ಮಕ್ಕಳ ದಸರಾದಲ್ಲಿ ಪದಕ ಪಡೆದ ಕಲ್ಲುಗಂಗೂರು ಕರಾಟೆ ಪಟುಗಳು…

ಶಿವಮೊಗ್ಗ ದಸರಾ ೨೦೨೩ರ ಅಂಗವಾಗಿ ಮಕ್ಕಳ ದಸರಾ ಸಮಿತಿ ಹಾಗೂ ಶಿವಮೊಗ್ಗ ಜಿ ಕರಾಟೆ ಅಸೋಸಿಯೇಷನ್ ಇವರು ಅ.೧೬ ರಂದು ಶಿವಮೊಗ್ಗದ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ ಮೂರನೇ ರಾಜ್ಯ ಮಟ್ಟದ ಕರಾಟೆ ಪಂದ್ಯಾವಳಿ ಯಲ್ಲಿ ಕಲ್ಗುಂಗೂರು ನ ಮಾರುತಿ ಕರಾಟೆ ತರಬೇತಿ ಕೇಂದ್ರದ ರಮೇಶ್ ರವರ ವಿದ್ಯಾರ್ಥಿಗಳಾದ ಶ್ರೀನಿವಾಸ್, ಶಶಾಂಕ್, ನಾಗಾ ರ್ಜುನ್, ಲೇಕನ್, ಲೋಹಿತ್ ರವರು ಕುಮತಿ ವಿಭಾಗದಲ್ಲಿ ಕ್ರಮ ವಾಗಿ ಪ್ರಥಮ ಹಾಗೂ ದ್ವಿತೀಯ ಸ್ಥಾನಗಳನ್ನು ಪಡೆದಿದ್ದು ವಿಜೇತ ಕ್ರೀಡಾಪಟುಗಳು ಗ್ರಾಮೀಣ ಪ್ರತಿಭೆಗಳಾಗಿದ್ದು ಕೇವಲ ೧೫ ದಿನ ತರಬೇತಿ ಪಡೆದು ಕುಮತಿ ವಿಭಾಗ ದಲ್ಲಿ ಸ್ಪರ್ಧಿಸಿ ಬಹುಮಾನ ಪಡೆದಿ ರುವುದು ವಿಶೇಷವಾಗಿದ್ದು ವಿಜೇತ ಕ್ರೀಡಾಪಟುಗಳಿಗೆ ಹಾಗೂ ತರ ಬೇತಿದಾರರಾದ ರಮೇಶ್ ಮತ್ತು ಕಲೀಮ್ ರವರಿಗೆ ಕಲ್ಲು ಗಂಗೂ ರು ಗ್ರಾಮಸ್ಥರು ಹಾಗೂ ಶಿವ ಮೊಗ್ಗ ಸಿಟಿ ಕರಾಟೆ ಅಸೋಸಿ ಯೇಷನ್ ವತಿಯಿಂದ ಅಭಿನಂದ ನೆಗಳನ್ನು ತಿಳಿಸಲಾಗಿದೆ.