ವಿದ್ಯಾರ್ಥಿನಿ ಆತ್ಮಹತ್ಯೆ: ಪೋಷಕರೇ ಎಚ್ಚರ… ಹೆಚ್ಚುತ್ತಿದೆ ವಿದ್ಯಾರ್ಥಿಗಳ ಮೇಲೆ ಒತ್ತಡ…

122

ಶಿವಮೊಗ್ಗ: ನಗರದ ಪ್ರತಿಷ್ಠಿತ ಆದಿಚುಂಚನಗಿರಿ ಕಾಲೇಜಿನ ದ್ವಿತಿಯ ಪಿಯುಸಿ ವಿದ್ಯಾರ್ಥಿನಿ ಇಂದು ಬೆಳಿಗ್ಗೆ ಕಾಲೇಜು ಕಟ್ಟಡದ ಮೇಲಿಂದ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆ ಶರಣಾದ ಘಟನೆ ನಡೆದಿದೆ.
ಮೇಘಾಶ್ರೀ (೧೮) ಮೃತ ವಿದ್ಯಾರ್ಥಿನಿ. ಈಕೆ ಶಿವಮೊಗ್ಗದ ಶರಾವತಿ ನಗರದಲ್ಲಿರುವ ಆದಿ ಚುಂಚನಗಿರಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು.
ಇತ್ತ ಮೆಗ್ಗಾನ್ ಆಸ್ಪತ್ರೆಯಲ್ಲಿ ಮೇಘಾಶ್ರೀ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ದೊಡ್ಡಪೇಟೆ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.
ಭಾರೀ ಪ್ರತಿಭಟನೆ: ಮೃತ ವಿದ್ಯಾರ್ಥಿನಿ ಮೇಘನಾ ಮೂಲತಃ ಚನ್ನಗಿರಿ ತಾಲೂಕು ಚನ್ನಾಪುರದವಳಾಗಿzಳೆ. ಈಕೆ ಆದಿಚುಂಚನಗಿರಿಯ ಶಾಲೆಯ ಹಾಸ್ಟೆಲ್‌ನಲ್ಲಿದ್ದಳು. ಇಂದು ಬಯೋಲಜಿ ಪರೀಕ್ಷೆ ಇದ್ದು ಶೌಚಾಲಯಕ್ಕೆ ಹೋಗುವುದಾಗಿ ಹೇಳಿ ಶಾಲೆಯ ಮೇಲಿಂದ ಕೆಳಗೆ ಹಾರಿ ಬಿದ್ದು ಆತ್ಮ ಹತ್ಯೆ ಮಾಡಿಕೊಂಡಿzಳೆ ಎಂದು ಮೂಲಗಳು ತಿಳಿಸಿದೆ.
ಇತ್ತ ಆದಿಚುಂಚನಗಿರಿ ಕಾಲೇಜ್ ಬಳಿ ಧಾವಿಸಿರುವ ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳು ಇದು ಆಕಸ್ಮಿಕವೋ? ಆತ್ಮಹತ್ಯೆಯೋ? ಕಿರುಕುಳವೋ? ಖಿನ್ನತೆಯೋ? ಅವಮಾನವೋ? ಎಂದು ಕಾಲೇಜ್ ಕ್ಯಾಂಪಸ್‌ನಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದ ದೃಷ್ಯ ಸಾಮಾನ್ಯವಾಗಿತ್ತು.
ಈ ದುರ್ಘಟನೆ ಪ್ರತಿಭಟನಾಕಾರರ ಆಕ್ರೋಶಕ್ಕೆ ಕಾರಣವಾಗಿದ್ದು, ಸದರಿ ಕಾಲೇಜಿನ ಮುಖ್ಯಸ್ಥರೂ ಆದ ಆದಿಚುಂಚನಗಿರಿ ಮಠದ ಶ್ರೀ ಪ್ರಸನ್ನನಾಥ ಸ್ವಾಮೀಜಿಗಳು ಹಾಗೂ ಡಿಸಿ-ಎಸ್‌ಪಿ ಸ್ಥಳಕ್ಕೆ ಬರಬೇಕೆಂದು ಪಟ್ಟುಹಿಡಿದು ಭಾರೀ ಪ್ರತಿಭಟನೆ ನಡೆಸಿದರು. ಸಾವನ್ನಪ್ಪಿದ ಮಗಳ ಬಗ್ಗೆಯೂ ಸರಿಯಾದ ಮಾಹಿತಿ ನೀಡಿಲ್ಲ ವೆಂಬುದು ಮೃತ ವಿದ್ಯಾರ್ಥಿನಿಯ ತಂದೆ ಓಂಕಾರಪ್ಪನವರ ಆರೋಪವಾಗಿದೆ. ಮಗಳ ಮೃತ ದೇಹ ಮರಣೋತ್ತರ ಪರೀಕ್ಷೆಗೆ ತಂದ ತಕ್ಷಣ ತಂದೆ ಓಂಕಾರಪ್ಪ ಮತ್ತು ಸ್ನೇಹಿತರು ಆದಿಚುಂಚನಗಿರಿ ಶಾಲೆಗೆ ದೌಡಾಯಿಸಿ ಆಕ್ರೋಶ ವ್ಯಕ್ತಪಡಿಸಿದರು.
ಮೊದಲಿಗೆ ಶಾಲೆಯ ಗೇಟು ಮುಚ್ಚಲಾಗಿತ್ತು. ಗೇಟನ್ನು ದಬ್ಬಿ ಒಳನುಗ್ಗಿ ದ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ಪೋಷಕರು ಮತ್ತು ವಿವಿಧ ಸಂಘಟನೆಗಳ ಪ್ರಮುಖರು ಸೀದಾ ಆಡಳಿತ ಮಂಡಳಿ ಕಚೇರಿಗೆ ಪ್ರವೇಶಿಸಿ, ವಿದ್ಯಾರ್ಥಿನಿಯ ಸಾವಿಗೆ ಶಾಲೆಯ ವಾರ್ಡನ್ ಮತ್ತು ಶಿಕ್ಷಕರ ಕಿರುಕುಳ ಕಾರಣ ಎಂದು ಆರೋಪಿಸಿದ್ದಾರೆ. ಇಲಾಖೆ ಸಹ ಪರವಾನಗಿ ನೀಡಿ ಕಾಲೇಜಿನ ಮನಸ್ಸೋ ಇಚ್ಚೇ ಆಡಳಿತ ನಡೆಸಲು ಬಿಟ್ಟಿರುವುದೇ ಈ ಎ ಗೊಂದಲಗಳಿಗೆ ಕಾರಣ ಎಂಬುದು ಪೋಷಕರು ಹಾಗೂ ಪ್ರತಿಭಟನಾಕಾರರ ಆರೋಪವಾಗಿದೆ.
ಮುಂದುವರೆದ ಪೋಷಕರ ಆಕ್ರೋಶ-ಎಸ್ಪಿಯೊಂದಿಗೆ ಸಭೆ
ಖಾಸಗಿ ಶಾಲೆಯಲ್ಲಿ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿನಿ ದಿಢೀರ್ ಅಂತ ಕಟ್ಟಡದಿಂದ ಹಾರಿ ಜೀವ ಕಳೆದುಕೊಂಡ ಪ್ರಕರಣ ಈಗ ಕನ್ನಡ ಸಂಘಟನೆ ಮತ್ತು ಪೋಷಕರ ಆಕ್ರೋಶ ಸ್ಪೋಟವಾಗಲು ಕಾರಣವಾಗಿದೆ. ಕಾಲೇಜಿನ ಮುಂಭಾಗದಲ್ಲಿ ಪೋಷಕರ ಜಮಾವಣೆ ದಟ್ಟವಾಗುತ್ತಾ ಹೋದ ಪರಿಣಾಮ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿದರು. ಎಸ್ಪಿ ಅವರ ಮುಂದೆ ಪೋಷಕರು ತಮ್ಮ ಅಹವಾಲು ಹೇಳಿಕೊಂಡಿದ್ದು, ಕಾಲೇಜಿನಲ್ಲಿ ಒಂದು ದಿನ ಶುಲ್ಕ ಕಟ್ಟೋದು ತಡವಾದರೆ ಪೋಷಕರನ್ನ ಕರೆಯಿಸುವ ಶಾಲಾ ಆಡಳಿತ ಮಂಡಳಿ ಒಂದು ವಿದ್ಯಾರ್ಥಿನಿಯ ಜೀವ ಕಳೆದಿದೆ. ಆಡಳಿತ ಮಂಡಳಿಯವರು ಒಬ್ಬರು ಸ್ಥಳದಲ್ಲಿ ಇಲ್ಲ. ಹಾಗಾಗಿ ಆಡಳಿ ಮಂಡಳಿಯವರನ್ನ ಮತ್ತು ಸ್ವಾಮೀಜಿಯವರನ್ನ ಬಂಧಿಸುವಂತೆ ಪಟ್ಟು ಹಿಡಿದಿದ್ದಾರೆ.
ಜಿಲ್ಲಾ ರಕ್ಷಣಾಧಿಕಾರಿಗಳು ಅವರು ಬಂಧನದ ಬಗ್ಗೆ ಯಾವುದೇ ಬಹಿರಂಗ ಹೇಳಿಕೆ ಕೊಡಲ್ಲ ಏನು ನಿಮಗೆ ತಪ್ಪು ಅನಿಸಿದೆ ಅದನ್ನ ಲಿಖಿತ ರೂಪದಲ್ಲಿ ಕೊಡಿ ಎಂದು ತಿಳಿಸಿzರೆ. ಆಡಳಿತ ಕಚೇರಿಯಲ್ಲಿ ಶಾಲಾ ಆಡಳಿತ ಮಂಡಳಿ, ಪೋಷಕರನ್ನ ಕರೆಯಿಸಿ ಸಭೆ ನಡೆಸಲು ಎಸ್‌ಪಿ ಮುಂದಾಗಿzರೆ ಎನ್ನಲಾಗಿದೆ.
ವಿದ್ಯಾರ್ಥಿನಿಯ ಸಾವಿನ ಬಗ್ಗೆ ಸಮಗ್ರ ತನಿಖೆಯಾಗಬೇಕು. ಆಡಳಿತ ಮಂಡಳಿಯವರನ್ನ ಬಂಧಿಸಬೇಕು ಎಂಬುದು ಪೋಷಕರ ಆಗ್ರಹವಾಗಿದೆ. ಒಂದುಮೂಲದ ಪ್ರಕಾರ ಪರೀಕ್ಷೆಯಲ್ಲಿದ್ದ ವಿದ್ಯಾರ್ಥಿನಿಯು ಕಾಫಿ ಹೊಡೆಯುತ್ತಿದ್ದ ಕಾರಣ ತರಗತಿಯ ವಿದ್ಯಾರ್ಥಿನಿಗೆ ಅವಮಾನ ಮಾಡಲಾಗಿದೆ ಎಂಬ ಆರೋಪ ಕೂಡ ಕೇಳಿ ಬಂದಿದ್ದು, ಅವಮಾನ ತಾಳಲಾರದೆ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕನ್ನಡ ಸಂಘಟನೆಯ ಪ್ರಮುಖರೋರ್ವರು ಆರೋಪಿಸಿzರೆ. ಸಿಸಿ ಟಿವಿ ಫೋಟೋದಲ್ಲಿ ಇವೆ ಸೆರೆಯಾಗಿದ್ದು ಇವುಗಳನ್ನ ಪೋಷಕರು ತೋರಿಸುವಂತೆ ಪಟ್ಟು ಹಿಡಿದಿzರೆ.
ಕ್ಷಣ ಕ್ಷಣಕ್ಕೂ ಸ್ಪೋಟ ಗೊಳ್ಳುತ್ತಿದೆ ಪೋಷಕರ ಆಕ್ರೋಶ
ಸಂಜೆ ವೇಳೆಗೆ ಕಾಲೇಜು ಆವರಣಕ್ಕೆ ಜಿಲ್ಲಾ ರಕ್ಷಣಾಧಿಕಾರಿಗಳು ಆಗಮಿಸಿ ವಿದ್ಯಾರ್ಥಿನಿ ಸಾವಿನ ಕುರಿತಂತೆ ಕಾಲೇಜಿನ ಒಳ ಕೊಠಡಿಯಲ್ಲಿ ಎಸ್ಪಿ ನೇತೃತ್ವದಲ್ಲಿ ಸಭೆ ನಡೆಯುತ್ತಿದ್ದರೆ ಹೊರಗಡೆ ಮೃತ ವಿದ್ಯಾರ್ಥಿನಿಯ ತಾಯಿ ಮತ್ತು ಅವರ ಸಂಬಂಧಿಕರ ಆಕ್ರೋಶ ಕ್ಷಣ ಕ್ಷಣಕ್ಕೂ ಸ್ಫೋಟಗೊಳ್ಳುತ್ತಿತ್ತು.
ಕಳೆದ ಒಂದೂವರೆ ಗಂಟೆ ಹಿಂದೆ ಸಿಸಿ ಟಿವಿ ವಿಡಿಯೋ ಪರಿಶೀಲನೆಗೆಂದು ಮೃತ ವಿದ್ಯಾರ್ಥಿನಿಯ ಕಡೆಯವನ್ನ ಒಳಗಡೆ ಕರೆದೊಯ್ಯಲಾಗಿದ್ದು ಹೊರಗಡೆ ಬಂದಿಲ್ಲ. ಒಳಗಡೆ ಏನೋ ನಡೆಯುತ್ತಿದೆ. ಕೇಸ್ ಮುಚ್ಚಿಹಾಕಲು ಯತ್ನಿಸಲಾಗುತ್ತಿದೆ ಎಂದು ಮೇಘಶ್ರೀಯ ತಾಯಿ ಮತ್ತು ಸಂಬಂಧಿಕರು ಆಕ್ಷೇಪ ವ್ಯಕ್ತಪಡಿಸಿzರೆ.
ನಮಗೆ ಯಾವುದೇ ಮಾತುಕತೆ ಬೇಡ ಪ್ರಾಂಶುಪಾಲರನ್ನ ಬಂಧಿಸಬೇಕೆಂದು ಸಂಬಂಧಿಕರು ಕಾಲೇಜಿನ ಮುಂಭಾಗದಲ್ಲಿ ಧಿಡೀರ್ ಪ್ರತಿಭಟನೆ ನಡೆಸಿzರೆ. ಒಟ್ಟಿನಲ್ಲಿ ಹೊರಗಡೆ ಇರುವ ಪೋಷಕರ ತಾಳ್ಮೆ ಕ್ಷಣ ಕ್ಷಣಕ್ಕೂ ಸ್ಪೋಟಗೊಳ್ಳುತ್ತಿದೆ.
ಸದರಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ಸ್ವಾಮೀಜಿಯ ಅರೆಸ್ಟ್ ಆಗಬೇಕು ಎಂದು ಕೆಲ ಪ್ರತಿಭಟನಾಕಾರರು ಆಗ್ರಹಿಸಿzರೆ. ಒಂದು ದಿನ ಫೀಸ್ ಕಟ್ಟೋದು ತಡವಾದರೂ ಕಾಲೇಜಿನವರು ವಿದ್ಯಾರ್ಥಿಗಳಿಗೆ ಇತರೆ ವಿದ್ಯಾರ್ಥಿಗಳ ಎದುರು ಕಿರುಕುಳ ನೀಡಿ ಅವಮಾನಿಸುತ್ತಾರೆ. ಈ ಕಾರಣಕ್ಕಾಗಿಯೇ ಇಂದು ಒಂದು ಜೀವಹೋಗಿದೆ ಎಂದು ಗಂಭೀರ ಆರೋಪ ಮಾಡಿರುವ ಪ್ರತಿಭಟನಾಕಾರರು, ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಬಂದು ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದ್ದಾರೆ.