ಸಾವಯವ ಕೃಷಿಯೋಗಿ ನಂದಿಪುರದ ಮಹೇಶ್ವರ ಸ್ವಾಮೀಜಿ …

SHREEGALU--VYVASAYA

ನಂದಿಪುರ ಪುಣ್ಯಕ್ಷೇತ್ರದ ಸರಳ ಸಜ್ಜನಿಕೆಯ ಮಹೇಶ್ವರ ಸ್ವಾಮೀಜಿ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಗಳೊಂದಿಗೆ ಸಾವಯವ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿzರೆ.
ವಿಜಯನಗರ ಜಿ ಹಗರಿಬೊಮ್ಮನಹಳ್ಳಿ ತಾಲೂಕಿನ ನಂದಿಪುರ ಪುಣ್ಯಕ್ಷೇತ್ರದ ಮಹೇಶ್ವರ ಸ್ವಾಮೀಜಿಯವರಿಗೆ ಕೃಷಿಕಾಯಕದ ಮೇಲೆ ಎಲ್ಲಿಲ್ಲದ ಒಲವು. ಹನ್ನೆರಡನೆಯ ಶತಮಾನದ ಕ್ರಾಂತಿಯೋಗಿ ಬಸವಣ್ಣನವರ ಕಾಯಕವೇ ಕೈಲಾಸ ಎಂಬ ನಿಲುವನ್ನು ಇವರು ಅಳವಡಿಸಿಕೊಂಡಿzರೆ. ಶ್ರೀ ಮಠದ ಧಾರ್ಮಿಕ ಕಾರ್ಯಗಳ ಜೊತೆಗೆ ತಾವೇ ಮಠದ ಜಮೀನಿಗೆ ಇಳಿದು ಕೃಷಿ ಕಾಯಕದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ಹಲವಾರು ಪ್ರಗತಿಪರ ರೈತರಿಗೆ ಮಾರ್ಗದರ್ಶಕರಾಗಿzರೆ.
ಹಗರಿಬೊಮ್ಮನಹಳ್ಳಿ ತಾಲೂಕಿನ ಗದ್ದಿಕೆರೆ ಗ್ರಾಮದಲ್ಲಿ ಕ್ರಿ.ಶ.೧೫ನೇ ಶತಮಾನದಲ್ಲಿ ಮಹಾಮಹಿಮ ದೊಡ್ಡಬಸವೇಶ್ವರರು ಜೀವಿಸಿದ್ದರು. ಜೀವ ಸಮಾದಿಗೆ ಹೋಗುವಾಗ ಭಕ್ತರಿಗೆ ಸಕಲ ಜೀವಿಗಳ ಉzರಕ್ಕಾಗಿ ಮತ್ತೆ ಅವತರಿಸಿ ಬರುತ್ತೇನೆ ಎಂದು ಮಾತು ಕೊಟ್ಟಿದ್ದ ಮಹಾ ಮಹಿಮಾ ಪುರುಷರು. ಶ್ರೀಗುರು ಕೊಟ್ಟೂರೇಶ್ವರರ ಸಮಕಾಲಿನರು. ಅವರು ಕೊಟ್ಟ ಮಾತಿನಂತೆ ಪೂಜ್ಯ ಚರಂತಪ್ಪಯ್ಯ ಮಹಾ ಸ್ವಾಮಿಗಳ ಸ್ವರೂಪದಿ ಅವತರಿಸಿ, ಪೂರ್ಣ ಚೈತನ್ಯವೇ ಅವರಾಗಿದ್ದರು.
ನಂತರ ೧೯೮೫ರಲ್ಲಿ ಹಗರಿಬೊಮ್ಮನಹಳ್ಳಿ ತಾಲೂಕಿನ ನಂದಿಪುರ ಸುಕ್ಷೇತ್ರದಲ್ಲಿ ಶ್ರೀಗುರು ದೊಡ್ಡಬಸವೇಶ್ವರ ಸ್ವಾಮಿಯ ಪುಣ್ಯಕ್ಷೇತ್ರವನ್ನು ನಿರ್ಮಿಸಿ, ಭಕ್ತೋzರ ಕಾರ್ಯವನ್ನು ನಡೆಸಿಕೊಂಡು ಬಂದಿದ್ದರು. ಈಗ ಅವರ ಚಿರಂಜೀವಿ ಮಹೇಶ್ವರ ಸ್ವಾಮೀಜಿಯವರು ಪೂಜ್ಯ ಚರಂತಪ್ಪಯ್ಯನವರ ಕಾರ್ಯಗಳನ್ನು ಮುಂದುವರೆಸಿಕೊಂಡು ಬರುವುದರ ಜೊತೆಗೆ ಅವರ ಸಂಕಲ್ಪಗಳನ್ನು ಕಾರ್ಯಗತಗೊಳಿಸುತ್ತಾ ಬಂದಿzರೆ. ನಮ್ಮ ದೇಸಿ ತಳಿಯ ಗೋಶಾಲೆ, ಉಚಿತ ಆದರ್ಶ ಸಾಮೂಹಿಕ ವಿವಾಹ, ಶೈಕ್ಷಣಿಕ, ಕೃಷಿ ಕ್ರಾಂತಿಯಂತಹ ಅಭೂತಪೂರ್ವ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿzರೆ.
ಪೂಜ್ಯ ಚರಂತಪ್ಪಜ್ಜನವರ ಕನಸುಗಳನ್ನು ಮಹೇಶ್ವರ ಸ್ವಾಮೀಜಿಯವರು ಸಾಕಾರಗೊಳಿಸಿತ್ತಾ ಬಂದಿzರೆ. ಅಲ್ಲದೆ ಇಸ್ರೇಲ್ (ಹೈಡ್ರೋಫೋನಿಕ್) ಮಾದರಿಯ ತರಕಾರಿ ಬೆಳೆಯುವ ಯೋಜನೆಯನ್ನು ಯಶಸ್ವಿಗೊಳಿಸಿzರೆ. ಮಠಾಧೀಶರ ಧರ್ಮ ಪರಿಷತ್ತಿನೊಂದಿಗೆ ಅಭೂತಪೂರ್ವ ಕಾರ್ಯಗಳಲ್ಲಿ ತೊಡಗಿ, ಮಾನವ ಕಲ್ಯಾಣಕ್ಕಾಗಿ ಶ್ರಮಿಸುತ್ತಿzರೆ. ಸಾಮಾಜಿಕ ಕಾಳಜಿಯೊಂದಿಗೆ ಸರ್ವರಿಗೂ ಸ್ಪಂದಿಸಿ, ಸಮಾಜೋzರದ ಕಾರ್ಯಗಳಲ್ಲಿ ತೊಡಗಿzರೆ. ಗ್ರಾಮೀಣ ಭಾಗದ ಬಡ ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರದಲ್ಲಿಯೇ ಶ್ರೀಗುರು ಚರಂತೇಶ್ವರ ವಿದ್ಯಾಸಂಸ್ಥೆಯಿಂದ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಹಾಗೂ ಅನ್ನದಾನ ನೀಡುತ್ತಾ ಬಂದಿzರೆ. ಈ ಸಂಸ್ಥೆಯ ಕಾರ್ಯ ಸಮಾಜಕ್ಕೆ ಮಾದರಿಯಾಗಿದೆ.
ಗ್ರಾಮೀಣ ಭಾಗದ ಯುವಕರು ಕೃಷಿಯಿಂದ ದೂರ ಸರಿದು ನಗರದತ್ತ ಮುಖ ಮಾಡಿರುವ ಈ ಸಂದರ್ಭದಲ್ಲಿ ಸ್ವಾಮೀಜಿಗಳ ಈ ಸಾವಯವ ಕೃಷಿಯ ಪ್ರೀತಿ ಕಂಡರೆ ಅಚ್ಚರಿಯೊಂದಿಗೆ ಸಂತಸವೂ ಆಗುತ್ತದೆ.
ಶ್ರೀಮಠದ ಜಮೀನಿನಲ್ಲಿ ಕಡಿಮೆ ನೀರಿನ ೫೦೦ ನುಗ್ಗೆ, ೫೦೦ ಮಹಾಗನಿ, ೩೦೦ ತೆಂಗು, ೫೦೦ ಶ್ರೀಗಂಧ, ೨೫೦ ರಕ್ತ ಚಂದನ ಅಲ್ಲದೆ ವಿವಿಧ ಸೊಪ್ಪು, ತರಕಾರಿಯಂತಹ ಸಾಂಪ್ರದಾಯಿಕ ಬೆಳೆಗಳನ್ನು ಬೆಳೆದಿzರೆ.
ಕರ್ನಾಟಕ- ಮಹಾರಷ್ಟ್ರ ಗಡಿಭಾಗದ ಕನ್ಹೇರಿ ಮಠದ ಶ್ರೀಗಳವರ ಸಾವಯವ ಕೃಷಿಯನ್ನು ಅನುಸರಿಸಿ, ಇಲ್ಲಿನ ಬೆಳೆಗಳಿಗೆ ಸಾವಯವ ಗೊಬ್ಬರವನ್ನು ಉಪಯೋಗಿಸುವರು. ಗೋ-ಕಪಾಮೃತ, ಗೋ-ನಂದಾಜಲ ತಯಾರಿಸುವರು. ರೈತರಿಗೆ ಸಾವಯವ ಕೃಷಿಯ ಕುರಿತು ಮಾಹಿತಿ ಒದಗಿಸುವರು.
ಶ್ರೀಗಳು ಉತ್ತಮ ಬೆಳೆ ಬೆಳೆಯಲು ಸುತ್ತ ಮುತ್ತಲಿನ ರೈತರಿಗೂ ಪ್ರೋತ್ಸಾಹ ಹಾಗೂ ಮಾರ್ಗದರ್ಶಕರಾಗಿzರೆ. ಗೋವುಗಳನ್ನು ಸಂರಕ್ಷಿಸುವುದಕ್ಕಾಗಿ ಶ್ರೀ ಮಠದಲ್ಲಿ ಗೋಶಾಲೆಯನ್ನು ಪ್ರಾರಂಭಿಸಿ, ನಮ್ಮ ದೇಸೀಯ ತಳಿಯ ೧೧೦ ಗೋವುಗಳನ್ನು ಸಾಕಿzರೆ. ಸ್ವತಃ ತಾವೆ ಗೋವುಗಳಿಗೆ ಮೇವು, ಆಹಾರ ಉಣಿಸುತ್ತಾರೆ. ದೇಸೀಯ ಗೋವುಗಳ ಸಗಣಿಯಿಂದ ವಿಭೂತಿಯನ್ನು ಇಲ್ಲಿ ತಯಾರಿಸಲಾಗುತ್ತದೆ.
ಅನೇಕ ಕಾಯಿಲೆಗಳಿಗೆ ಗೋಸಂಜೀವಿನಿ, ಗೋಅರ್ಕ ಮುಂತಾದ ಔಷಧಿಗಳನ್ನು ಜೇನು ಸಾಕಾಣಿಕೆ, ಗೋವುಗಳಿಂದ ಜೀವಾಮತ, ಗೋಮೂತ್ರ, ಗೋಕಪಾಮತ, ಎರೆಹುಳು ಗೊಬ್ಬರ ತಯಾರಿಸುವುದರ ಜೊತೆಗೆ ನಮ್ಮ ಸನಾತನ ಸಂಸ್ಕೃತಿಯ ವ್ಯವಸಾಯವನ್ನು ಉಳಿಸಿ, ಬೆಳೆಸುತ್ತಿzರೆ. ಹೀಗೆ ರೈತಪರ ಹಲವಾರು ಚಟುವಟಿಕೆಗಳ ಮೂಲಕ ಕಾಯಕಯೋಗಿ ಎನಿಸಿಕೊಂಡಿzರೆ.
ಜಮೀನಿನಲ್ಲಿ ಎತ್ತುಗಳಿಂದ ರಂಟೆ, ಕುಂಟೆ ಕಾರ್ಯ ಮಾಡುವರು. ಟ್ರ್ಯಾಕ್ಟರ್ ಮೂಲಕವೂ ವ್ಯವಸಾಯದ ಕೆಲಸ ಮಾಡುತ್ತಾರೆ. ಸ್ವತಃ ಶ್ರೀಗಳೇ ಮಾಸ್ಕ್ ಹಾಕಿಕೊಂಡು ಬೆಳೆಗಳಿಗೆ ಔಷಧಿ ಸಿಂಪಡಿಸುವರು. ಬೆಳಿಗ್ಗೆ ಮತ್ತು ಸಂಜೆ ಜಮೀನಿನ ಕಡೆ ಒಮ್ಮೆ ಹೋಗಿ ಬಂದರೆ ಸಂತೋಷವಾಗುತ್ತದೆ. ಹಲವು ಕೃಷಿ ಪ್ರಯೋಗಗಳನ್ನು ಕೈಗೊಳ್ಳುತ್ತಾರೆ.
ಬೆಂಗಳೂರಿನ ಮದರ್ ತೆರೆಸಾ ವಿಶ್ವ ವಿದ್ಯಾಲಯವು ಶ್ರೀಗಳ ಸಾಮಾಜಿಕ ಕಾರ್ಯದ ನಿಸ್ವಾರ್ಥ ಮನೋಭಾವ ಜೀವಮಾನದ ಸಾಧನೆ ಪರಿಗಣಿಸಿ ಗೌರವ ಡಾಕ್ಟರೇಟ್ ಪದವಿ ನೀಡಿರುವುದನ್ನು ನಾವಿಲ್ಲಿ ಸ್ಮರಿಸಬಹುದು. ಕೃಷಿಗೆ ಸಂಬಂಧಿಸಿದ ಅನೇಕ ವಿಚಾರ ಸಂಕಿರಣಗಳನ್ನು ಆಯೋಜಿಸಿ, ರೈತರಿಗೆ ದಾರಿದೀಪವಾಗಿzರೆ.
ಶ್ರೀಮಠದ ಬಿಲ್ವ ಪತ್ರಿವನದಲ್ಲಿನ ಗಿಡದ ಬುಡದಲ್ಲಿ ಮಣ್ಣಿನ ಮಡಿಕೆಯ ಬಟ್ಟಲುಗಳನ್ನು ಅಳವಡಿಸಲಾಗಿದೆ. ಪೈಪಿನ ಮುಖಾಂತರ ಬರುವ ನೀರು ಬಟ್ಟಲನ್ನು ತುಂಬಿ ಗಿಡಗಳಿಗೆ ಸಾಗುವುದು. ಬಟ್ಟಲಿನಲ್ಲಿಯ ನೀರು ಅಲ್ಲಿನ ಪಕ್ಷಿಗಳ ದಾಹವನ್ನು ತಣಿಸಲು ಸಹಾಯವಾಗಿದೆ. ವಿವಿಧ ಜತಿಯ ಔಷಧಿಯ ಸಸ್ಯಗಳ ಪವಿತ್ರವನವೂ ಇದೆ.
ಹೀಗೆ ಶ್ರೀಗಳು ಪ್ರಾಣಿ-ಪಕ್ಷಿಗಳ ಪ್ರೇಮಿಯಾಗಿzರೆ. ಶ್ರೀಮಠದಲ್ಲಿ ಜಿಂಕೆ, ಮೊಲ, ಬಾತು ಕೋಳಿ, ಪಾರಿವಾಳಗಳನ್ನು ಸಾಕಲಾಗಿದೆ. ಬಣ್ಣ ಬಣ್ಣದ ಈ ಪಕ್ಷಿಗಳ ಸೌಂದರ್ಯ ಮತ್ತು ಕಲರವ ಮನಸ್ಸಿಗೆ ಸಂತಸ ತರುತ್ತವೆ.
ಈ ಭರತಭೂಮಿಯ ಮಣ್ಣಿನಲ್ಲಿ ಅನ್ನ ಮತ್ತು ಚಿನ್ನವಿದೆ, ಸರಿಯಾಗಿ ಬಳಸಿಕೊಂಡರೆ ಕುಚೇಲನೂ ಕುಭೇರನಾಗಬಹುದು. ಅತಿಯಾಸೆಯಿಂದ ರಾಸಾಯನಿಕ ಗೊಬ್ಬರ ಹಾಗೂ ಕ್ರಿಮಿನಾಶಕಗಳನ್ನು ಹೆಚ್ಚಾಗಿ ಬಳಸಿದರೆ ಆಹಾರಧಾನ್ಯ, ಹಣ್ಣು ಹಾಗೂ ತರಕಾರಿಗಳು ವಿಷವಾಗುತ್ತವೆ. ನಮ್ಮ ಭೂಮಿಯನ್ನು ವಿಷವಾಗಿಸದೆ, ಸಾವಯವ ಕಷಿ ಮಾಡುತ್ತಾ ರೈತರು ಯಶಸ್ವಿಯಾಗಲಿ ಎನ್ನುತ್ತಾರೆ ಪೂಜ್ಯಶ್ರೀ ಡಾ|ಮಹೇಶ್ವರ ಮಹಾಸ್ವಾಮಿಗಳು.
ಇಂತಹ ಧಾರ್ಮಿಕ ಪರಂಪರೆಯೊಂದಿಗೆ ಸಾವಯವ ಕೃಷಿಯ ಕಾರ್ಯದಲ್ಲಿ ತೊಡಗಿರುವ ಪೂಜ್ಯರು ನಮ್ಮನ್ನೆಲ್ಲ ಹರಸಲಿ, ಸಾವಯವ ಕೃಷಿ ನಾಡಿಗೆ ವರದಾನವಾಗಲಿ. ಸರ್ವರ ಬಾಳು ಹಸನಾಗಲಿ. ನಮ್ಮೆಲ್ಲರಿಗೂ ಶ್ರೀಗಳು ಶುಭಾಶೀರ್ವಾದವನ್ನು ದಯಪಾಲಿಸಲಿ. ನಾವೆ ಆ ಮಹಾ ಮಹಿಮರ ಕಪೆಗೆ ಪಾತ್ರರಾಗೋಣ.
ಹೆಚ್.ಎಂ.ಗುರುಬಸವರಾಜಯ್ಯ