ನಮ್ಮ ಶಿಕ್ಷಣ ಕಳಪೆ ಮಟ್ಟದಿಂದ ಕೂಡಿದೆ:ಮಂಜುನಾಥ್
ಭದ್ರಾವತಿ:ಇಂದಿನ ಕೆಲ ಉಚಿತ ಕೊಡುಗೆಗಳು ನಮ್ಮಗಳ ಕ್ರೀಯಾಶೀಲತೆಯನ್ನು ಹಾಳು ಮಾಡುತ್ತದೆ. ಇದರ ಜೊತೆಯಲ್ಲಿ ಸ್ವಾವಲಂಬಿ ಬದುಕನ್ನು ಕಸಿದು ಕೊಂಡು ಸ್ವಾತಂತ್ರ್ಯ ಜೀವನವನ್ನು ನಡೆಸಲು ಬಿಡುವುದಿಲ್ಲ. ಇದು ಮನುಷ್ಯನ ವ್ಯಕ್ತಿತ್ವವನ್ನು ಅರಳಿಸುವ ಸಭೆ ಸಮಾರಂಭ ಕಾರ್ಯಕ್ರಮಗಳನ್ನು ಬಿಡದೆ ಅದರ ಮಹತ್ವ ತಿಳಿಯುವುದಿಲ್ಲ ಎಂದು ಅಭಿಪ್ರಾಯಿಸಿದರು.
ಅವರು ಕಸಾಪ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಜಿ ಕನ್ನಡ ಸಾಹಿತ್ಯ ಸಾಂಸ್ಕ್ರತಿಕ ವೇದಿಕೆ, ಮೆಟ್ರಿಕ್ ನಂತರ ಬಾಲಕ /ಬಾಲಕಿರ ವಿಧ್ಯಾರ್ಥಿಗಳಿಗಾಗಿ ಹಳೇ ನಗರದ ಶ್ರೀ ವೀರಶೈವ ಸಮುದಾಯ ಭವನದಲ್ಲಿ ಏರ್ಪ ಡಿಸಿದ್ದ ವಾಚನಾಭಿರುಚಿ ಕಮ್ಮಟ, ಸಾಹಿತ್ಯ- ಸಂವಾದ- ಕುಶಲತೆ -ವ್ಯಕ್ತಿತ್ವ-ವಿಶ್ವಾಸ ಕಾರ್ಯಕ್ರಮ ವನ್ನು ಉಧ್ಘಾಟಿಸಿ ಮಾತನಾಡಿ ದರು.
ಇಂದು ವಿದ್ಯಾರ್ಥಿ ನಿಲಯದ ವಿಧ್ಯಾರ್ಥಿಗಳು ಕೇವಲ ತಮ್ಮಗಳ ದೈನಂದಿನ ಜೀವನ, ಬದುಕು, ಓದುಗಳಿಗೆ ಮಾತ್ರ ಸೀಮಿತ ರಾಗದೆ ಅದರ ಹೊರತಾಗಿ ಪ್ರಪಂಚ ವಿಶಾಲವಾಗಿದೆ ಎಂಬು ದನ್ನು ತಿಳಿದುಕೊಳ್ಳಬೇಕು. ನಮ್ಮ ನಾಡು ನುಡಿಯ ಬಗ್ಗೆ ಅದರ ಸಂಗತಿಗಳ ತಿಳಿಯುವ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ಇಂತಹ ಕಮ್ಮ,ಟ ಕಾರ್ಯಕ್ರಮವನ್ನು ಆಯೋಜಿ ಸಲಾಗಿದೆ ಎಂದರು.
ಇಂದಿನ ನಮ್ಮ ಶಿಕ್ಷಣ ಕಳಪೆ ಮಟ್ಟದಿಂದ ಕೂಡಿದೆ. ಕೇವಲ ಪರೀಕ್ಷೆಯಲ್ಲಿ ಪಾಸಾದರೆ ಸಾಕು, ಹೆಚ್ಚಿನ ಅಂಕ ಬಂದರೆ ನಮ್ಮ ಜೀವನ ಸಾರ್ಥಕ ಎಂಬ ಭಾವನೆಗೆ ಬಂದು ಬಿಟ್ಟಿದ್ಧೇವೆ. ಕೇವಲ ಅಂಕಗಳ ಹಿಂದೆ ಹೋಗುತ್ತಿದ್ದೇವೆ. ಇದನ್ನು ಮನಗಂಡು ಶೈಕ್ಷಣಿಕ ಗುಣಮಟ್ಟದ ಬಗ್ಗೆ ಸಮೀಕ್ಷೆ ನಡೆಸಿ ದಾಗ ಅದರಲ್ಲಿ ಲವ ಲೇಶವೂ ಉತ್ತಮ ಗುಣಮಟ್ಟ ಕಂಡು ಬರುತ್ತಿಲ್ಲ. ಪ್ರತಿಭೆ ಎಂಬುದು ಇಲ್ಲವೆ ಇಲ್ಲ. ಎಲ್ಲದಕ್ಕಿಂತ ಸಾಮಾನ್ಯ ವಿಷಯಗಳ ಬಗ್ಗೆ ಪತ್ರ, ಪ್ರಬಂಧ ಬರೆಯುವ ಸಾಮರ್ಥ್ಯ ಇಲ್ಲದಿರುವುದು ಕಂಡು ಬಂದಿದೆ. ಇಂತಹ ಸ್ಥಿತಿಗೆ ಇಂದಿನ ವಿದ್ಯಾರ್ಥಿಗಳ ಜೀವನ ಬಂದು ನಿಂತಿದೆ ಎಂದು ವಿಷಾಧಿಸಿದರು.
ಕನ್ನಡ ಸಾಹಿತ್ಯ ಎಂಬುದು ವಿದ್ಯಾರ್ಥಿಗಳ ವಿಕಸನಕ್ಕೆ ಅವರುಗಳ ಬೌದ್ಧಿಕ ಬೆಳವಣಿಗೆಗೆ ತುಂಬಾ ಸಹಾಯ ಮಾಡುತ್ತದೆ. ಸಾಹಿತ್ಯವನ್ನು ಓದಿ ಅದರ ಅನು ಸಂದಾನ ಮಾಡಿದಾಗ ಅದರ ರಸಾನುಭವ ಆಸ್ವಾಧಿಸಲು ಸಾಧ್ಯ. ಅದಕ್ಕಾಗಿ ಓದುವ ಮಾರ್ಗ ಕಂಡು ಕೊಳ್ಳಬೇಕಿದೆ. ಇದರಿಂದ ಎಲ್ಲ ರಲ್ಲೂ ಆತ್ಮ ವಿಶ್ವಾಸ ಲಭಿಸುತ್ತದೆ ಎಂದು ಕರೆ ನೀಡಿದರು.
ವಿದ್ಯಾರ್ಥಿಗಳು ಕಡ್ಡಾಯ ವಾಗಿ ದಿನ ಪತ್ರಿಕೆಗಳನ್ನು ಓದ ಬೇಕು. ಇದರಿಂದ ಪ್ರಪಂಚದ ವಿಧ್ಯ ಮಾನಗಳ ಮಾಹಿತಿ ದೊರೆಯು ತ್ತದೆ. ಸಾಮಾಜ್ಯ eನದ ಮಟ್ಟ ಸುಧಾರಿಸುತ್ತದೆ. ಇಲ್ಲದಿದ್ದರೆ ಮುಂದೆ ನೀವುಗಳು ನಿಮ್ಮ ಉದ್ಯೊ ಗದ ಸಂದರ್ಶನಕ್ಕೆ ಹೋದಾಗ ಅಲ್ಲಿ ಮಖಿಕ ಪ್ರಶ್ನೆಗಳಿಗೆ ಉತ್ತರಿ ಸಲು ಸಾಧ್ಯವಾಗದೆ ತಡಬಡಿ ಸಬೇಕಾಗುತ್ತದೆ. ಅದಕ್ಕೆ ಮುಖ್ಯ ಕಾರಣ ನಿಮಗೆ ಈ ಬಗ್ಗೆ ಯಾವುದೆ ಮಾಹಿತಿ ಇರುವುದಿಲ್ಲ ಎಂದರು.
೧೦೦ ಕ್ಕೆ ೧೦೦ ಅಂಕ, ಕನ್ನಡ ದಲ್ಲಿ ೧೨೫ ಕ್ಕೆ ೧೨೫ ಅಂಕಗಳನ್ನು ಪಡೆದ ಪ್ರತಿಭಾವಂತ ವಿಧ್ಯಾರ್ಥಿ ಇಂದು ಸಾಮಾನ್ಯ ವಿಷಯದ ಬಗ್ಗೆ ಸರಿಯಾದ ಗುಣಮಟ್ಟದ ಪ್ರಬಂ ಧವನ್ನು ಬರೆಯಲು ಸಾಧ್ಯವಾಗದ ಬಗ್ಗೆ ವಿಷಾಧಿಸಿದರು. ಇಲ್ಲಿಗೆ ನಮ್ಮ ಶೈಕ್ಷಣಿಕ ಗುಣ ಮಟ್ಟ ಬಂದು ನಿಂತಿ ದೆ ಎಂದು ಲೇವಡಿ ಮಾಡಿದರು.
ಕಾರ್ಯಕ್ರಮದ ನಂತರ ವಿವಿಧ ಗೋಷ್ಟಿಗಳು ನಡೆಯಿತು. ಕಾವ್ಯ-ಓದು-ಅಂತರಾಳ-ವಿವೇಕ ದ ಬಗ್ಗೆ ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನ ಅಧ್ಯಾಪಕ ಪ್ರೂ.ಸಿರಾಜ್ ಅಹಮದ್, ಶ್ರೀಆದಿಚುಂಚನಗಿರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ಹರೀಣಾಕ್ಷಿ, ಕಥೆ-ಗ್ರಹಿಕೆ-ಅರಿವು-ಅಭಿವ್ಯಕ್ತಿ ಬಗ್ಗೆ ಶಿವಮೊಗ್ಗದ ವಿಶ್ರಾಂತ ಪ್ರಾಂಶುಪಾಲರು ಹಾಗು ಸಾಹಿತಿ ಗಳಾದ ಹೆಚ್.ಟಿ.ಕೃಷ್ಣಮೂರ್ತಿ, ಉಪನ್ಯಾಸಕ ಜಿ.ಆರ್.ಲವ, ಸಾಹಿತಿ ಭದ್ರಾವತಿ ದೀಪ್ತಿ, ಮದ್ರಣ ಮಾಧ್ಯಮ,ಅಬ್ಬರ ಅಲ್ಲ ಅಭಿವ್ಯಕ್ತಿ ಬಗ್ಗೆ ಚಿಕ್ಕಮಗಳೂರಿನ ಸಾಹಿತಿ ರವೀಶ್ ಕ್ಯಾತನಬೀಡು, ಪತ್ರಕರ್ತ ಎನ್.ಬಾಬು, ಶಿವಮೊಗ್ಗದ ವಿಶ್ರಾಂತ ಪ್ರಾಧ್ಯಾಪಕ ಲೇಖಕ ಡಾ.ಕೆ.ಜಿ.ವೆಂಕಟೇಶ್ ಭಾಗವಹಿ ಸಿದ್ದರು. ನಂತರ ಗುಂಪು ಚರ್ಚೆ ನಡೆಯಿತು.
ಹಿರಿಯ ಸಾಹಿತಿ ಎಂ. ಚಂದ್ರಶೇಖರಯ್ಯ ಅಧ್ಯಕ್ಷತೆ ವಹಿಸಿ ದ್ದರು. ಕನ್ನಡ ಸಾಹಿತ್ಯ ಸಾಂಸ್ಕ್ರತಿಕ ವೇದಿಕೆ ಅಧ್ಯಕ್ಷೆ ಎಂ.ಎಸ್. ಸುಧಾಮಣಿ, ಸೇರಿದಂತೆ ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಾಗರತ್ನ ವಾಗೀಶ್ ಕೋಠಿ ಪ್ರಾರ್ಥನೆ ಮಾಡಿದರು. ಸುಮತಿ ಕಾರಂತ್ ಮತ್ತು ಸಂಗಡಿಗರು ನಾಡ ಗೀತೆ ಹಾಡಿದರು. ಸಿ.ಎಂ.ರಮೇಶ್ ಸ್ವಾಗತಿಸಿದರು. ಭರತ್ ಕಾರ್ಯಕ್ರಮ ನಿರೂಪಿಸಿ ದರು. ಶಿವಕುಮಾರ್ ವಂದನಾ ರ್ಪಣೆ ಮಾಡಿದರು.