ಅಧಿಕಾರಕ್ಕಾಗಿ ದೇಶ ಒಡೆದವರು ಕಾಂಗ್ರೆಸ್ಸಿಗರು: ಈಶ್ವರಪ್ಪ ಕಿಡಿ

kse

ಶಿವಮೊಗ್ಗ: ದೇಶದ ಜನರ ಮನಸ್ಸಿನಲ್ಲಿ ಒಂದು ಕಡೆ ರಾಮ ಇದ್ದರೆ ಮತ್ತೊಂದು ಕಡೆ ಮೋದಿ ಇದ್ದಾರೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಜೆಟ್ ಅನ್ನು ಸಂತೋಷದಿಂದ ಸ್ವಾಗತ ಮಾಡುತ್ತೇನೆ. ಜನಸಾಮಾನ್ಯರಿಗೆ ಬೇಕಾದ ಮೂಲಸೌಕರ್ಯ ಕೊಟ್ಟಿ ದ್ದಾರೆ. ನಮ್ಮ ರಾಜ್ಯ ಇಡೀ ದೇಶಕ್ಕೆ ಹಾಗೂ ಪ್ರವಾಸೋದ್ಯಮಕ್ಕೆ ಹೆಸರುವಾಸಿ. ಪ್ರವಾಸೋದ್ಯಮಕ್ಕೆ ಬಡ್ಡಿ ರಹಿತ ಸಾಲ ಕೊಡುತ್ತಿದೆ. ಕಾಂಗ್ರೆಸ್ ಪಕ್ಷ ಹಿಂದೂಸ್ತಾನ, ಪಾಕಿಸ್ತಾನ ಒಡೆದು ಅಧಿಕಾರ ಪಡೆಯಲು ದೇಶ ಒಡೆದರು. ಪಾಕಿಸ್ತಾನದಲ್ಲಿ ಈ ವ್ಯವಸ್ಥೆ ಇದೆ. ನಮ್ಮ ದೇಶದ ಹಿಂದೂ, ಮುಸ್ಲಿಂ ಹಾಗೂ ಕ್ರಿಶ್ಚಿಯನ್ನರು ಅಣ್ಣ- ತಮ್ಮಂದಿರ ರೀತಿ ಇದ್ದೇವೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
ಸಂಸದ ಡಿ.ಕೆ.ಸುರೇಶ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ದೇಶ ಒಡೆದು ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಜಿನ್ನಾ ಸಂಸ್ಕೃತಿಯನ್ನು ಸಂಸದ ಡಿ.ಕೆ.ಸುರೇಶ್ ಮಾತನಾಡಿ ದ್ದಾರೆ. ಡಿಕೆಶಿ ಇದನ್ನು ಸ್ವಾಗತ ಮಾಡಿದ್ದಾರೆ. ಎಲ್ಲಾ ಕಾಂಗ್ರೆಸ್ ನವರು ಇದನ್ನು ಒಪ್ಪಿಲ್ಲ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಒಪ್ಪಿಲ್ಲ. ಸಿದ್ದರಾಮಯ್ಯ ಹೇಳಿಕೆಯನ್ನು ಸ್ವಾಗತ ಮಾಡು ತ್ತೇನೆ ಎಂದರು.
ದೇಶದ ಮುಂದೆ ನಾನು ಒಬ್ಬ ದೊಡ್ಡ ರಾಜಕಾರಣಿ ಅಂತಾ ತೋರಿ ಸಲು ಅಣ್ಣ-ತಮ್ಮ ಮಾತನಾಡಿ ದ್ದಾರೆ. ತನ್ನ ವೈಯಕ್ತಿಕ ಅಸ್ತಿತ್ವ ತೋರಿಸಲು ಸುರೇಶ್ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಯಾರು ಏನು ಬೇಕಾದರೂ ಮಾತನಾಡಬಹುದು ಅದು ಕಾಂಗ್ರೆಸ್ ಪಕ್ಷ ಎಂದು ಕುಟುಕಿದರು.
ಸಿಎಂ ಸಿದ್ದರಾಮಯ್ಯ ಶ್ವೇತ ಪತ್ರ ಹೊರಡಿಸುವ ಬಗ್ಗೆ ಪ್ರತಿಕ್ರಿಯಿಸಿ, ಸಿಎಂ ಶ್ವೇತಪತ್ರ ಹೊರಡಿಸುತ್ತೇನೆ ಎಂದ್ದಾರೆ. ಅದು ಸುಳ್ಳು. ಸಿಎಂ ಸಿದ್ದರಾಮಯ್ಯ ಶ್ವೇತಪತ್ರ ಹೊರಡಿಸಿದರೆ ಅವರು ಬೆತ್ತಲೆ ಆಗುತ್ತಾರೆ. ಹಿಂದುಳಿದ ವರ್ಗದ ಆಯೋಗದ ವರದಿ ಬಿಡುಗಡೆ ಮಾಡ್ತೀನಿ ಅಂತಾ ೯ ವರ್ಷದಿಂದ ಹೇಳ್ತಿದ್ದಾರೆ. ಕಾಂಗ್ರೆಸ್ ನವರು ದೇಶ ಛಿದ್ರ ಮಾಡಲಿಲ್ಲ, ಸಮಾಜವನ್ನು ಛಿದ್ರ ಛಿದ್ರ ಮಾಡಿದರು. ಸುಳ್ಳು ಹೇಳುವುದರಲ್ಲಿ ಸಿದ್ದರಾಮಯ್ಯ ಅವರಿಗೆ ನೋಬೆಲ್ ಕೊಡಬೇಕು. ಲೋಕಸಭಾ ಚುನಾವಣೆ ನಂತರ ಈ ಸರ್ಕಾರ ಇರಲ್ಲ, ಗ್ಯಾರಂಟಿ ಯೋಜನೆಯೂ ಇರಲ್ಲ. ಆಕಸ್ಮಾತ್ ಉಳಿದರೆ ಗ್ಯಾರಂಟಿ ಉಳಿಸಿಕೊಳ್ಳಲ್ಲ. ಈ ಸರ್ಕಾರ ಪಾಪರ್ ಎದ್ದು ಹೋಗಿದೆ ಎಂದು ಲೇವಡಿ ಮಾಡಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆಗೆ ಪುತ್ರ ಕಾಂತೇಶ್ ಸ್ಪರ್ಧೆ ಕುರಿತು ಮಾತನಾಡಿದ ಅವರು, ಕಾಂತೇಶ್ ಹಾವೇರಿ ಯಲ್ಲಿ ಸ್ಪರ್ಧೆ ಮಾಡಬೇಕು ಎಂಬುದು ಕಾರ್ಯಕರ್ತರು ಮತ್ತು ಹಿರಿಯರ ಅಪೇಕ್ಷೆ. ಟಿಕೆಟ್ ಸಿಕ್ಕರೆ ಸ್ಪರ್ಧೆ ಮಾಡುತ್ತಾರೆ. ಅವರ ಗೆಲುವು ನಿಶ್ಚಿತ. ಯಾರೇ ಸ್ಪರ್ಧೆ ಮಾಡಿದರೂ ಗೆಲ್ಲಿಸುತ್ತೇವೆ ಎಂಬುದು ನಾಯಕರ ಅಭಿ ಪ್ರಾಯ. ಇಡೀ ದೇಶದ ಜನರ ಮನಸಿನಲ್ಲಿ ಒಂದು ಕಡೆ ರಾಮ ಇದ್ದರೆ ಮತ್ತೊಂದು ಕಡೆ ಮೋದಿ ಇದ್ದಾರೆ. ಸರ್ವಾಧಿಕಾರಿ ಇಂದಿರಾ ಗಾಂಧಿ ಅವರಾ, ನರೇಂದ್ರ ಮೋದಿ ಅವರಾ ಎನ್ನುವುದನ್ನು ಖರ್ಗೆ ತೀರ್ಮಾನ ಮಾಡಲಿ. ಏನೋ ಟೀಕೆ ಮಾಡಬೇಕು, ಟೀಕೆ ಮಾಡ್ತಾರೆ. ಅಧಿಕೃತ ವಿಪಕ್ಷದ ನಾಯಕ ಆಗಲೂ ಸಹ ಅವರಿಂದ ಆಗಲಿಲ್ಲ. ಕಳೆದ ಬಾರಿ ಲೋಕಸಭೆ ಚುನಾವಣೆ ಇದ್ದಾಗ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ದಲ್ಲಿತ್ತು. ಸಿದ್ದರಾಮಯ್ಯ ಸಿಎಂ ಆಗಿದ್ದರು. ಬಿಜೆಪಿ ಒಂದು ಸ್ಥಾನ ಗೆಲ್ಲುವುದಿಲ್ಲ ಅಂತಿದ್ದರು. ೨೬ ಸ್ಥಾನ ಗೆದ್ದೆವು. ಈ ಬಾರಿ ೨೮ ಕ್ಕೆ ೨೮ ಗೆಲ್ಲುತ್ತೇವೆ ಎಂದು ತಿಳಿಸಿದ್ದಾರೆ.