ಭದ್ರಾವತಿ ಪತ್ರಿಕೋದ್ಯಮದಲ್ಲಿ ಹೆಗ್ಗುರುತು ಮೂಡಿಸಿದ ದಿ|ಗಣೇಶ್ ರಾವ್ ಸಿಂಧ್ಯಾ…
ಭದ್ರಾವತಿ: ತಾಲೂಕಿನ ಪತ್ರಿಕೋದ್ಯಮದಲ್ಲಿ ಹೆಗ್ಗುರುತು ಮೂಡಿಸಿರುವ ಕೆಲವೇ ಕೆಲವು ಪತ್ರಕರ್ತರಲ್ಲಿ ದಿ||ಗಣೇಶ್‌ರಾವ್ ಸಿಂಧ್ಯಾ ಸಹ ಒಬ್ಬರು ಎಂದು ಹಿರಿಯ ಪತ್ರಕರ್ತ ಎನ್.ಬಾಬು ಬಣ್ಣಿಸಿದರು.
ಹಳೇನಗರದ ಪತ್ರಿಕಾ ಭವನ ಸಭಾಂಗಣದಲ್ಲಿ ಹಿರಿಯರ ಬಳಗದ ವತಿಯಿಂದ ನಿನ್ನೆ ಆಯೋಜಿಸಿದ್ದ ಹಿರಿಯ ಪತ್ರಕರ್ತ ದಿವಂಗತ ಗಣೇಶ್ ರಾವ್ ಸಿಂಧ್ಯಾ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಪತ್ರಕರ್ತರಾದ ಸಿಡಿಲಮರಿ ಕೃಷ್ಣಪ್ಪ ಹಾಗು ಗಣೇಶ್ ರಾವ್ ಸಿಂಧ್ಯಾ ಈ ಇಬ್ಬರನ್ನು ತಾಲೂಕಿನ ಜನರು ಎಂದಿಗೂ ಮರೆಯುವು ದಿಲ್ಲ. ಬರವಣಿಗೆ ಮಾತ್ರವಲ್ಲದೆ ಹೋರಾಟಗಾರರನ್ನು ಹಾಗು ಜನಸಾಮಾನ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರಿದಾರಿಗೆ ತರುವಲ್ಲಿ ಗಣೇಶ ರಾವ್ ಅವರು ಶ್ರಮಿಸಿದರು. ಮಿತಭಾಷಿಯಾಗಿ ದ್ದರೂ ತೀಕ್ಷ್ಣ ಸ್ವಭಾವ ಮತ್ತು ತೀಕ್ಷ್ಣ ಬರವಣಿಗೆ ಮೂಲಕ ಜನಪರ ಕಾಳಜಿ ಹೊಂದಿದ್ದರು. ಸಮಾಜದ ಸಮಸ್ಯೆಗಳಿಗೆ ಸದಾ ಸ್ಪಂದಿಸುವ ವ್ಯಕ್ತಿಯಾಗಿದ್ದರು ಎಂದರು.
ನಗರಸಭೆ ಮಾಜಿ ಅಧ್ಯಕ್ಷ ಆರ್. ಕರುಣಾಮೂರ್ತಿ, ಹಿಂದುಳಿದ ವರ್ಗಗಳ ಮುಖಂಡ ಟಿ. ವೆಂಕಟೇಶ್ ಮಾತನಾಡಿದರು.
ಮಾಜಿ ಉಪಮೇಯರ್ ಮಹಮ್ಮದ್ ಸನಾವುಲ್ಲಾ, ಪ್ರಮುಖರಾದ ಕಣ್ಣಪ್ಪ, ಬಿ.ಟಿ.ನಾಗರಾಜ್, ಶಶಿಕಲಾ ನಾರಾಯಣಪ್ಪ, ಎನ್. ವಿಶ್ವನಾಥ ರಾವ್, ಹಾ.ರಾಮಪ್ಪ, ಡಿ. ನರಸಿಂಹಮೂರ್ತಿ, ರಮಾಕಾಂತ್, ನರಸಿಂಹಚಾರ್, ರಾಕೇಶ್, ಬಿ.ಎನ್ ರಾಜು, ಪರಶುರಾಮ್, ನಾಗರತ್ನ, ದಿ.ಗಣೇಶ್ ರಾವ್ ಕುಟುಂಬ ಸದಸ್ಯರಾದ ಸುಭಾಷ್ ರಾವ್ ಸಿಂಧ್ಯಾ, ಪ್ರವೀಣ್, ನವೀನ್, ಸವಿತಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.