ತಾಲೂಕ್ ಕಸಾಪ ವತಿಯಿಂದ ಪ್ರತಿಭಾ ಪುರಸ್ಕಾರ…
ಹೊನ್ನಾಳಿ : ವಿದ್ಯೆ ಸಾಧಕನ ಸ್ವತ್ತು ವಿನಹ ಸೋಮಾರಿಯ ಸ್ವತ್ತು ಅಲ್ಲ ಎಂದು ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ತಿಳಿಸಿದರು.
ಅವರು ಹೊನ್ನಾಳಿಯ ಸರ್ಕಾ ರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತ ನಾಡಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಎಸ್ ಎಸ್ ಎಲ್ ಸಿ. ಪರೀಕ್ಷೆಯಲ್ಲಿ ೧೨೫ಕ್ಕೆ ೧೨೫ ಅಂಕ ಗಳನ್ನ ಪಡೆದ ವಿದ್ಯಾರ್ಥಿಗಳಿಗೆ ಕನ್ನಡ ಕುವರ. ಕನ್ನಡ ಕುವರಿ . ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ದಲ್ಲಿ ಮಾತನಾಡಿ ಸರ್ಕಾರಿ ಶಾಲೆ ಯಲ್ಲಿ ಕಲಿಯುತ್ತಿರುವ ಮಕ್ಕಳು ಖಾಸಗಿ ಶಾಲೆಗಳ ಶಿಕ್ಷಣ ಗಿಂತ ಗುಣಾತ್ಮಕ ಶಿಕ್ಷಣ ಉತ್ತಮವಾಗಿದೆ ವಿದ್ಯಾರ್ಥಿಗಳು ಆಸಕ್ತಿಯಿಂದ ಕಲಿಕೆಯನ್ನ ಮುಂದುವರೆಸಿ ಉಳಿದ ವಿದ್ಯಾರ್ಥಿಗಳಿಗಿಂತ ಹೆಚ್ಚು ಅಂಕ ಪಡೆದಾಗ ಮಾತ್ರ ಉಳಿದ ವಿದ್ಯಾ ರ್ಥಿಗಳಿಗೆ ಮಾದರಿಯಾಗುತ್ತೀರಿ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಶಿಕ್ಷಕರು ಶಾಲೆಯಲ್ಲಿ ಅವಕಾಶ ನೀಡಿದಾಗ ಮತ್ತು ಮನೆಯಲ್ಲಿ ಪೋಷಕರು ಮಕ್ಕಳ ಆಸಕ್ತಿಯನ್ನು ಕಲಿಕೆಯಲ್ಲಿ ಹೆಚ್ಚು ಆಗುವಂತೆ ನೋಡಿಕೊಳ್ಳುತ್ತಿರುವ ಪೋಷಕರು ಯಾವಾಗಲೂ ಜೀವನದಲ್ಲಿ ಉಳಿ ಯುತ್ತಾರೆ ದೇಶ ಅಭಿವೃದ್ಧಿಯಾಗ ಬೇಕಾದರೆ ವಿದ್ಯಾವಂತರ ಸಂಖ್ಯೆ ಹೆಚ್ಚಾಗಬೇಕು ಎಂದರು.
ಶಾಸಕ ಡಿಜಿ.ಶಾಂತನಗೌಡ ಮಾತನಾಡಿ ಮೂರು ತಿಂಗಳಿಂದ ರಾಜ್ಯದಲ್ಲಿಬರಬೇಕಾದ ಮಳೆ ಬಂದಿಲ್ಲ ಇದರಿಂದ ರಾಜ್ಯದ ಶಾಸಕರಿಗೆ ಬಿಪಿ. ಶುಗರ್. ಹೆಚ್ಚಾಗಿದೆ ಮಳೆ ಬಾರದೆ ಬೆಳೆಗಳು ಒಣಗಿವೆ ಅಧಿಕಾರಿಗಳೊಂದಿಗೆ ಜನರೊಂದಿಗೆ ಸಚಿವರೊಂದಿಗೆ ಫೋನ್ ಮುಖಾಂತರ ಮಾತ ನಾಡಿ ಡಿಪಿ ಸುಗರ್ ಹೆಚ್ಚಾಗಿದೆ ಎಂದು ಹಾಸ್ಯ ಚಟಾಕಿ ಆರಿಸಿ ಮಾತು ಮುಗಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ನಂಜು ರಾಜ್ ಮಾತನಾಡಿ ಪ್ರತಿಭಾವಂತ ಮಕ್ಕಳನ್ನ ಗುರುತಿಸಿ ಪುರಸ್ಕಾರ ನೀಡಿದಾಗ ಅವರಿಗೆ ಆತ್ಮವಿಶ್ವಾಸ ಹೆಚ್ಚಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ತಾಲೂಕಿ ನಲ್ಲಿ ಪ್ರತಿಭಾ ಪುರಸ್ಕಾರಕ್ಕೆ ಆಯ್ಕೆ ಯಾದ ೪೪ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಈ ಸಂದರ್ಭದಲ್ಲಿ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರು. ವಾಮದೇವಪ್ಪ.ಜಿ ಸಂಘಟನಾ ಕಾರ್ಯದರ್ಶಿ. ಜಿಗಳಿ ಪ್ರಕಾಶ್ ಜಿ ಗೌರವ ಕಾರ್ಯದರ್ಶಿಗಳು ರೇವಣಸಿದ್ದಪ್ಪ ಅಂಗಡಿ. ತಾಲೂಕ್ ಅಧ್ಯಕ್ಷರು. ಮುರಿಗಪ್ಪ ಗೌಡ. ಪ್ರಿನ್ಸಿಪಾಲ್ ಧನಂಜಯ್. ತಾಲೂ ಕು ಪದಾಧಿಕಾರಿಗಳಾದ. ಪದಾಧಿಕಾರಿಗಳಾದ ಗೋವಿಂದಪ್ಪ ಶೇಖ ರಪ್ಪ. ಎನ್ ಕೆ ಆಂಜನೇಯ ಹಾಗೂ ಹೋಬಳಿ ಘಟಕದ ಅಧ್ಯಕ್ಷರಾದ ಬಸವ ರಾಜಪ್ಪ. ಜಗನ್ನಾಥ್. ಕೆ. ಪಿ. ಎ.ಕೆ.ಹಾಲೇಶಪ್ಪ ರಾಂಪುರ ಇತರರು ಪಾಲ್ಗೊಂಡಿದ್ದರು.