ಡಿಜಿಟಲ್ ಮಾರುಕಟ್ಟೆ ಕಾರ್‍ಯಾಗಾರ…

30-11-2023-digital-marketin

ಶಿವಮೊಗ್ಗ: ಡಿಜಿಟಲ್ ಮಾರುಕಟ್ಟೆಯು ಆಧುನಿಕ ಯುಗದಲ್ಲಿ ಅತ್ಯಂತ ಮಹತ್ತರ ಪಾತ್ರ ವಹಿಸುತ್ತಿದ್ದು, ವ್ಯಾಪಾರ ವಹಿವಾಟನ್ನು ಆನ್‌ಲೈನ್ ಮುಖಾಂತರ ಹೆಚ್ಚು ವೃದ್ಧಿಗೊಳಿ ಸಲು ಸಾಧ್ಯವಿದೆ ಎಂದು ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ.ರ ತ್ನಪ್ರಭಾ ಅಭಿಪ್ರಾಯಪಟ್ಟರು.
ನಗರದ ಮಥುರಾ ಪಾರಾ ಡೈಸ್‌ನಲ್ಲಿ ಸ್ವೇದ ಮಹಿಳಾ ಉದ್ಯ ಮಿಗಳ ಸಂಘದ ವತಿಯಿಂದ ಯುನೈಟೆಡ್ ನೇಷನ್ಸ್ ಎಕನಾ ಮಿಕ್ ಅಂಡ್ ಸೋಶಿಯಲ್ ಕಮಿಷನ್ ಫಾರ್ ಏಷ್ಯಾ ಅಂಡ್ ದ ಪೆಸಿಫಿಕ್ ಹಾಗೂ ಉಬುಂಟು ಮಹಿಳಾ ಉದ್ಯಮಿಗಳ ಒಕ್ಕೂಟದ ಸಹಯೋಗದಲ್ಲಿ ಆಯೋಜಿಸಿದ್ದ ಡಿಜಿಟಲ್ ಮಾರ್ಕೆಟಿಂಗ್ ಕಾರ್‍ಯಾ ಗಾರದಲ್ಲಿ ಮಾತನಾಡಿದರು.


ಕರೊನಾ ನಂತರದಲ್ಲಿ ಡಿಜಿ ಟಲ್ ಮಾರುಕಟ್ಟೆ ವ್ಯವಸ್ಥೆ ಅತ್ಯಂತ ಅನಿವಾರ್ಯ ಎನಿಸಿದ್ದು, ಊಟ, ಬಟ್ಟೆ, ಔಷಧಿ, ವೈವಿಧ್ಯ ಉತ್ಪನ್ನ ಗಳು ಸೇರಿದಂತೆ ಎಲ್ಲವೂ ಆನ್ ಲೈನ್ ಮುಖಾಂತರವೇ ಖರೀದಿ ಮಾಡಲು ಜನರು ಮುಂದಾಗಿ zರೆ. ಆದ್ದರಿಂದ ಡಿಜಿಟಲ್ ಮಾರುಕಟ್ಟೆಯು ತುಂಬಾ ಮುಖ್ಯ ಎಂದು ತಿಳಿಸಿದರು.
ಶಿವಮೊಗ್ಗ ಜಿಯಲ್ಲಿ ಮಹಿಳಾ ಉದ್ಯಮಿಗಳಿಗೆ ಜಿಧಿಕಾರಿ ಸೇರಿದಂತೆ ಸ್ಥಳೀಯ ಆಡಳಿ ತವು ಉತ್ತಮ ಸಹಕಾರ ನೀಡುತ್ತಿರುವುದು ಶ್ಲಾಘನೀಯ. ಮಹಿಳಾ ಉದ್ಯಮಿಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವುದು ಅತ್ಯಂತ ಅವಶ್ಯಕ ಎಂದರು.
ಶಿವಮೊಗ್ಗ ಜಿಧಿಕಾರಿ ಡಾ. ಆರ್.ಸೆಲ್ವಮಣಿ ಮಾತನಾಡಿ, ಉದ್ಯಮಕ್ಕೆ ಅಗತ್ಯವಿರುವ ಕೌಶಲ್ಯದ ಶಿಕ್ಷಣವು ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ಇಲ್ಲ. ಸ್ವಯಂ ಪರಿಶ್ರಮದಿಂದಲೇ ಉದ್ಯಮಕ್ಕೆ ಬೇಕಿರುವ ಕೌಶಲ್ಯಗಳನ್ನು ಕಲಿತು ಕೊಳ್ಳಬೇಕು. ಮಾರುಕಟ್ಟೆ eನ ಮುಖ್ಯ ಎಂದು ಹೇಳಿದರು.
ಮಹಿಳಾ ಉದ್ಯಮಿಗಳಿಗೆ ಸರ್ಕಾರದಿಂದ ಹೆಚ್ಚಿನ ಸೌಲಭ್ಯ ಗಳು ಸಿಗುತ್ತಿದ್ದು, ಹೆಚ್ಚಿನ ಅರಿವು ಇಲ್ಲ. ಆದ್ದರಿಂದ ವಿವಿಧ ಇಲಾಖೆ ಗಳಲ್ಲಿ ಮಹಿಳೆಯರಿಗೆ ಸಿಗುವ ಆರ್ಥಿಕ ಹಾಗೂ ಸಾಲ ಸೌಲಭ್ಯಗಳ ಮಾಹಿತಿ ಪಡೆದುಕೊಳ್ಳಬೇಕು. ಅದರ ಸದುಪಯೋಗ ಪಡೆದು ಕೊಳ್ಳಬೇಕು ಎಂದು ತಿಳಿಸಿದರು.
ಮಹಿಳೆ ಉದ್ಯಮಿಗಳು ಬಹು ತೇಕ ಅತ್ಯಂತ ಕೌಶಲ್ಯರಾಗಿದ್ದು, ಉತ್ಪನ್ನಗಳನ್ನು ಸಿದ್ಧಪಡಿಸಿದರೂ ಸೂಕ್ತ ಮಾರುಕಟ್ಟೆ ಪರಿಕಲ್ಪನೆ ಇಲ್ಲದೇ ಸರಿಯಾಗಿ ಜನರನ್ನು ತಲುಪಲಾಗುತ್ತಿಲ್ಲ. ಆದ್ದರಿಂದ ಡಿಜಿಟಲ್ ಮಾರುಕಟ್ಟೆಯ ಕೌಶಲ್ಯ ಗಳನ್ನು ಕಲಿತುಕೊಳ್ಳಬೇಕು ಎಂದು ಸಲಹೆ ನೀಡಿದರು.
ಸ್ವೇದ ಮಹಿಳಾ ಉದ್ಯಮಿಗಳ ಸಂಘದ ಅಧ್ಯಕ್ಷೆ ಡಾ. ಬಿ.ವಿ. ಲಕ್ಷ್ಮೀದೇವಿ ಗೋಪಿನಾಥ್ ಮಾತ ನಾಡಿ, ಉತ್ಪನ್ನಗಳನ್ನು ಆನ್‌ಲೈನ್ ನಲ್ಲಿ ಮಾರಾಟ ಮಾಡಲು ತರಬೇತಿ ನೀಡುವ ಆಶಯದಿಂದ ಕಾರ್ಯಗಾರ ಹಮ್ಮಿಕೊಂಡಿದ್ದು, ಡಿಜಿಟಲ್ ಮಾರುಕಟ್ಟೆಯ ಸಂಪೂರ್ಣ ಕಲಿಕೆಯ ಅಂಶಗಳನ್ನು ಪರಿಣಿತರಿಂದ ತಿಳಿದುಕೊಳ್ಳಬೇಕು. ಸಂಸ್ಥೆಯ ವತಿಯಿಂದ ಸೂಕ್ತ ಮಾರ್ಗದರ್ಶನ ನೀಡಲಾಗುತ್ತದೆ ಎಂದು ತಿಳಿಸಿದರು.
ಶಿವಮೊಗ್ಗ ಜಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್, ಸ್ವೇದ ಮಹಿಳಾ ಉದ್ಯಮಿಗಳ ಸಂಘದ ಕಾರ್ಯದರ್ಶಿ ಶಿಲ್ಪಾ ಗೋಪಿ ನಾಥ್, ಸವಿತಾ ಮಾಧವ್, ಸಹನಾ ಚೇತನ್, ಜ್ಯೋತಿ ಬಾಲಕೃಷ್ಣ, ವಿದ್ಯಾ, ವಸಂತ ಹೋಬಳಿದಾರ್, ಅಕ್ಷತಾ ಮುಕುಂದ್, ನಮಿತಾ ಧನಂಜಯ ಸರ್ಜಿ, ಸುನೀತಾ, ವಿರೇಶ್ ನಾಯ್ಕ್ ಮತ್ತಿತರರು ಉಪಸ್ಥಿತರಿದ್ದರು.