ಸಹಕಾರಿ ತತ್ವ, ಕಾಯ್ದೆ ಕುರಿತು ಸಹಕಾರಿಗಳಿಗೆ ಅರಿವು ಮುಖ್ಯ: ಆರ್‌ಎಂಎಂ

rmm

ಹೊಸನಗರ : ವೈದ್ಯನಾಥನ್ ವರದಿ ಯತಾವತ್ತಾಗಿ ಜರಿ ಗೊಳ್ಳುವ ಮೂಲಕ ನಷ್ಟದಲ್ಲಿದ್ದ ಅದೆಷ್ಟೋ ಸಹಕಾರಿ ಸಂಘಗಳು ಲಾಭದತ್ತ ಮುಖ ಮಾಡುವಂತಾ ಗಿದೆ ಎಂದು ಜಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್. ಎಂ. ಮಂಜುನಾಥ ಗೌಡ ತಿಳಿಸಿದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಶಿವಮೊಗ್ಗ ಜಿಸಹಕಾರ ಯೂನಿಯನ್ ಮಿ., ಶಿವಮೊಗ್ಗ ಜಿ ಸಹಕಾರ ಕೇಂದ್ರ ಬ್ಯಾಂಕ್ ನಿ., ಹಾಗೂ ಸಹಕಾರ ಇಲಾಖೆ ಸಂಯಕ್ತವಾಗಿ ಪಟ್ಟಣದ ಎಸ್‌ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಹೊಸನಗರ ತಾಲೂಕಿನ ಎ ಸಹಕಾರ ಸಂಘ ಗಳ ಅಧ್ಯಕ್ಷ ಹಾಗೂ ಸಿಇಓಗಳಿಗೆ ಏರ್ಪಡಿಸಿದ್ದ ಒಂದು ದಿನದ ವಿಶೇಷ ಸಹಕಾರ ತರಬೇತಿ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಿಯಲ್ಲಿ ಸಾವಿರಾರು ವಿವಿಧ ರೀತಿ ಸಹಕಾರಿ ಸಂಘಗಳು ಕಾರ್ಯನಿರ್ವಹಿಸುತ್ತಿದೆ. ಅವುಗಳ ಬೈಲಾ ಸಹ ಹಲವು ಬಗೆಯಲ್ಲಿದೆ. ಆದರೆ, ಎ ಸಹಕಾರಿ ಸಂಘಗಳ ಮೂಲ ಉದ್ದೇಶ ಲಾಭಗಳಿಸು ವುದೇ ಆಗಿದೆ ವಿನಾಃ ನಷ್ಟವಲ್ಲ. ಆ ಕಾರಣಕ್ಕೆ ಸೂಕ್ತ ಬೈಲಾ ರಚನೆಯ ಮೂಲಕ ಸಂಘ, ಸಂಸ್ಥೆಗಳು ಸದಸ್ಯರ ಹಿತ ಕಾಪಾಡುವಂತ ಯೋಜನೆಗಳನ್ನು ರೂಪಿಸಬೇಕಿದೆ. ಪ್ರತಿಯೊಬ್ಬ ಸಹಕಾರಿಯೂ ಮೊದಲು ಸಹಕಾರಿ ತತ್ವ, ಕಾಯ್ದೆ ಕುರಿತು ಅರಿವು ಪಡೆಯಬೇಕು. ಸಹಕಾರಿ ತತ್ವದಡಿಯಲ್ಲಿ ಜನಪರ ಬೈಲಾ ರೂಪಿಸಿ ಲಾಭಗಳಿಸುವಂತೆ ಸಂಘ ಸಜ್ಜುಗೊಳ್ಳಬೇಕು. ಲೆಕ್ಕ- ಪತ್ರದಲ್ಲಿ ಪಾರದರ್ಶಕ ಆಡಳಿತ ಕಾಯ್ದುಕೊಳ್ಳುವುದು ಸಂಘದ ಯಶ್ವಸಿಗೆ ಕಾರಣವಾಗಿದೆ ಎಂದರು.
ವೈದ್ಯನಾಥನ್ ವರದಿ ಜರಿ ಗೊಂಡ ಬಳಿಕ ಸಂಘದ ಪ್ರತಿಯೊಬ್ಬ ಸದಸ್ಯನು ಒಂದ ಒಂದು ರೀತಿ ಯಲ್ಲಿ ಸಂಘದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲೇ ಬೇಕಾಗಿದ್ದು, ಇದು ಸಂಘದ ಆರ್ಥಿಕ ಸಬಲತೆ ಹೆಚ್ಚಸಲು ಸಹಕಾರಿ ಆಗಿದೆ. ೧೯೯೭ರ ಮೊದಲು ಕೇವಲ ಒಂದು ನೂರು ಕೋಟಿ ವಾರ್ಷಿಕ ವಹಿವಾಟು ನಡೆಸುತ್ತಿದ್ದ ಜಿ ಸಹಕಾರಿ ಬ್ಯಾಂಕಿಂದು ರೂ ಸಾವಿರದ ನೂರು ಕೋಟಿಗೂ ಹೆಚ್ಚು ವಹಿವಾಟು ನಡೆಸಲು ಸಹಕಾರಿ ಸಂಘಗಳೇ ಕಾರಣ ಆಗಿವೆ. ೨೦೨೪ರ ಎಪ್ರಿಲ್ ನಂತರ, ದೇಶವ್ಯಾಪಿ ಸಹಕಾರಿ ಕ್ಷೇತ್ರವೂ ಕಂಪ್ಯೂಟರೀ ಕರಣಗೊಂಡಿದ್ದು, ಯಾವುದೇ ಸಹಕಾರಿ ಬ್ಯಾಂಕಿನ ಅರ್ಥಿಕ ಸ್ಥಿತಿಗತಿ ಯನ್ನು ಕ್ಷಣಾರ್ಧದಲ್ಲಿ ಕೇಂದ್ರದ ರಿಸರ್ವ ಬ್ಯಾಂಕ್ ಪರಿಶೀಲಿಸ ಬಹುದಾಗಿದೆ. ಆ ಕಾರಣಕ್ಕೆ ಸಹಕಾರಿ ಸಂಘಗಳು ಆರ್ಥಿಕ ಶಿಸ್ತು ಕಾಪಾಡಿಕೊಳ್ಳುವ ಮೂಲಕ ಸೂಕ್ತ ಲೆಕ್ಕಪತ್ರ ದಾಖಲೆ ನಿರ್ವಹಣೆ ಮಾಡಿದಲ್ಲಿ ಮಾತ್ರವೇ ಲಾಭಗಳಿಸಬಹುದಾಗಿದೆ ಎಂದರು.
ಬದಲಾಗುತ್ತಿರುವ ಸಹಕಾರಿ ಕಾಯ್ದೆ ಕುರಿತಂತೆ ಪ್ರತಿಯೊಬ್ಬ ಸಹಕಾರಿಯೂ ತಿಳಿಯಬೇಕಾಗಿದ್ದು ಈ ಹಿನ್ನಲೆಯಲ್ಲಿ ಇಂತಹ ತರಬೇತಿ ಕಾರ್ಯಗಾರಗಳು ಸಹಕಾರಿ ಆಗಲಿದ್ದು, ಶಿಬಿರದ ಪ್ರಯೋಜನ ಸಬ್ದಳಕೆಗೆ ಅವರು ಕರೆ ನೀಡಿದರು.
ವೇದಿಕೆಯಲ್ಲಿ ಶಿಮುಲ್ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ ಹೆಚ್.ಎನ್. ವಿದ್ಯಾಧರ್, ಜಿ ಸಹಕಾರಿ ಯೂನಿಯನ್ ಅಧ್ಯಕ್ಷ ಕೆ. ರತ್ನಾಕರ್, ನಿರ್ದೇಶಕ ವಾಟ ಗೋಡು ಸುರೇಶ್, ಪಿಕಾರ್ಡ್ ಅಧ್ಯಕ್ಷ ಎಂ.ವಿ.ಜಯರಾಂ, ಸಹಕಾರ ಅಭಿವದ್ದಿ ಅಧಿಕಾರಿ ವೆಂಕಟಾಚಲಪತಿ, ಸಹ್ಯಾದ್ರಿ ಮಹಿಳಾ ಬ್ಯಾಂಕಿನ ಜಿಧ್ಯಕ್ಷೆ ಈರಮ್ಮ, ಜಿ ಸಹಕಾರಿಗಳಾದ ರಾಜು ಪಾಟೀಲ್ ಉಪಸ್ಥಿತರಿ ದ್ದರು. ಸಂಪತ್ ಕುಮಾರ್ ಪ್ರಾರ್ಥಿಸಿ, ಪರಮೇಶ್ವರ ನಿರೂಪಿಸಿ ದರು. ಸಿಇಓ ಯಶವಂತ್ ಕುಮಾರ್ ಸ್ವಾಗತಿಸಿ, ವಂದಿಸಿದರು.