ಕಾಲೇಜು ಎದುರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ …
ನ್ಯಾಮತಿ : ಸೇವೆ ಕಾಯಂಗೊಳಿಸುವಂತೆ , ಸೇವಾಭದ್ರತೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗಾಗಿ ರಾಜ್ಯ ಸರಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರು ಅನಿರ್ಧಿಷ್ಟಾವಧಿಯವರೆಗೆ ತರಗತಿ ಬಹಿಷ್ಕಾರಕ್ಕೆ ಕರೆ ಕೊಟ್ಟಿದ್ದು, ಅದರಂತೆ ನ್ಯಾಮತಿ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜು ಅತಿಥಿ ಉಪನ್ಯಾಸಕರು ತರಗತಿ ಬಹಿಷ್ಕರಿಸಿ ಸೋಮವಾರ ಕಾಲೇಜು ಎದುರು ಅನಿರ್ದಿಷ್ಟಾ ವಧಿ ಧರಣಿ ಸತ್ಯಾಗ್ರಹ ಪ್ರತಿಭಟನೆ ನಡೆಸಿದರು.
ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜು ಅತಿಥಿ ಉಪನ್ಯಾಸಕ ಟಿ.ಆರ್. ಕುಬೇರಪ್ಪ ಮಾತನಾಡಿ ರಾಜ್ಯದ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕ ರಲ್ಲಿ ಬಹುತೇಕರು ನಿವೃತ್ತಿಯ ಅಂಚಿಗೆ ತಲುಪಿzರೆ. ಅತಿಥಿ ಉಪನ್ಯಾಸಕರಿಗೆ ಉತ್ತಮ ಜೀವನ ನಡೆಸುವಂತೆ ಅನುವಾಗಲು ಸವಲತ್ತು ಕಲ್ಪಿಸಿಕೊಡುವಲ್ಲಿ ಸರ ಕಾರ ವಿಫಲವಾಗಿದೆ. ಆದ್ದರಿಂದ ಅವರಿಗೆ ೨೫ ಲಕ್ಷ ಇಡುಗಂಟು ನೀಡಬೇಕು. ನಿವೃತ್ತಿಯ ನಂತರ ದದರೂ ಉತ್ತಮ ಬದುಕು ರೂಪಿಸಿಕೊಳ್ಳಲು ಸರಕಾರ ಸ್ಪಂದಿ ಸಬೇಕು' ಎಂದು ಒತ್ತಾಯಿಸಿದರು. ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜು ಅತಿಥಿ ಉಪ ನ್ಯಾಸಕ ಜಿ.ನವೀನ್ ಮಾತನಾಡಿ
ರಾಜ್ಯದ ೪೩೨ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ೧೨ ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ, ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಗಣನೀಯ ಪಾತ್ರ ವಹಿಸುತ್ತಿzರೆ. ಸೇವಾಭದ್ರತೆ ನೀಡಿ ಯುಜಿಸಿ ನಿಯಮಾವಳಿ ಯಂತೆ ವೇತನ ಹೆಚ್ಚಿಸಬೇಕೆಂದು ಹಲವಾರು ಬಾರಿ ಉಪವಾಸ, ಧರಣಿ, ಪ್ರತಿಭಟನೆ ಮತ್ತು ಹೋರಾಟ ಮೂಲಕ ಬೇಡಿಕೆ ಈಡೇರಿಸಲು ಮನವಿ ಮಾಡಿ ದರೂ ಈವರೆಗೂ ಸರಕಾರದಿಂದ ಸೂಕ್ತ ಸ್ಪಂದನೆ ದೊರೆತಿಲ್ಲ ಎಂದು ಹೇಳಿದರು.
ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜು ಅತಿಥಿ ಉಪ ನ್ಯಾಸಕಿ ಬಿ.ಎಲ್.ಕವಿತಾ ಮಾv ನಾಡಿ ಮಹಿಳಾ ಅತಿಥಿ ಉಪನ್ಯಾಸ ಕರಿಗೆ ಸರ್ಕಾರದ ನಿಯಮದಂತೆ ವೇತನ ಸಹಿತ ಹೆರಿಗೆ ರಜೆ ನೀಡಬೇಕು. ಪ್ರತಿ ತಿಂಗಳು ೫ರೊಳಗೆ ವೇತನ ನೀಡಬೇಕು, ಆರೋಗ್ಯ ವಿಮಾ ಸೌಲಭ್ಯ ಒದಗಿಸಬೇಕು ಎಂದು ತಿಳಿಸಿದರು.
ಅತಿಥಿ ಉಪನ್ಯಾಸಕಕರಾದ ಪಿ.ಶ್ರೀನಿವಾಸ್ , ಜಿ.ಎಸ್.ಅಕ್ಷತ್ , ಬಿ.ಅಮೀನ , ಡಿ.ಕೆ.ಸಂತೋಷ್ , ರಾಜೇಶ್ ಎಚ್. , ಬಿ.ಆಂಜನೇಯ , ಚೈತ್ರಾ , ಕೆ.ಸುರೇಶ್ , ಚಂದ್ರಕಲ್ , ಕಾಳಿಂಗಹೆಗಡೆ ಪಾಲ್ಗೊಂಡಿದ್ದರು.