ನಂದಿಪುರದ ಶ್ರೀ ಚರಂತಪ್ಪಜ್ಜ ಸ್ವಾಮೀಜಿಯವರ ೨೦ನೇ ಪುಣ್ಯ ಸ್ಮರಣೋತ್ಸವ – ಸಾಧಕರಿಗೆ ಪ್ರಶಸ್ತಿ ಪ್ರಧಾನ…

PUNYA-SMARANE

ಬೆಂಗಳೂರು: ನಗರದ ಶಿವಾನಂದ ವೃತ್ತದ ಕುಮಾರಕೃಪ ರಸ್ತೆಯ ಗಾಂಧಿಭವನದಲ್ಲಿ ವಿಜಯ ನಗರ ಜಿ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಪುಣ್ಯಕ್ಷೇತ್ರ ನಂದಿಪುರದ ಮಹಾಮಹಿಮ ಪರಮಪೂಜ್ಯ ಶ್ರೀಗುರು ಚರಂತಪ್ಪಜ್ಜ ಮಹಾ ಸ್ವಾಮಿಗಳವರ ೨೦ನೇ ಪುಣ್ಯ ಸ್ಮರಣೋತ್ಸವ ಏ.೭ರ ನಾಳೆ ಬೆಳಿಗ್ಗೆ ೧೦.೩೦ಕ್ಕೆ ಜರುಗುವುದು.


ಬೆಂಗಳೂರಿನ ಶ್ರೀ ಗುರುದೊಡ್ಡ ಬಸವೇಶ್ವರ ಸೇವಾ ಸಮಿತಿಯು ಆಯೋಜಿಸಿರುವ ಶ್ರೀಗುರು ಚರಂತಪ್ಪಜ್ಜ ಮಹಾಸ್ವಾಮಿಗಳವರ ೨೦ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಶಿವಗಂಗೆಯ ಮೇಲಣ ಗವಿಮಠದ ಡಾ. ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ, ಬಳ್ಳಾರಿಯ ಕಮ್ಮರಚೇಡು ಮಠದ ಕಲ್ಯಾಣ ಸ್ವಾಮೀಜಿ, ಕೊಂಚೂರು ಶ್ರೀ ಸವಿತಾ ಪೀಠ ಮಹಾಸಂಸ್ಥಾನದ ಶ್ರೀ ಸವಿತಾನಂದನಾಥ ಸ್ವಾಮೀಜಿ, ಬೆಣ್ಣಿಹಳ್ಳಿ ಹಿರೇಮಠದ ಪಂಚಾಕ್ಷರಿ ಸ್ವಾಮೀಜಿ, ಗದ್ದಿಕೆರೆ ಹಿರೇಮಠದ ಅಭಿನವ ಚರಂತೇಶ್ವರ ಸ್ವಾಮೀಜಿ, ಆಂಧ್ರದ ಜಂಗಮರ ಹೊಸಹಳ್ಳಿಯ ಅಜತ ಶಂಭುಲಿಂಗ ಸ್ವಾಮೀಜಿ ದಿವ್ಯಸಾನಿಧ್ಯ ವಹಿಸುವರು.
ವಿಜಯನಗರ ಶ್ರೀ ಕಷ್ಣದೇವ ರಾಯ ವಿವಿ ಉಪಕುಲಪತಿ ಪ್ರೊ.ಕೆ.ಎಂ.ಮೇತ್ರಿಯವರು ನಾಡಿನ ಹೆಸರಾಂತ ಸಾಹಿತಿ ಎಸ್. ವಿ. ಪಾಟೀಲ ಗುಂಡೂರು ವಿರಚಿತ ೫೫೧ನೇ ಕೃತಿ ನಡೆದಾಡುವ ದೇವರು ಭಾಗ-೨ ಮತ್ತು ಬಾಲ ಚರಂತೇಶ್ವರ (ಭಕ್ತಿ ಪ್ರಧಾನ ನಾಟಕ) ಗ್ರಂಥಗಳನ್ನು ಲೋಕಾರ್ಪಣೆಗೊಳಿಸಲಿದ್ದು, ಅಭಿಜತ ಕನ್ನಡ ಸಂಶೋಧನಾ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕ ಡಾ.ಕೊಟ್ರಸ್ವಾಮಿ ಎ.ಎಂ.ಎಂ. ಗ್ರಂಥಾವಲೋಕನ ಮಾಡುವರು.
ಖ್ಯಾತ ಹೃದಯತಜ್ಞರಾದ ಡಾ| ಮಂಜುನಾಥ, ಡಾ.ಮಹಾಂತೇಶ ಚರಂತಿಮಠ, ಪತ್ರಕರ್ತ ಅಜಿತ್ ಹನುಮಕ್ಕನವರ್, ಮಾಜಿ ಸಚಿವ ಎನ್‌ಎಂಕೆ, ಸೋಗಿ, ನಟ ಹಾಗೂ ಗಾಯಕರಾದ ಜ್ಯೂನಿಯರ್ ಡಾ.ರಾಜಕುಮಾರ್, ತುಮಕೂರು ಲೇಖಕಿ ಮೀನಾಕ್ಷಿ ಕಂಡಿಮಠ, ರಂಗತಜ್ಞರಾದ ಶ್ರೀಮತಿ ಹೆಲನ್ , ಕಿತ್ತೂರು ಚನ್ನಮ್ಮ ರಾಜ್ಯಪ್ರಶಸ್ತಿ ವಿಜೇತೆ ಡಾ.ವಾಣಿಶ್ರೀ ಪಾಟೀಲ್ ಇವರಿಗೆ ಚರಂತಾರ್ಯಶ್ರೀ ಪ್ರಶಸ್ತಿ ಪ್ರದಾನವಾಗುವುದು.