ಜಿ.ಎಂ. ಎಂ ಹಾಗೂ ಡಿ.ಎಚ್.ಆರ್ ಶ್ರದ್ಧಾಂಜಲಿ ಸಭೆ…

ಶಿವಮೊಗ್ಗ: ಇತ್ತೀಚೆಗೆ ನಿಧನ ರಾದ ರೈತ ಸಂಘದ ಜಿ ಉಪಾ ಧ್ಯಕ್ಷ ಜಿ.ಎಂ. ಮುರುಗೇಂದ್ರಪ್ಪ ಹಾಗೂ ಕಾರ್ಯಾಧ್ಯಕ್ಷ ಡಿ.ಎಚ್. ರಾಮಚಂದ್ರಪ್ಪ ಅವರ ಶ್ರದ್ಧಾಂ ಜಲಿ ಸಭೆ ರೈತ ಸಂಘದ ಕಚೇರಿ ಯಲ್ಲಿ ಇಂದು ಬೆಳಿಗ್ಗೆ ನಡೆಯಿತು.
ಡಿ.ಎಚ್.ರಾಮಚಂದ್ರಪ್ಪ ಮತ್ತು ಜಿ.ಎಂ. ಮುರುಗೇಂದ್ರಪ್ಪ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ರೈತ ಸಂಘದ ರಾಜಧ್ಯಕ್ಷ ಹೆಚ್.ಆರ್. ಬಸವ ರಾಜಪ್ಪ, ಮುರುಗೇಂದ್ರಪ್ಪ ಮತ್ತು ರಾಮಚಂದ್ರಪ್ಪ ರೈತ ಸಂಘದ ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು ಇವರ ರೈತ ಪರವಾದ ಸೇವೆಗಳು ಪ್ರಶಂಸ ನೀಯ. ಇವರ ಅಕಾಲಿಕ ಮರಣ ರೈತ ಸಂಘಕ್ಕೆ ತುಂಬಲಾರದ ನಷ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದರು.
ಈ ವರ್ಷ ರಾಜ್ಯದಲ್ಲಿ ಭೀಕರ ಬರಗಾಲವಿದೆ. ಮಳೆಯ ತೀವ್ರ ಕೊರತೆ ಉಂಟಾಗಿ ಅಣೆಕಟ್ಟೆಗಳು ಸಹ ತುಂಬಿಲ್ಲ. ಆದ್ದರಿಂದ ಕೇಂದ್ರ ಸರ್ಕಾರದ ಹಣವನ್ನು ಕಾಯದೆ ರಾಜ್ಯ ಸರ್ಕಾರ ಬೆಳೆ ಪರಿಹಾರವಾಗಿ ಎಕರೆಗೆ ೨೫,೦೦೦ ರೂ.ಗಳನ್ನು ಘೋಷಿಸಿ, ಬಗರ್‌ಹುಕುಂ ಸಾಗು ವಾಳಿದಾರರಿಗೂ ಬರಗಾಲ ಪರಿಹಾರ ನೀಡಬೇಕು.
ಬ್ಯಾಂಕ್, ಸಹಕಾರಿ ಸಂಸ್ಥೆ, ಫೈನಾನ್ಸ್‌ಗಳು ಸಾಲ ವಸೂ ಲಾತಿಯನ್ನು ತಡೆಹಿಡಿಯಬೇಕು. ಸಂಪೂರ್ಣ ಸಾಲ ಮನ್ನಾ ಮಾಡ ಬೇಕು. ಅರಣ್ಯ ಇಲಾಖೆ ರೈತರನ್ನು ಒಕ್ಕಲೆಬ್ಬಿಸಬಾರದು, ಸರ್ಕಾರ ಅರಣ್ಯ ಕಾಯ್ದೆಗೆ ತಿದ್ದುಪಡಿ ತಂದು ಅನುಭವದಲ್ಲಿರುವವರಿಗೆ ಸಾಗು ವಾಳಿ ಪತ್ರ ನೀಡಬೇಕು, ಬೆಳೆ ವಿಮೆ ಪಡೆದ ರೈತರಿಗೆ ಮಧ್ಯಂತರ ಪರಿ ಹಾರ ನೀಡಬೇಕೆಂದು ಒತ್ತಾಯಿಸಿ ದರು.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಹಿಟ್ಟೂರು ರಾಜು, ಟಿ.ಎಂ. ಚಂದ್ರಪ್ಪ, ಜಿಧ್ಯಕ್ಷ ಎಸ್.ಶಿವಮೂರ್ತಿ,ಜಿ ಕಾರ್ಯಾಧ್ಯಕ್ಷ ಕೆ.ರಾಘವೇಂದ್ರ, ಪಿ.ಡಿ. ಮಂಜಪ್ಪ, ಜಿ ಉಪಾ ಧ್ಯಕ್ಷ ಪಿ.ಶೇಖರಪ್ಪ, ಆರ್. ಚಂದ್ರಶೇಖರ್, ಮಹದೇವಪ್ಪ, ನಂಜುಂಡಪ್ಪ, ಗ್ರಾಮಾಂತರ ಅಧ್ಯಕ್ಷರಾದ ಕಸಟ್ಟಿ ರುದ್ರೇಶ್, ಶಿವಮೊಗ್ಗ ತಾ. ಅಧ್ಯಕ್ಷರಾದ ಸಿ.ಚಂದ್ರಪ್ಪ, ಭದ್ರಾವತಿ ತಾ. ಅಧ್ಯಕ್ಷರಾದ ಪಂಚಾಕ್ಷರಿ, ಶಿಕಾ ರಿಪುರ ತಾ.ಅಧ್ಯಕ್ಷರಾದ ಶಿವ ಮೂರ್ತಿ, ಮೊದಲಾದವರು ಹಾಜರಿದ್ದರು.