ದೇಶದ ಆರ್ಥಿಕತೆನ್ನೇ ಬುಡಮೇಲು ಮಾಡಿದ ಬಿಜೆಪಿ: ಮಧು…
ಸೊರಬ: ದೇಶದಲ್ಲಿ ಸುಭದ್ರ ಆಡಳಿತ ನಡೆಸಲು ಕಾಂಗ್ರೆಸ್ ನಿಂ ದ ಮಾತ್ರ ಸಾಧ್ಯ ಎನ್ನುವ ಅರಿವು ಸಾಮಾನ್ಯ ಜನರ ಮನಸ್ಸಿನಲ್ಲಿ ಮೂಡಿದೆ ಎಂದು ಕೆಪಿಸಿಸಿ ಹಿಂದು ಳಿದ ವಿಭಾಗದ ಅಧ್ಯಕ್ಷ ಮಧು ಬಂಗಾರಪ್ಪ ಹೇಳಿದರು.
ಸೋಮವಾರ ತಾಲ್ಲೂಕಿನ ಕೊಡಕಣಿ ಗ್ರಾಮದಲ್ಲಿ ಕಾರ್ಯ ಕರ್ತರ ಸಭೆಯಲ್ಲಿ ಮಾತನಾಡಿದ ಅವರು ಕಳೆದ ೨ ದಶಕದ ಅವಧಿಯಲ್ಲಿ ಬಿಜೆಪಿ ಸರ್ಕಾರ ದೇಶದ ಆರ್ಥಿಕತೆ ಬುಡಮೇಲು ಮಾಡಿ ದೆ. ನಿರಂತರ ಬೆಲೆ ಏರಿಕೆಯಿಂದ ಜನರು ತತ್ತರಿಸಿzರೆ. ಜನರ ರಕ್ಷಣೆ ಮಾಡುವಲ್ಲಿ ಸೋತಿದೆ. ಸುಳ್ಳು ಭರವಸೆಗಳ ಮೂಲಕ ಜನರಿಗೆ ವಂಚಿಸಿದ ಪ್ರತಿಫಲದಿಂದ ಸೋಲುವ ಭೀತಿ ಎದುರಾಗಿದೆ ಎಂದ ಅವರು, ಈಗಾಗಲೇ ಕಾಂಗ್ರೆಸ್ ಪದವೀಧರರಿಗೆ, ಮಹಿಳೆಯರಿಗೆ ಪ್ರೋತ್ಸಾಹ ಧನ ಹಾಗೂ ಉಚಿತ್ ವಿದ್ಯುತ್ ಯೋಜನೆ ಈಡೇರಿಸುವ ಬಗ್ಗೆ ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಿಸಲಾಗಿದೆ. ಕಾಂಗ್ರೆಸ್ ಬಹುಮತದೊಂದಿಗೆ ಅಧಿಕಾರ ಹಿಡಿಯಲಿದ್ದು, ಪ್ರಣಾಳಿಕೆಯ ಲ್ಲಿನ ಎಲ್ಲ ಯೋಜನೆಗಳನ್ನು ಜರಿ ಗೊಳಿಸಲಿದೆ ಎಂದು ತಿಳಿಸಿದರು.
ಬಂಗಾರಪ್ಪ ಹಾಗೂ ಕಾಗೋ ಡು ತಿಮ್ಮಪ್ಪ ಅವರ ಹೋರಾಟದ ಫಲವಾಗಿ ರೈತರು ಭೂ ಹಕ್ಕು ಹೊಂದಿzರೆ. ಇತ್ತೀಚೆಗೆ ಆಯ್ಕೆಯಾದ ಜನಪ್ರತಿನಿಧಿಗಳಿಂದ ರೈತಾಪಿ ವರ್ಗಕ್ಕೆ ಸಂಕಷ್ಟ ಎದುರಾಗಿದೆ. ಜನಪರ ಕಾಳಜಿವುಳ್ಳ ಅಭ್ಯರ್ಥಿಯನ್ನು ಆಯ್ಕೆ ಮಾಡಿದರೆ ಯಾವ ಸಮಸ್ಯೆಗಳು ಉದ್ಭವಿಸುವುದಿಲ್ಲ. ಈ ನಿಟ್ಟಿನಲ್ಲಿ ಅಧಿಕಾರ ನಮ್ಮ ಬಳಿ ಇದ್ದರೆ ಜನರ ಅಭಿವೃದ್ಧಿ ಮನೆ ಬಾಗಿಲಿಗೆ ಬರಲಿದೆ ಎನ್ನುವುದನ್ನು ಅರಿತು ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ತಾಲ್ಲೂಕು ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಅಣ್ಣಪ್ಪ, ಮುಖಂಡರಾದ ತಬಲಿ ಬಂಗಾರಪ್ಪ, ಎಚ್. ಗಣಪತಿ, ನಾಗರಾಜ್ ಚಿಕ್ಕಸವಿ, ನೆಹರೂ ಕೊಡಕಣಿ, ಹೂವಪ್ಪ, ಗೋಪಾಲಪ್ಪ ರಾಯನ್, ಶಶಿಕುಮಾರ್,ಎಂ.ಡಿ.ಶೇಖರ್, ಸುರೇಶ್ ಬಿಳವಾಣಿ, ಪ್ರಭಾಕರ್ ಶಿಗ್ಗಾ, ಸಂತೋಷ್, ವಿನಾಯಕ, ದಾನಪ್ಪ, ಶ್ರೀಧರ್, ರವಿ ಬರಗಿ, ಹುಚ್ಚಪ್ಪ, ಇದ್ದರು.