ಯಕ್ಷಗಾನ ಕಲಾವಿದರಿಂದ ಮತದಾನ ಜಾಗೃತಿ…

theerthahalli-sveep

ಶಿವಮೊಗ್ಗ: ತೀರ್ಥಹಳ್ಳಿ ತಾಪಂ, ಪಪಂ ಹಾಗೂ ತಾಲ್ಲೂಕು ಸ್ವೀಪ್ ಸಮಿತಿ ವತಿಯಿಂದ ತೀರ್ಥಹಳ್ಳಿ ಪಟ್ಟಣದಲ್ಲಿ ಯಕ್ಷಗಾನ ಕಲಾವಿದರು ಮತ್ತು ವಾದ್ಯಗೋಷ್ಟಿ ಯೊಂದಿಗೆ ವಿನೂತನವಾಗಿ ಮತದಾನದ ಕುರಿತು ಸಾರ್ವಜನಿಕ ರಲ್ಲಿ ಜಾಗೃತಿ ಮೂಡಿಸಿದರು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶೈಲಾ.ಎನ್ ರವರು ಪ್ರಜಪ್ರಭುತ್ವ ಹಾಗೂ ಮತದಾನದ ಮಹತ್ವವನ್ನು ಕುರಿತು ಮಾತನಾಡಿ, ಚುನಾವಣೆ ಪರ್ವ ದೇಶದ ಗರ್ವ ಎಂಬ ಘೋಷ ವಾಖ್ಯದೊಂದಿಗೆ ಕಾರ್ಯಕ್ರಕ್ಕೆ ಚಾಲನೆ ನೀಡಿದರು.
ಇಂದಿನ ಸ್ವೀಪ್ ಕಾರ್ಯಕ್ರಮ ದಲ್ಲಿ ಯಕ್ಷಗಾನ ಕಲಾವಿದರು ಹಾಗೂ ವಾದ್ಯ ಗೋಷ್ಟಿಯವರು ವಿಶೇಷವಾಗಿ ಎಲ್ಲರ ಗಮನ ಸೆಳೆದು ಮತದಾನ ಜಗತಿ ಮೂಡಿಸಿದರು. ಹಾಗೂ ಪೊಲೀಸ್ , ಅಗ್ನಿ ಶಾಮಕ, ಮೆಸ್ಕಾಂ, ಅರಣ್ಯ, ಇಲಾಖೆಯ ಸಿಬ್ಬಂದಿಯವರು ಭಾಗವಹಿಸಿ ಮತದಾನದ ಮಹತ್ವ ಕುರಿತು ತಿಳಿಸಿದರು.
ತೀರ್ಥಹಳ್ಳಿ ಪಟ್ಟಣದ ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಯ ಸಿಬ್ಬಂದಿಯವರು, ಪಪಂ ಮುಖ್ಯಾಧಿಕಾರಿ ಬಸವರಾಜ್, ಗ್ರಾಮ ಪಂಚಾಯಿತಿಯ ಅಭಿವೃದ್ದಿ ಅಧಿಕಾರಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಸ್ಕೌಟ್ ಆಂಡ್ ಗೈಡ್ಸ್, ಸಮಾಜಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯ ವಸತಿ ನಿಲಯದ ವಿದ್ಯಾರ್ಥಿಗಳು(ಯುವ ಮತದಾರರು) ಕಾರ್ಯಕ್ರದ ಕೇದ್ರ ಬಿಂದುಗಳಾದರು. ಕರ್ನಾಟಕದ ಸಾಂಪ್ರದಾಯಿಕ ಕಲಾ ಪ್ರಕಾರಗಳಲ್ಲಿ ಅತ್ಯಂತ ಪ್ರಮುಖವಾದದ್ದು ಯಕ್ಷಗಾನ. ಯಕ್ಷಗಾನ ಕಲಾವಿದರು ತಮ್ಮದೇ ಆದ ಶೈಲಿಯಲ್ಲಿ ಮೇ ೭ನೇ ತಾರೀಕಿನಂದು ತಪ್ಪದೇ ಮತದಾನ ಮಾಡಲು ಮತದಾರರಿಗೆ ಕರೆ ನೀಡಿದರು.
ಸ್ವೀಪ್ ಮೆರವಣಿಗೆಯು ವಾದ್ಯ ಗೋಷ್ಟಿಯೊಂದಿಗೆ ಪ್ರಾರಂಭ ವಾಗಿ ಯಕ್ಷಗಾನ ಕಲಾವಿದರು ಹಾಗೂ ಬೈಕ್ ರ್‍ಯಾಲಿ ಸವಾರರು ಪಟ್ಟಣದ ಪ್ರಮುಖ ಸ್ಥಳಗಳಾದ ಕೊಪ್ಪ ವತ್ತ, ಗಾಂಧಿ ಚೌಕ, ಆಗುಂಬೆ ವತ್ತದ ಮೂಲಕ ಸಂಚರಿಸಿ ಗ್ರಾಮೀಣಾಭಿವೃದ್ದಿ ಭವನವನವನ್ನು ತಲುಪಿ ಭಾರತದ ನಕ್ಷೆಯ ಮೇಲೆ ಮೇಣದ ಬತ್ತಿಯನ್ನು ಬೆಳಗಿಸಿ ಮತದಾರ ಪ್ರತಿeವಿಧಿಯನ್ನು ಬೋಧಿಸಿ ಕಡ್ಡಾಯವಾಗಿ ಮತದಾನ ಮಾಡಿ ಎಂಬ ಸಂದೇಶವನ್ನು ನೀಡಿ ಮತದಾನದ ಜಾಗೃತಿ ಗೀತೆಯಾದ ನಾ ಭಾರತ ಗೀತೆಯನ್ನು ನುಡಿಸಿದರು.