ವೈಚಾರಿಕ ಜ್ಯೋತಿಯ ನಿರಂತರ ಉರಿಸುವ ಉದ್ದೇಶದ ತರಳಬಾಳು ಹುಣ್ಣಿಮೆ ಮಹೋತ್ಸವ …

TARALABALU

ನಾಡಿನ ಪ್ರಖ್ಯಾತ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ತರಳಬಾಳು ಬೃಹನ್ಮಠ ಸ್ವಾತಂತ್ರ್ಯ ಪೂರ್ವದಿಂದಲೂ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಸಾಂಸ್ಕತಿಕ ಹಾಗೂ ರಂಗಭೂಮಿ ಕ್ಷೇತ್ರ ಗಳಲ್ಲಿ ದಾಪುಗಾಲು ಇಡುತ್ತಾ ತನ್ನದೇ ಆದ ಛಾಪು ಮೂಡಿಸುತ್ತಾ ಬಂದಿದೆ.
ಶರಣರ ಸಂದೇಶಗಳನ್ನು ನಾಟಕ ಮತ್ತು ವಚನ ಬಳಗಗಳ ಮೂಲಕ ದೇಶಾದ್ಯಂತ ಪಸರಿಸಿರುವ ಹಿರಿಮೆಗೆ ಪಾತ್ರವಾಗಿದೆ. ಇದಿಷ್ಟೇ ಅಲ್ಲದೆ ಶಿಕ್ಷಣ ಕ್ಷೇತ್ರಕ್ಕೆ, ಅದರಲ್ಲೂ ಗ್ರಾಮೀಣ ಮಹಿಳೆಯರ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿದ್ದ ಬೃಹನ್ಮಠ ಆಗಿನಿಂದಲೇ ರಾಜ್ಯದ ಮೂಲೆ ಮೂಲೆಗಳಲ್ಲಿ ಪ್ರೌಢಶಾಲೆಗಳನ್ನು ತೆರೆದು ಮಹಿಳೆಯರು ಹೆಚ್ಚು ಸುಶಿಕ್ಷಿತ ರಾಗುವಂತೆ ಪ್ರೋತ್ಸಾಹಿಸಿರುವುದು ಶ್ಲಾಘನೀಯ.
ಇಷ್ಟೆ ಬೃಹತ್ ಇತಿಹಾಸ ಹೊಂದಿರುವ ತರಳಬಾಳು ಜಗದ್ಗುರು ಬೃಹನ್ಮಠದ ವತಿಯಿಂದ ೫೦ರ ದಶಕಕ್ಕಿಂತಲೂ ಹಿಂದೆಯೇ ಬೃಹನ್ಮಠ ದಲ್ಲಿಯೇ ನಡೆಯುತ್ತಿದ್ದ ದಸರಾ ಉತ್ಸವ'ವನ್ನು ತಿಪಟೂರಿನ ಹಿರಿಯ ಗಾಂಧಿವಾದಿಸಿರುಮ’ ಎಂದೇ ಖ್ಯಾತರಾಗಿದ್ದ ಎಸ್.ಆರ್. ಮಲ್ಲಪ್ಪ ಅವರು ತರಳಬಾಳು ಹುಣ್ಣಿಮೆ ಮಹೋತ್ಸವ' ಎಂದು ನಾಮಕರಿಸಿ ಅಲ್ಲಿಂದ ಮುಂದೆ ನಾಡಿನ ವಿವಿಧ ಭಾಗಗಳಲ್ಲಿ ಈ ಉತ್ಸವ ಸಮಾಜದ ಜನತೆಯಲ್ಲಿ ಧಾರ್ಮಿಕ, ಸಾಂಸ್ಕೃತಿಕ ಮತ್ತು ವೈಚಾರಿಕ ಪ್ರe ಮೂಡಿಸುವ ನಿಟ್ಟಿನಲ್ಲಿ ಮೇಲೆ ಬರುವಂತೆ ಲಿಂಗೈಕ್ಯ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರನ್ನು ಪ್ರೋತ್ಸಾಹಿಸಿದರು. ವಿಶ್ವಬಂಧು ಮರುಳಸಿದ್ದರು ೧೨ನೇ ಶತಮಾನದ ಕ್ರಾಂತಿಯೋಗಿ ಬಸವಣ್ಣನವರ ಹಿರಿಯ ಸಮಕಾಲೀನರು. ಜಗದ್ಗುರು ಶ್ರೀ ರೇವಣಸಿದ್ದರ ಕೃಪಾಶೀರ್ವಾದದಿಂದ ಸಿದ್ಧಿಪಡೆದು ಕಂದಾಚಾರ, ಶೋಷಣೆ, ಅಸಮಾನತೆಯ ವಿರುದ್ಧ ಜನಜಗೃತಿ ಮೂಡಿಸಲು ಲೋಕ ಸಂಚಾರ ಹೊರಡುತ್ತಾರೆ. ತೆಲುಗುಬಾಳ ಸಿದ್ದರನ್ನು ಸದ್ಧರ್ಮ ಪೀಠದಲ್ಲಿ ಕೂರಿಸಿ ಅವರನ್ನು ಹರಸಿದ ಮಂತ್ರವೇ ತರಳ, ನೀ ಬಾಳು... ತರಳ ಬಾಳು... ವಚನ ಚಳವಳಿ ತಾತ್ವಿಕ ಸ್ವರೂಪ ಪಡೆದು ಸಾಮಾಜಿಕ ಸಂಘರ್ಷ ಆರಂಭಿಸುವ ಮುನ್ನವೇ ಇಂತಹ ಚಳವಳಿಯಲ್ಲಿ ತೊಡಗಿಸಿಕೊಂಡ ಮಹಾನ್ ಸಾಧಕರು. ಸಮಾಜದಲ್ಲಿ ಮೂಢನಂಬಿಕೆ, ಮಢ್ಯ ಬಿತ್ತಿದ್ದ ಪುರೋಹಿತಶಾಹಿ ವ್ಯವಸ್ಥೆ ವಿರುದ್ಧ ಸಾಮಾಜಿಕ ಆಂದೋಲನವನ್ನೇ ರೂಪಿಸಿದ ಮಹಾನ್ ಶರಣರು. ಮರುಳಸಿದ್ದರು, ಬಾಲ್ಯದ ತಾಯಿ-ತಂದೆ ಕಳೆದುಕೊಂಡು ಕಗ್ಗಲುಪುರದ ಬಾಚಣ್ಣನ ಮನೆಯಲ್ಲಿ ಸಾಕು ಮಗನಂತೆ ಬೆಳೆಯುತ್ತಾರೆ. ದನಕರು ಕಾಯುವ ಕಾಯಕ ಮಾಡಿಕೊಂಡಿದ್ದರು. ಪ್ರಾಣಿಗಳ ಜತೆ ಒಡನಾಟ ಇದ್ದ ಅವರಿಗೆ ಒಮ್ಮೆ ಅವರ ಊರಿನಲ್ಲಿ ನಡೆದ ಮಾರಿ ಜತ್ರೆಗೆ ಕೋಣ ಬಲಿ ಕೊಡುವ ಪ್ರಸಂಗ ಬಂದಾಗ ನೊಂದುಕೊಂಡರು. ಮೂಢನಂಬಿಕೆಯ ನಡುವೆ ಮುಗ್ಧ ಪ್ರಾಣಿಗಳ ಜೀವ ತೆಗೆಯುವ ಇಂತಹ ಆಚರಣೆ ವಿರುದ್ಧ ಧ್ವನಿ ಎತ್ತಿದರು. ಪಟ್ಟಭದ್ರರ ಬಲದ ಮುಂದೆ ಅವರ ದನಿ ಚಿಕ್ಕದೆನಿಸಿತು. ಅದರಿಂದ ಬೇಸರಗೊಂಡ ಅವರು ಊರು ತೊರೆದು ಕಾಡು-ಮೇಡು ಅಲೆಯುತ್ತಾರೆ. ಸಾಧಕರ ಬೀಡು ಎಂದೇ ಪ್ರಸಿದ್ಧಿ ಪಡೆದಿದ್ದ ಚಿನ್ಮೂಲಾದ್ರಿ ಬೆಟ್ಟ ತಲುಪುತ್ತಾರೆ. ಅಲ್ಲಿ ಗುರು ರೇವಣಸಿದ್ದರ ಸಂಗ ದೊರೆಯುತ್ತದೆ. ಅಲ್ಲಿ ಅವರು ಸಿದ್ಧಿಪಡೆದು ಕಂದಾಚಾರ, ಶೋಷಣೆ, ಅಸಮಾನತೆಯ ವಿರುದ್ಧ ಜನಜಗತಿ ಮೂಡಿಸಲು ಲೋಕ ಸಂಚಾರ ಹೊರಡುತ್ತಾರೆ. ತರಳ... ಬಾಳು... ತಾವು ಮಾಡಿದ ವೈಚಾರಿಕ ಕ್ರಾಂತಿ ಜ್ಯೋತಿಯನ್ನು ನಿರಂತರ ಉರಿಸುವ ಉದ್ದೇಶದಿಂದ ಮಾಘ ಶುದ್ಧ ಭಾರತ ಹುಣ್ಣಿಮೆಯ ದಿನ ತಮ್ಮ ಶಿಷ್ಯ ತೆಲುಗುಬಾಳ ಸಿದ್ದರನ್ನು ಸದ್ಧರ್ಮ ಪೀಠದಲ್ಲಿ ಕೂರಿಸಿ ಅವರನ್ನು ಹರಸಿದ ಮಂತ್ರವೇ ತರಳ, ನೀ ಬಾಳು... ತರಳ ಬಾಳು... ತರಳಬಾಳು ಎಂದರೆ ದೀರ್ಘ ಕಾಲ ನೀ ಚಿರಂಜಿವಿಯಾಗಿ ಬಾಳು ಮಗು ಎಂದು. ಅಂದರೆ, ಸದ್ಧರ್ಮ ಪೀಠ ಸೂರ್ಯ ಚಂದ್ರರು ಇರುವವರೆಗೂ ಬಾಳಲಿ... ಜಗತ್ತಿನ ಎಲ್ಲ ಜನರ ಬಾಳು ಹಸನಾಗಲಿ ಎನ್ನುವ ತತ್ವಾರ್ಥ. ತರಳಬಾಳು ಪೀಠ ಸ್ಥಾಪನೆಯ ಉದ್ದೇಶವೇ ನೈತಿಕ, ಸಮಾನತೆ, ಕಾಯಕ ತತ್ವದ ಆಧಾರದ ಮೇಲೆ ಧರ್ಮದ ಆಚರಣೆ ಸಾಗಬೇಕು ಎಂಬುದು. ಹೀಗೆ ಜಗದ್ಗುರು ಶ್ರೀ ರೇವಣಸಿದ್ದರ ಕಪಾಶೀರ್ವಾದದಿಂದ ಸಿದ್ಧಿಪಡೆದು ವಿಶ್ವ ಬಂಧು ಮರುಳಸಿದ್ದರು ತಮ್ಮ ಶಿಷ್ಯ ತೆಲುಗುಬಾಳು (ಬಳ್ಳಾರಿ ಜಿ) ಸಿದ್ದರನ್ನು ಸಿಂಹಾಸನದಲ್ಲಿ ಪೀಠಾರೋಹಣ ಮಾಡಿದ ನೆನಪಿಗಾಗಿ ಪ್ರತಿ ವರ್ಷ ಭಾರತ ಹುಣ್ಣಿಮೆಯ ದಿನ ತರಳಬಾಳು ಮಹೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ. ಮಠವು ಕೆವಲ ರಾಜ್ಯವಲ್ಲದೆ,ರಾಷ್ಟ್ರವ್ಯಾಪಿ ಹೆಸರುವಾಸಿಯಾಗಿದೆ. ಹೆಚ್ಚು ಭಕ್ತರು ಸಂಹೂವನ್ನುಗಳಿಸಿದೆ. ಈ ಮಠವು ಬಹಳ ಪಾರಂಪರಿಕ ಕಾಲದಿಂದಲೇ ಆಸ್ಥಿತ್ವಕ್ಕೆ ಬಂದಿದೆ. ಈ ಮಠವನ್ನು ೧೨ನೇ ಶತಮಾನದಲ್ಲಿ ಶ್ರೇಷ್ಟ ಸನ್ಯಾಸಿಯಾದ ಮರುಳಸಿದ್ದರು ಸ್ಥಾಪಿಸಿ, 'ತರಳಬಾಳು' ಎಂದು ಆರ್ಶೀವದಿಸಿzರೆ. ಒಂಬತ್ತು ದಿನಗಳ ಕಾಲ ನಡೆಯುವ ಈ ಉತ್ಸವದಲ್ಲಿ ಭಾಗವಹಿಸಿದ್ದ ನಾಡಿನ ಹಲವಾರು ಚಿಂತಕರು, ಸಾಹಿತಿಗಳು, ವಿಮರ್ಶಕರು, ರಾಜಕಾರಣಿಗಳು, ಕಲಾವಿದರ ಅನಿಸಿಕೆಯಂತೆ ಇದೊಂದುನಡೆದಾಡುವ ವಿಶ್ವವಿದ್ಯಾನಿಲಯ’ ಎಂದೇ ಕರೆಸಿಕೊಂಡಿದೆ.
೧೯೫೦ರಲ್ಲಿ ಆಗಿನ ಮೈಸೂರು ರಾಜ್ಯ ಸರ್ಕಾರದ ಮಂತ್ರಿಗಳಾಗಿದ್ದ ಜಗಳೂರಿನ ಮುಸ್ಲಿಂ ಬಾಂಧವ ಜೆ. ಇಮಾಮ್‌ಸಾಬ್ ಅವರ ಕೋರಿಕೆಯ ಮೇರೆಗೆ ಜಗಳೂರಿನಲ್ಲಿ ಹುಣ್ಣಿಮೆ ಮಹೋತ್ಸವ ಆಚರಿಸಲ್ಪಟ್ಟು ಮೊದಲ ಬಾರಿಗೆ ಸಿರಿಗೆರೆಯಿಂದ ಹೊರಗಿನ ಸ್ಥಳಗಳಲ್ಲಿ ಆಚರಿಸುವ ಒಂದು ಪರಿಪಾಠವನ್ನು ಮಹೋತ್ಸವ ಪಡೆಯಿತು. ಅಂದಿನಿಂದ ಇಂದಿನವರೆಗೆ ನಡೆದ ಈ ಮಹೋತ್ಸವ ಮಹಾರಾಷ್ಟ್ರದ ಸೊಪುರದಲ್ಲೂ ನಡೆದಿರುವುದು ಗಮನಾರ್ಹ.
ಬೃಹನ್ಮಠವು ತರಳಬಾಳು ಹುಣ್ಣಿಮೆಯನ್ನು ಕೇವಲ ಧಾರ್ಮಿಕ ಕಾರ್ಯಕ್ರಮವಾಗಿ ಪರಿಗಣಿಸದೆ ನಾಡಿಗೆ ಬಂದೆರಗಿದ ಬರಗಾಲ, ಪ್ರವಾಹ, ಅಗ್ನಿ ಅನಾಹುತಗಳು ಮುಂತಾದ ಪ್ರಕೃತಿ ವಿಕೋಪಗಳಿಗೂ ಸ್ಪಂದಿಸುತ್ತಾ, ಸಮಾರಂಭವನ್ನು ಸರಳವಾಗಿ ಆಚರಿಸಿ ಹೆಚ್ಚಿನ ಧನ, ಧಾನ್ಯ ಸಂಗ್ರಹಿಸಿ ಸಂತ್ರಸ್ತರಿಗೆ ನೀಡುತ್ತಾ ಬಂದಿದೆ.
೧೯೮೬ರಲ್ಲಿ ಬರಗಾಲದ ಅಂಗವಾಗಿ ಮಹೋತ್ಸವವನ್ನು ರದ್ದುಗೊಳಿಸಿ ಜನುವಾರುಗಳಿಗೆ ಮೇವು ಸಂಗ್ರಹಣಾ ಕಾರ್ಯಕ್ರಮ, ೨೦೦೪ರಲ್ಲಿ ಬರಪೀಡಿತ ೧೦ ಹಳ್ಳಿಗಳಿಗೆ ಕುಡಿಯುವ ನೀರಿನ ಯೋಜನೆ ಅನುಷ್ಠಾನ, ೨೦೦೭ರಲ್ಲಿ ಬರ ಪರಿಹಾರ ಕಾರ್ಯಕ್ರಮ, ೨೦೧೦ರಲ್ಲಿ ಉತ್ತರ ಕರ್ನಾಟಕದ ಪ್ರವಾಹ ಸಂತ್ರಸ್ತರ ಪರಿಹಾರ ಕಾರ್ಯಕ್ರಮ, ಹೀಗೆ ಹಲವಾರು ಸಮಾಜಮುಖಿ ಕಾರ್ಯಗಳಲ್ಲಿ ಸಹಾಯಹಸ್ತ ಚಾಚಿರುವ ನಿದರ್ಶನಗಳಿವೆ.

ಸಂಗ್ರಹ: ಕೆ.ಜಿ.ಸರೋಜ ನಾಗರಾಜ್, ಪಾಂಡೋಮಟ್ಟಿ.