ಪ್ರೀತಿಯ ದಿನಕ್ಕೆ…
ಪ್ರೀತಿ ಅನ್ನೋದು ಒಂದು ನಂಬಿಕೆ, ನಂಬಿಕೆಯಲ್ಲಿ ಭಾವನೆ, ಖುಷಿ, ನೋವು ಎಲ್ಲ ಇರುತ್ತೆ ಎರೂ ಹೇಳೋ ಮಾತು ನಿಜವಾದ ಪ್ರೀತಿಗೆ ಸಾವಿಲ್ಲ ಇದರೊಳಗೆ ಅರ್ಥವಾದ್ದದ್ದು ಏನು..!
ಪ್ರೀತಿಗೆ ಸರಿಯಾದ ಅರ್ಥ ಕೊಡುವ ದಿನ ಬರಬಹುದೇ ಪ್ರೀತಿ ಅಂದರೇನು..?
ಪ್ರೀತಿ ಎಂಬುದು ಮಾಯೆ , ಒಮ್ಮೆ ಖುಷಿಕೊಟ್ಟರೆ ಕೆಲವೊಮ್ಮೆ ದುಃಖ ಕೊಡುವ ಈ ಪ್ರೀತಿ ಅಮೂಲ್ಯವಾದದ್ದೇ. ನಿಜವಾದ ಪ್ರೀತಿ ಪಡೆಯಬೇಕು ಅಂದರೆ ಪ್ರೀತಿಯ ನಂಬಿಕೆ ತುಂಬಾ ತುಂಬಾನೇ ಸ್ಟ್ರಾಂಗ್ ಆಗಿರಬೇಕು. ಆಗ ಮಾತ್ರ ಯಾರಿಂದಲೂ ದೂರ ಮಾಡೋಕೆ ಸಾಧ್ಯವಿಲ್ಲ ಎನ್ನುತ್ತಾರೆ.
ಪ್ರೀತಿ ಹಿಡಿತಕ್ಕೆ ಸಿಗದ ರೂಪ ಮತ್ತು ಭಾವ. ಅದು ಕಲ್ಪಿತ, ಅದು ಅಗಣಿತ, ಅಮೂರ್ತ, ಅಸ್ಪಷ್ಟ , ಆವೇದ್ಯ ಪ್ರೀತಿ ಎಂಬುದು ಅನುಭವಕ್ಕೆ ಮಾತ್ರ ನಿಲುಕುವ ಭಾವದೊಳಗಿನ ಭಾವ. ಅದು ಪ್ರೀತಿಸುವವರ ಸ್ವಭಾವದ ಒಡಲಲ್ಲಿ ಬೆಳೆಯುತ್ತದೆ. ಇಲ್ಲ ಮುದುಡುತ್ತದೆ ಅಥವಾ ಕಮರುತ್ತದೆ.
ಪ್ರೀತಿ ಎಂದರೆ ಪ್ರಾಮಾಣಿಕತೆಯ ಉಸಿರು. ಪ್ರೀತಿ ತ್ಯಾಗವನ್ನು ಸೂಸುತ್ತದೆ, ದ್ವೇಷವನ್ನಲ್ಲ. ದ್ವೇಷವನ್ನ ಪ್ರೀತಿ ಒಮ್ಮೆ ಹಡೆದರೆ ಅದು ಒಂದು ಪ್ರೀತಿಯಲ್ಲ ಕಾಮ. ಪ್ರೀತಿ ತಪ್ಪಲ್ಲ. ಪ್ರೀತಿಯಲ್ಲಿ ಎಚ್ಚರ ತಪ್ಪುವುದು ತಪ್ಪು . ಪ್ರeಪೂರ್ವಕ ಎಚ್ಚರದ ಸ್ಥಿತಿಯಲ್ಲಿ ಪ್ರೀತಿ ಒದಗಬೇಕು. ಪ್ರೀತಿ ಅನ್ನುವುದು ಒಂದು ಆಕಸ್ಮಿಕವಾಗಿ ಹುಟ್ಟಿಕೊಳ್ಳುತ್ತದೆ, ಆಕಸ್ಮಿಕ ಅನ್ನುವ ಪ್ರೀತಿ ಅಪಘಾತವನ್ನೇ ತಂದು ಹಾದಿ ತಪ್ಪಿಸುತ್ತದೆ.
ವರ್ತಮಾನದಲ್ಲಿ ಪ್ರೀತಿಯ ಪರಿಭಾಷೆ ಬದಲಾಗಿದೆ. ಅದು ತನ್ನ ರೂಪ , ಆಶಯ , ಅದ್ರರ್ತೆಯನ್ನು ಕಳಕೊಂಡಿದೆ. ಪ್ರೀತಿ ಎಂದು ದಿಢೀರನೆ ಹುಟ್ಟುವ ಭಾವನೆಯಲ್ಲ. ಅದು ಪ್ರಿಯವಾಗುವ ಪ್ರಕ್ರಿಯೆ ಆರಂಭವಾಗಿದೆ ಎಂದರೆ ಈ ಪ್ರೀತಿಯ ಭಾವನೆ ಹುಟ್ಟುವುದಾದರೂ ಹೇಗೆ ?
ಪ್ರೀತಿ ಎಂದರೆ ವಿಲಾಸವಲ್ಲ, ಬದುಕಿನ ಒಂದು ಭಾಗ. ಬದುಕಾಗಿಸಿಕೊಂಡ ಬದುಕಿನ ಕಸುವಾಗಿಸಿ ನೋಂದರೆ ನೀಡು ಸುಯ್ದರೆ ಸುಳಿದಿರುಗಿದರೆ ಅದು ಒಂದು ವಿಚಿತ್ರ ಸಂಕಟ. ಪ್ರೀತಿ ಎಂಬ ವೀಣೆಯನ್ನು ಒಮ್ಮೆ ಮುಟ್ಟಿ ಮೀಟುವ ಮೀಟಿ ಸ್ವರಗಳನ್ನು ಹೊಮ್ಮಿಸುವ ವೈಣಿಕನೊಬ್ಬ ಬೇಕೆನಿಸುವ ಕ್ಷಣವೇ ಪ್ರೀತಿಯ ಸುಖಕ್ಕೆ ದಾಗುಡಿ ಹಿಡುವ ಸುಪ್ತ ಮನಸ್ಸುಗಳೂ ಸಪ್ತ ಸಮುದ್ರಗಳ ಏಕ ಕಾಲದ ಬೋರ್ಗರೆತಗಳಾಗಿ ಅನುಭವಿಸುವ ಸತ್ಯದ ಅನಾವರಣದ ಕಾಲವೇ ತಲ್ಲಣ , ಈ ತಲ್ಲಣದ ಅಳದಂದು ಅನುಭವದ ಪ್ರೀತಿ , ಬದುಕಿಗೆ ಪ್ರೀತಿ ಎಂಬುದು ಸಂಭ್ರಮ. ಪ್ರೀತಿ ಇಲ್ಲದ ಬದುಕು ಖಾಲಿ, ಪ್ರೀತಿ ನಿಷ್ಕಲ್ಮಶವಾದ್ದು ಪ್ರೀತಿಯಿಂದ ಎಲ್ಲವನ್ನು ಗೆಲ್ಲುವ ಶಕ್ತಿ ಉತ್ಸಾಹ ಇಮ್ಮಡಿಯಾಗಬೇಕು.
ಆದರ್ಶ ಪ್ರೀತಿಯಲ್ಲಿ ಅನ್ಯೋನ್ಯತೆ ಇರುತ್ತದೆ. ಒಬ್ಬರನೊಬ್ಬರು ಅರಿತುಕೊಂಡು ಬದುಕುವ ಹಂಬಲವಿರುತ್ತದೆ. ಇಲ್ಲಿ ಒಬ್ಬರಿಗಿಂತ ಇನ್ನೊಬ್ಬರು ಶ್ರೇಷ್ಠ ಎಂಬ ಅಹಂ ಇರುವುದಿಲ್ಲ . ಇಬ್ಬರಲ್ಲಿ ಒಬ್ಬರು ಅನುಸರಿಸಿಕೊಂಡು ಹೋಗುತ್ತಾರೆ. ಒಬ್ಬರನ್ನು ಬಿಟ್ಟು ಒಬ್ಬರು ಇರಲಾರರು.
ಪ್ರೀತಿ ಎನ್ನುವ ಮಾಯೆ ತನ್ನವರಿಂದ ತನ್ನನ್ನೇ ದೂರ ಕರೆದುಕೊಂಡು ಹೋಗುವ ಹುಚ್ಚು ಖೋಡಿ ಮನಸ್ಸುಗಳು ತಮ್ಮ ಹಿಡಿತದಲ್ಲಿರಲಿ ನೆನ್ನೆ ಮೊನ್ನೆ ಪರಿಚಯವಾದ ಅಪರಿಚಿತ ವರ್ಷಗಳ ಆತ್ಮೀಯತೆಯನ್ನು ಕಸಿದುಕೊಂಡು ತಾನೇ ಸರ್ವಸ್ವನಾಗಿ ಬಿಡುತ್ತಾನೆ. ಇದು ವಯಸ್ಸಿನ ತಪ್ಪು ಹಾಗೂ ಯೌವನವೆಂಬ ಹುಚ್ಚು ಹೊಳೆಯಲ್ಲಿ ಜರಿತೆಂದ ಮನಸ್ಸುಗಳು ಮತ್ತೆ ಮೇಲೆರಳು ಆಗದಂತ ಮಧ್ಯ ಹೊಳೆಯ ಸುಳಿಗೆ ಸಿಲುಕಿ ಸಾವಿರಾರು ಕನಸು ಹೆಣೆದು ಕವನ ಕಟ್ಟುವುದು ಅಷ್ಟೇ !
ಈ ಪ್ರೀತಿ ಮಾಡುವುದು ಏನು ದೊಡ್ಡ ಸಾಧನೆಯಲ್ಲ , ಅದನ್ನು ಉಳಿಸಿಕೊಳ್ಳುವುದು ಸಾಧನೆ. ಪ್ರೀತಿ ಅನ್ನುವುದು ಆಳವಾದುದ್ದು , ಆತ್ಮೀಯವಾದದ್ದು. ಅದು ಆತ್ಮಪೂರ್ವಕವಾಗಿರಬೇಕು , ಆತ್ಮಕ್ಕಿಳಿಯದೆ ಆತ್ಮೀಯತೆ ಇಲ್ಲದ ಪ್ರೀತಿ ಅನಾವರತವಾಗುವುದು. ಅದೆಷ್ಟು ವಿವರಿಸಿದರೂ ಪ್ರೀತಿ ಎಂಬುದುದನ್ನು ಇವತ್ತಿಗೆ ಯಾರಿಗೂ ಹೇಳಲಾಗದ ಒಂದು ಪ್ರೆಶ್ನೆಯಾಗಿದೆ. ಇದು ಪ್ರೀತಿಯ ದಿನಕ್ಕೆ ಮಾಡಿದವರಿಗೆ ಪ್ರೀತಿಯ ಸಂದೇಶ…