ನಾವೂ ಸಹ ಸಮಯಕ್ಕೆ ತಕ್ಕಂತೆ ನಮ್ಮ ಬುದ್ಧಿಯನ್ನು ಉಪಯೋಗಿಸಿ ಅಲ್ಪ ಸಮಯದ ಶಿಬಿರದಲ್ಲಿ ಕಲಿಸುವ ಕೌಶಲ್ಯಗಳಲ್ಲಿ ನೈಪುಣ್ಯತೆ ಪಡೆಯಲು ಸಲಹೆ ನೀಡಿದರು.
ನಮ್ಮ ಹಳ್ಳಿ ಥಿಯೇಟರ್ ಅಧ್ಯಕ್ಷ ಚೇತನ್ ರಾಯನಹಳ್ಳಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ೧೫ ದಿನಗಳ ಶಿಬಿರದಲ್ಲಿ ನೀಡಲಾಗುವ ತರಬೇತಿಗಳ ಬಗ್ಗೆ ವಿವರಿಸಿದರು.
ಕು.ಗೌತಮಿ ಪ್ರಾರ್ಥಿಸಿ, ಶ್ರೀಮತಿ ರಂಗನಾಯಕಿ ಸ್ವಾಗತಿಸಿದರು. ಮಂಜುನಾಥ ಸ್ವಾಮಿ ನಿರೂಪಿಸಿದರು. ಶ್ರೀಮತಿ ಉಷಾ ಉಡುಪ ಇವರು ವಂದಿಸಿದರು.