sundaresh

ಶಿವಮೊಗ್ಗ:ಕೇಂದ್ರ ಹಣಕಾಸು ಸಚಿವ ನಿರ್ಮಲ ಸೀತಾರಾಮನ್ ಮಂಡಿಸಿರುವ ಬಜೆಟ್ ಕಾಟಾ ಚಾರದ ನಿರಾಶದಾಯಕ ವೇಸ್ಟ್ ಬಜೆಟ್ ಆಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್ ಸುಂದರೇಶ್ ದೂರಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಅತ್ಯಂತ ಕಳಪೆ ಬಜೆಟ್. ಕಳೆದ ಬಜೆಟ್‌ನಲ್ಲಿ ಕರೋನದಲ್ಲಿ ಸಂಕಷ್ಟಕ್ಕೆ ಒಳಗಾದವರಿಗೆ ೨೦,೦೦೦ ಕೋಟಿ ಹಣವನ್ನು ಸಣ್ಣ ಕೈಗಾರಿಕೆ ಗಳಿಗೆ ಮೀಸಲು ಇಟ್ಟಿರುವುದಾಗಿ ಘೋಷಣೆ ಮಾಡಿದ್ದರು. ಆದರೆ ಜಿಲ್ಲೆಯ ಯಾವ ಕೈಗಾರಿಕೆಗು ಇದರಿಂದ ಪ್ರಯೋಜನ ಆಗಲಿಲ್ಲ. ೨೦೨೨ ಗುಡಿಸಲು ಮುಕ್ತ ರಾಷ್ಟ್ರ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಣೆ ಮಾಡಿದ್ದರು. ಈವರೆಗೂ ಜಿಲ್ಲೆಯಲ್ಲಿ ಒಂದು ಮನೆಯ ನಿರ್ಮಾಣ ಆಗಿಲ್ಲ ಎಂದು ದೂರಿದರು.
ಈ ಬಾರಿಯ ಬಜೆಟ್‌ನಲ್ಲಿ ಮಹಿಳೆಯರಿಗೆ ಒತ್ತು ನೀಡಿರುವು ದಾಗಿ ಘೋಷಣೆ ಮಾಡಿದ್ದಾರೆ ಆದರೆ ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ಯಾವುದೇ ಪರಿಹಾರ ಇದರಲ್ಲಿ ಇಲ್ಲ ನಿರು ದ್ಯೋಗ ನಿವಾರಣೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂಷಿಸಿದರು.
ಈ ಕೇಂದ್ರ ಬಜೆಟ್‌ನಲ್ಲಿ ಯಾವುದೇ ಉಚಿತ ಭರವಸೆ ನೀಡಿಲ್ಲ ಇವರು ಕೇವಲ ರಾಮಮಂದಿರ ಮತ್ತು ಇವಿಎಂ ಮೇಲೆ ಚುನಾವಣೆ ನಡೆಸಲು ಹೊರಟಿದ್ದಾರೆ ಜನಗಳ ಬಗ್ಗೆ ಯಾವುದೇ ಕಾಳಜಿ ಇಲ್ಲ ಧರ್ಮದ ಆಧಾರದ ಮೇಲೆ ಚುನಾವಣೆ ನಡೆಸುವುದೇ ಬಿಜೆಪಿ ಅಜೆಂಡ ಎಂದು ದೂರಿದರು.
ಪ್ರಮುಖರಾದ ಚಂದ್ರಶೇಖರ್, ಕಲೀಮ್ ಪಾಷಾ, ಚಂದನ್, ಚಂದ್ರ ಭೂಪಾಲ, ಸೌಗಂಧಿಕಾ, ಮುಜೀಬ್ , ವೈ.ಬಿ. ಚಂದ್ರಕಾಂತ್, ಪಿ.ಎಸ್. ಗಿರೀಶ್‌ರಾವ್, ಆಫ್ರಿದಿ, ಪ್ರವೀಣ್, ಇನ್ನಿತರರು ಇದ್ದರು.