ಸಂಕಷ್ಟದಲ್ಲಿರುವವರಿಗೆ ಸ್ಪಂದಿಸುವ ಮೂಲಕ ಸಮಾಜದ ಋಣ ತೀರಿಸಬೇಕು…
ಭದ್ರಾವತಿ: ದೇವರು ಪ್ರತಿಯೊಬ್ಬರಲ್ಲೂ ಏನಾದರೂ ವಿಶೇಷವಾದ ಶಕ್ತಿ ಕೊಟ್ಟಿರುತ್ತಾನೆ. ಅದರಲ್ಲೂ ಕೆಲವರು ದೈಹಿಕ ನ್ಯೂನ್ಯತೆ ಹೊಂದಿ ಜನಿಸಿರುತ್ತಾರೆ. ಅಂತಹವರನ್ನು ಗುರುತಿಸಿ ಪ್ರೋತ್ಸಾಹಿಸಿ ಮಾನವೀಯತೆ ಯಿಂದ ಕಾಣಬೇಕು ಎಂದು ಗೋವಾದ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಶ್ರಿಮದ್ ವಿದ್ಯಾಧೀಶ ತೀರ್ಥ ಶ್ರೀವಡೇರ್ ಸ್ವಾಮೀಜಿ ಕರೆ ನೀಡಿದರು.
ನ್ಯೂಟೌನ್‌ನ ಶಿವಭಧ್ರ ಟ್ರಸ್ಟ್ ವತಿಯಿಂದ ನಡೆಸುತ್ತಿರುವ ತರಂಗ ಕಿವುಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನಂತರ ಶುಗರ್ ಟೌನ್ ಲಯನ್ಸ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಭಾಗವಹಿಸಿ ಮಕ್ಕಳನ್ನು ಆಶೀರ್ವದಿಸಿ ಮಾತನಾಡಿದ ಪೂಜ್ಯರು, ನಮಗೆ ಎಲ್ಲವನ್ನೂ ನೀಡಿರುವ ಭಗವಂತನು ಯಾರು ಸಂಕಷ್ಟದಲ್ಲಿ ರುತ್ತಾರೆ ಅವರಿಗೆ ಕಿಂಚಿತ್ ಸಹಾಯ ಮಾಡುವ ಮೂಲಕ ಸಮಾಜದ ಋಣ ತೀರಿಸಬೇಕು. ಈ ಶಾಲೆಯಲ್ಲಿರುವ ಮಕ್ಕಳಿಗೆ ಕಿವಿ ಕೇಳಿಸದಿರಬಹುದು ಮಾತನಾಡಲು ಬಾರದಿರಬಹುದು. ಆದರೆ ಇವರು ಮಾಡುವ ಸಾಧನೆ ಮುಂದೊಂದು ದಿನ ಸಮಾಜದ ಎಲ್ಲರ ಕಿವಿಗೆ ಕೇಳಿಸಿ ಅವರುಗಳ ಬಾಯಯಲ್ಲಿ ಇವರ ಸಾಧನೆ ಮಾತನಾಡುವಂತಾ ಗುತ್ತದೆ. ಅಂತಹ ಸಾಧನೆ ಕೇಳುವಂತಾಗಿ ಮಾತನಾಡು ವಂತಾಗಲಿ. ಸಾಮಾನ್ಯ ಮಕ್ಕಳ ಪ್ರತಿಭೆಯೊಂದಿಗೆ ನೀವು ಸಹ ಸ್ಪರ್ಧಿಸುವಂತಾಗಲಿ ಎಂದು ಹಾರೈಸಿದರು.
ಸುಜತ, ಗೀತಾ ಪ್ರಾರ್ಥಿಸಿ ದರು. ಶೈಲಾ, ಅಮೃತ ವಚನ ವಾಚಿಸಿದರು. ತಾರಾಮಣಿ ಸ್ವಾಗತಿಸಿ ವಂದನಾರ್ಪಣೆ ಮಾಡಿದರು. ಎಂ.ಜಿ.ಬಸವರಾಜ್ ಕಾರ್ಯಕ್ರಮ ನಿರೂಪಿಸಿದರು.