D28-HLRP1A

ಹೊನ್ನಾಳಿ: ತಾಲೂಕಿನ ಸುಂಕದಕಟ್ಟೆ ಗ್ರಾಮದಲ್ಲಿ ಗುರುವಾರ ಬೆಳಗಿನ ಜವ ೪.೩೦ಕ್ಕೆ ಶ್ರೀ ನರಸಿಂಹ ಸ್ವಾಮಿ ದೊಡ್ಡ ರಥೋತ್ಸವ ಭಕ್ತರ ಜಯಘೋಷದ ಮಧ್ಯೆ ವಿಜಂಭಣೆಯಿಂದ ನೆರವೇರಿತು. ವಿವಿಧ ವಾದ್ಯಮೇಳ ಗಳ ಮಂಗಳಘೋಷ ರಥೋತ್ಸವದ ಸಂಭ್ರಮಕ್ಕೆ ಮೆರುಗು ನೀಡಿತು. ಅಲಂಕತ ರಥಕ್ಕೆ ಭಕ್ತರು ಮಂಡಕ್ಕಿ, ಮೆಣಸಿನಕಾಳು, ಬಾಳೆಹಣ್ಣು ಎಸೆಯುವ ಮೂಲಕ ತಮ್ಮ ಭಕ್ತಿ ಸಮರ್ಪಿಸಿದರು.
ಸಂಜೆ ಓಕುಳಿ ಉತ್ಸವ ನೆರವೇ ರಿತು. ಯುವಕರು ಒಬ್ಬರಿಗೊಬ್ಬರು ಬಣ್ಣ ಎರಚುತ್ತಾ ಸಂಭ್ರಮಿಸಿದರು. ಬಳಿಕ ಮಣೇವು (ಭೂತನ ಸೇವೆ) ಜರುಗಿತು.
ರಥೋತ್ಸವಕ್ಕೆ ದಾವಣಗೆರೆ, ಶಿವಮೊಗ್ಗ, ಹಾವೇರಿ ಜಿ ಸೇರಿದಂತೆ ತಾಲೂಕಿನಾದ್ಯಂತ ಭಕ್ತಾದಿಗಳು ಬುಧವಾರ ರಾತ್ರಿಯೇ ಆಗಮಿಸಿದ್ದರು. ಮತ್ತೆ ಕೆಲವರು ಗುರುವಾರ ಬೆಳಗ್ಗೆ ಆಗಮಿಸಿದರು. ಹರಕೆ ಹೊತ್ತ ಭಕ್ತರು ಕುಟುಂಬದವರೊಂದಿಗೆ ಸ್ವಾಮಿಯ ಸನ್ನಿಧಿಯಲ್ಲಿ ವಿವಿಧ ಸೇವೆಗಳನ್ನು ಸಲ್ಲಿಸಿದರು. ಬುಧವಾರ ಬೆಳಗ್ಗೆ ೧೦.೩೦ಕ್ಕೆ ಹೂವಿನ ಉಚ್ಛಾಯ (ಬ್ರಹ್ಮ ರಥೋತ್ಸವ) ಜರುಗಿತು.