ಏ.18: ಶಿವಮೊಗ್ಗ ಲೋಕಸಭಾ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ನಾಮಪತ್ರ ಸಲ್ಲಿಕೆ…
ಶಿವಮೊಗ್ಗ: ಏ.೧೮ರಂದು ರಾಮಣ್ಣಶ್ರೇಷ್ಟಿ ಪಾರ್ಕ್‌ನಿಂದ ಬೆಳಿಗ್ಗೆ ೯ಕ್ಕೆ ಮೆರವಣಿಗೆ ಹೊರಟು ಡಿಸಿ ಕಚೇರಿಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದು, ಮೋದಿ ಪ್ರಧಾನಿಯಾಗಲು ಕಮಲದ ಚಿಹ್ನೆಗೆ ಮತ ನೀಡುವಂತೆ ಮತ್ತು ನಾಮಪತ್ರ ಸಲ್ಲಿಕೆಯ ಮೆರವಣಿಗೆಯಲ್ಲಿ ಭಾಗವಹಿಸುವಂತೆ ಸಂಸದ ಬಿ.ವೈ. ರಾಘವೇಂದ್ರ ಕರೆ ನೀಡಿzರೆ.
ಇಂದು ನಗರದ ಬಂಟರ ಭವನ ದಲ್ಲಿ ೭ ಮತ್ತು ೮ನೇ ಶಕ್ತಿ ಕೇಂದ್ರದ ಮಹಿಳಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ನವರು ತಮ್ಮ ಸುಧೀರ್ಘ ಆಡಳಿತದ ಅವಧಿಯಲ್ಲಿ ಜನರನ್ನು ಮೂರ್ಖ ರನ್ನಾಗಿಸಿ ದೇಶವನ್ನಾಳಿದರು. ಅವರ ಆಡಳಿತದ ಅವಧಿಯಲ್ಲಿ ದೇಶದ ಆರ್ಥಿಕ ಸ್ಥಿತಿ ಹೇಗಿತ್ತು. ಶೈಕ್ಷಣಿಕ ಪ್ರಗತಿ ಹೇಗಿತ್ತು ಎಂಬುದನ್ನು ಮತದಾರ ಯೋಚಿಸಬೇಕು ಈಗ ಹತ್ತು ವರ್ಷಗಳ ಅವಧಿಯಲ್ಲಿ ಮೋದಿ ನೇತೃತ್ವದಲ್ಲಿ ದೇಶ ವಿಶ್ವದಲ್ಲಿ ಅಭಿವೃದ್ಧಿಯಲ್ಲಿ ೪ನೇ ಸ್ಥಾನದಲ್ಲಿದ್ದು, ೩ನೇ ಸ್ಥಾನದತ್ತ ದಾಪುಗಾಲು ಇಡುತ್ತಿದೆ. ನಾನು ಸಂಸದನಾಗಿ, ಶಿವಮೊಗ್ಗ ಕ್ಷೇತ್ರಕ್ಕೆ ಏನು ಮಾಡಿzನೆ ಎಂಬುದು ಎಲ್ಲ ಮತದಾರರಿಗೆ ತಿಳಿದಿದೆ. ಕೃಷಿ ಕಾಲೇಜು, ತೋಟಗಾರಿಕಾ ಕಾಲೇಜು, ಕೃಷಿ ಮತ್ತು ತೋಟಗಾರಿಕಾ ಯುನಿವರ್ಸಿಟಿ, ಆರ್ಯುವೇದ ಆಸ್ಪತ್ರೆ, ಆರ್ಯುವೇದ ವಿವಿ, ವೆಟರ್ನರಿ ಆಸ್ಪತ್ರೆ ಮತ್ತು ವಿದ್ಯಾಲಯ, ಕೇಂದ್ರೀಯ ವಿದ್ಯಾಲಯ, ರಾಷ್ಟ್ರೀಯ ರಕ್ಷ ವಿದ್ಯಾಲಯ, ಮೆಗ್ಗಾನ್ ಆಸ್ಪತ್ರೆ ಮೇಲ್ದರ್ಜೆಗೆ ಏರಿಸಿದ್ದು, ಕ್ಯಾನ್ಸರ್ ಆಸ್ಪತ್ರೆ ಶೀಘ್ರದ ಪ್ರಾರಂಭ ವಾಗುತ್ತಿದೆ. ಬಡ ಕುಟುಂಬಗಳಿಗೆ ೫ಲಕ್ಷದವರೆಗೆ ಉಚಿತ ಚಿಕಿತ್ಸೆ ನೀಡುವ ಆರೋಗ್ಯ ಕಾರ್ಡ್, ಕಡಿಮೆ ದರದಲ್ಲಿ ಔಷಧಿ ನೀಡುವ ಜನೌಷಧಿ ಕೇಂದ್ರ ಗಳು, ತಾಯಂದಿರಿಗೆ ಸ್ವಾವಲಂಭಿ ಬದುಕು ನೀಡಲು ಮೋದಿಜಿಯವರ ಕಾರ್ಯಕ್ರಮಗಳು ಶೇ.೩೩ರಷ್ಟು ಮೀಸಲಾತಿ. ಎಲ್ಲವು ಮೋದಿ ಸರ್ಕಾರದ ಕೊಡುಗೆ ಎಂದರು.
ಇತ್ತೀಚಿಗಷ್ಟೇ ವಿಮಾನ ನಿಲ್ದಾಣವಾಗಿದೆ. ೩೦ಕ್ಕೂ ಹೆಚ್ಚು ರೈಲುಗಳು ಶಿವಮೊಗ್ಗದಿಂದ ಓಡಾಡುತ್ತಿವೆ. ಜಲಜೀವನ್ ಮಿಷನ್, ಮುದ್ರಾ, ಜನ್‌ಧನ್ ಎಲ್ಲವು ದೇಶದ ಸಾಮಾನ್ಯ ನಾಗರಿಕರಿಗೆ ಅನುಕೂಲವಾದ ಯೋಜನೆಗಳು, ಎಲ್ಲವೂ ಬಿಜೆಪಿ ಸರ್ಕಾರದ ಕೊಡುಗೆ ಎಂದರು.
ಅಂದು ಬಿ.ಎಸ್.ವೈ. ಮುಖ್ಯಮಂತ್ರಿಗಳು ಆಗಿzಗ ನೀಡಿದ ಭಾಗ್ಯಲಕ್ಷ್ಮೀ ಬಾಂಡ್ ಈ ವರ್ಷದಲ್ಲಿ ಬಡ ಹೆಣ್ಣು ಮಗುವಿಗೆ ೧.೨೫ ಲಕ್ಷ ರೂ.ಗಳು ದೊರೆಯುತ್ತಿದೆ. ಕರೋನ ಸಂದರ್ಭದಲ್ಲಿ ಆಹಾರ ಸುರಕ್ಷತೆಗೆ ಜೊತೆಗೆ ದೇಶದ ಜನರಿಗೆ ವ್ಯಾಕ್ಸಿನ್ ನೀಡುವುದರ ಮೂಲಕ ಪ್ರಾಣ ಉಳಿಸಿದ ಪ್ರಧಾನಿ ಮೋದಿಯವರನ್ನು ಮತದಾರ ಮರೆತಿಲ್ಲ. ಮೇ ೭ರಂದು ಮತದಾನ ಮಾಡುವಾಗ ಮೋದಿಜೀ ಗೋಸ್ಕರ ಹಿಂದುತ್ವಕ್ಕಾಗಿ ಕಮಲದ ಚಿಹ್ನೆಗೆ ಮತ ನೀಡಿ, ಆಶೀರ್ವಾದ ಮಾಡಿ ಎಂದರು.
ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿ, ಬಿಜೆಪಿಯ ಪ್ರಾರಂಭದ ದಿನಗಳಲ್ಲಿ ಬಿಜೆಪಿ ಕಾರ್ಯಕರ್ತರನ್ನು ಕಾಂಗ್ರೆಸ್‌ನವರು ಗದರಿಸಿ ಕಳಿಸುತ್ತಿದ್ದರು. ಹ ಮಾಡಿದ್ದು ಇದೆ. ಒಂದು ಟೇಬಲ್ ಹಾಕಲು ಕೂಡ ಬಿಡುತ್ತಿರಲಿಲ್ಲ. ಆದರೆ ಇಂದು ಪರಿಸ್ಥಿತಿ ಬದಲಾಗಿದೆ ಎಂದರು.
ಗಲ್ಲಿಗಲ್ಲಿಗಳಲ್ಲಿ ಹಿಂದುಗಳು ಸುರಕ್ಷಿತವಾಗಿ ಇರಬೇಕಾದರೆ ಕೇಂದ್ರ ದಲ್ಲಿ ಬಿಜೆಪಿ ಸರ್ಕಾರ ಬರಬೇಕು. ಯಾರೊಬ್ಬರು ನಾನು ಹಿಂದು ಹುಲಿ ಎಂದು ಘರ್ಜಿಸಿದರೆ, ಅದು ಸರಿಯಲ್ಲ, ಮೊದಲ ಹಿಂದು ಹುಲಿ ೧೯೨೫ರಲ್ಲಿ ನಮ್ಮ ಹಿಂದು ರಾಷ್ಟ್ರ ಎಂದು ಘರ್ಜಿಸಿದ ಆರ್‌ಎಸ್‌ಎಸ್ ಸ್ಥಾಪಕ ಡಾ. ಹೆಗಡೆವಾರ್ ಆಗಿzರೆ ಎಂದು ಅವರು ಹೇಳಿದರು.
ಶಿವಮೊಗ್ಗ ಬಾಂಬ್ ತಯಾರಕರು ಇzರೆ. ಪಾಕಿಸ್ತಾನ ಜಿಂದಾಬಾದ್ ಎಂದು ಹೇಳಿದವರು ದೇಶ ಪ್ರೇಮಿ ಗಳು ಎಂದು ಹೇಳಿದ ಸರ್ಕಾರವಿದೆ. ಭಾರತ ಭಾರತವಾಗಿ ಉಳಿಯ ಬೇಕಾದರೆ, ಬಿಜೆಪಿ ಸರ್ಕಾರ ಮತ್ತೊಮ್ಮೆ ಬರಲೇಬೇಕು, ಶಿವಮೊಗ್ಗ ಕ್ಷೇತ್ರದಲ್ಲಿ ನಿಮ್ಮೆಲ್ಲರ ಅಚ್ಚುಮೆಚ್ಚಿನ ಬಿವೈಆರ್ ಅವರನ್ನು ಗೆಲ್ಲಿಸಿ ಎಂದರು.
ಭಾನುಪ್ರಕಾಶ್, ಮಹಿಳಾ ಮೋರ್ಚಾ ಜಿಧ್ಯಕ್ಷೆ ಗಾಯತ್ರಿ ಮಲ್ಲಪ್ಪ, ರಶ್ಮಿ ಶ್ರೀನಿವಾಸ್, ವಿಶ್ವನಾಥ್, ಶಾಂತ ಸುರೇಂದ್ರ, eನೇಶ್ವರ್, ಮೋಹನ್‌ರೆಡ್ಡಿ, ಜಗದೀಶ್ ಮತ್ತಿತರರು ಇದ್ದರು.