ವೃತ್ತಿಶಿಕ್ಷಣದ ಉದ್ದೇಶ ಪರಿಣಾಮಕಾರಿಯಾಗಿ ಬೋಧಿಸುವುದು : ಡಾ. ಶಿವಕುಮಾರ
ರಾಣೇಬೆನ್ನೂರು : ರಾಣೇ ಬೆನ್ನೂರಿನ ಶ್ರೀ ತರಳಬಾಳು ಜಗ ದ್ಗುರು ತಾಂತ್ರಿಕ ಮಹಾವಿದ್ಯಾಲ ಯದಲ್ಲಿನ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ವಿಭಾಗದಲ್ಲಿ ಅ.೧೬ ರಿಂದ ೨೧ರವರೆಗೆ ೬ ದಿನ ನಡೆದ ಕಾರ್ಯಗಾರ ಬಯೋ ಮೆಡಿಕಲ್ ಅಪ್ಲಿಕೇಶನ್‌ಗಳಿಗಾಗಿ IಉIಖ / ಘೆಉIಖ ( ಮೈಕ್ರೋ ಎಲೆಕ್ಟ್ರೋ ಮೆಕ್ಯಾನಿಕಲ್ ಸಿಸ್ಟಮ್ಸ್ ಮತ್ತು ನ್ಯಾನೋ ಎಲೆಕ್ಟ್ರೋ ಮೆಕ್ಯಾನಿಕಲ್ ಸಿಸ್ಟಮ್ ) ತಂತ್ರ eನದಲ್ಲಿನ ಇತ್ತೀಚಿನ ಪ್ರವೃತ್ತಿಗಳು ಎಂಬ ವಿಷಯದ ಬಗ್ಗೆ ಅಧ್ಯಾ ಪಕರ ಅಭಿವೃದ್ಧಿ ಕಾರ್ಯಗಳು ಎಂಬ ಕಾರ್ಯಗಾರದ ಸಮಾ ರೋಪ ಸಮಾರಂಭದ ಅಧ್ಯ ಕ್ಷೀಯ ಭಾಷಣದಲ್ಲಿ ಮಹಾವಿದ್ಯಾ ಲಯದ ಪ್ರಾಚಾರ್ಯರಾದ ಡಾ. ಶಿವಕುಮಾರ ಬಿ. ರವರು ಅಧ್ಯಾಪಕರ ವೃತ್ತಿಶಿಕ್ಷಣದ ಉದ್ದೇಶ ಪರಿಣಾಮಕಾರಿಯಾಗಿ ಬೋಧಿಸುವುದೇ ಆಗಿದೆಯೆಂದು ಸ್ಥೂಲ ವಾಗಿ ಹೇಳಬಹುದಾದರೂ ಅದನ್ನು ವಿವರವಾಗಿ ಪರಿಶೀಲಿ ಸುವ ಯತ್ನ ಎಡೆಯೂ ನಡೆ ದಿದೆ. ಅಂಥ ಪರಿಶೀಲನೆಯಿಂದ ವೃತ್ತಿಶಿಕ್ಷಣ ಸಂಸ್ಥೆ ತನ್ನ ಕಾರ್ಯ ಕ್ರಮಗಳನ್ನು ರೂಪಿಸಿಕೊಳ್ಳುವು ದಕ್ಕೂ ಅನಂತರ ಅವುಗಳನ್ನು ನಿರ್ವಹಿಸುವ ಮಾರ್ಗವನ್ನು ಕಂ ಡುಕೊಳ್ಳುವುದಕ್ಕೂ ಅನುಕೂಲವಾ ಗುವುದು ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಡೀನ್ ಅಕ್ಯಾಡೆಮಿಕ್ ಡಾ.ಎಸ್.ಎಫ್. ಕೊಡದ್ , ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ವಿಭಾಗದ ಮುಖ್ಯಸ್ಥರಾದ ಡಾ.ಬಿ.ಮಹೇಶ್ವ ರಪ್ಪ , ಕಾರ್ಯಾಗಾರದ ಸಂಚಾಲ ಕರಾದ ಡಾ. ಶ್ರೀನಿವಾಸರಾವ್ ಉದಾರ ವೇದಿಕೆಯಲ್ಲಿ ಉಪಸ್ಥಿತರಿ ದ್ದರು. ಡಾ . ಬಿ. ಮಹೇಶ್ವರಪ್ಪ ಸ್ವಾಗತಿ ಸಿದರು. ಪ್ರೊ. ಬಿ. ಜಿ . ಚಂದ್ರ ಶೇಖರ್ ವಂದಿಸಿದರು. ಪ್ರೊ. ಸಿ . ಎಂ. ಶ್ವೇತಾ ಕಾರ್ಯ ಕ್ರಮ ನಿರೂಪಿಸಿದರು.