ಸಾಹಿತ್ಯ ಗ್ರಾಮದಲ್ಲಿ ದಸರಾ ಕಥಾ ಸಂಭ್ರಮ…

ಶಿವಮೊಗ್ಗ: ಜೀವನದ ಪ್ರತಿ ಯೊಂದು ಅನುಭವ ಮಿಡಿತಗಳಿಗೆ ತಿರುವು ನೀಡುವ ಶಕ್ತಿ ಸಣ್ಣ ಕಥೆ ಗಳಿಗಿದೆ ಎಂದು ಹಿರಿಯ ಸಾಹಿತಿ ಪ್ರೊ| ಎಂ.ಬಿ. ನಟರಾಜ ಅಭಿಪ್ರಾಯಪಟ್ಟರು.


ನಗರದ ಗೋಪಿಶೆಟ್ಟಿಕೊಪ್ಪ ದಲ್ಲಿರುವ ಸಾಹಿತ್ಯ ಗ್ರಾಮದಲ್ಲಿ ಜಿ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಏರ್ಪಡಿಸಿದ್ದ ದಸರಾ ಕಥಾ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಾಮಾಯಣ ಮತ್ತು ಮಹಾ ಭಾರತ ಕಥೆಯು ನಮ್ಮ ಪರಂಪರೆಯನ್ನು ಪ್ರತಿನಿಧಿಸಲಿದೆ. ಅದರ ಮುಂದುವರೆದ ಭಾಗವಾಗಿ ಜನಪದ ಸಾಹಿತ್ಯ ಕಥೆಗಳ ರಚನೆ ಯನ್ನು ಹಾಗೂ ವಿವಿಧ ಪ್ರಕಾರ ಗಳಲ್ಲಿ ವಾಚಿಸುವ ಪರಂಪರೆಯನ್ನು ಪ್ರಾರಂಭಿಸಿದೆ. ಜನರ eನ ವಿಸ್ತಾರದಲ್ಲಿ ಸಣ್ಣ ಕಥೆಗಳು ಮಹತ್ವ ಪಡೆದುಕೊಂಡಿದ್ದು, ಅಂತಹ ಅತ್ಯಮೂಲ್ಯ ಕಥೆಗಳನ್ನು ಜೋ ಪಾನ ಮಾಡಬೇಕಿದೆ ಎಂದರು.
ಸಮಾಜದಲ್ಲಿ ಜನರ ಚಿಂತನೆಗಳು ಬದಲಾದಂತೆ, ಕಥೆ ಬರೆಯುವ ಪ್ರಕಾರಗಳು ಬದಲಾಗುತ್ತಿದೆ. ಯುವ ಸಮೂಹ ತಮ್ಮ ಜೀವನಾನುಭಗಳನ್ನು ಸಣ್ಣ ಕಥೆಗಳ ಮೂಲಕ ಅತ್ಯಮೂಲ್ಯ ವಾಗಿ ಹಿಡಿದಿಡುವ ಪ್ರಯತ್ನ ಮಾಡುತ್ತಿzರೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿದ್ದ ಐಎಫ್‌ಎಸ್ ಅಧಿಕಾರಿ ಮುಕುಂದಚಂದ್ರ ಮಾತನಾಡಿ, ಭಾಷೆ ಬೆಳೆಸಿದಂತೆಲ್ಲ ಬೆಳೆಯುತ್ತಾ ಜೀವಂತವಾಗಿರುತ್ತದೆ. ಅಂತಹ ಜೀವಂತಿಕೆ ಸಾಧ್ಯವಾಗುವುದು ಅತ್ಯುತ್ತಮ ಸಾಹಿತ್ಯ ಕೃತಿಗಳಿಂದ. ಸಣ್ಣಕಥೆಗಳು ಬದುಕಿಗೆ ಅನೇಕ ಪ್ರೇರಣಾ ವೈಶಿಷ್ಟ್ಯ ನೀಡಲಿದೆ. ಕನ್ನಡ ಸಣ್ಣಕಥೆ ಸಾಹಿತ್ಯದ ಶ್ರೀಮಂತಿಕೆಯನ್ನು ಹೆಚ್ಚಿಸಿವೆ. ಇತ್ತೀಚೆಗೆ ಇತರ ಭಾಷೆಗಳಿಂದ ಅನೇಕ ಕಥೆಗಳು ಅನುವಾದವಾಗಿ ಬರುತ್ತಿರುವುದು ಒಂದು ಸಂತೋಷದಾಯಕ ಸಂಗತಿ ಎಂದು ಹೇಳಿದರು.
ಜಿ ಕಸಾಪ ಅಧ್ಯಕ್ಷ ಡಿ. ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿ ಚಂದ್ರೇಗೌಡ ಮಾತನಾಡಿ ದರು. ತಾಲ್ಲೂಕು ಕಸಾಪ ಅಧ್ಯಕ್ಷ ರಾದ ಮಹಾದೇವಿ ಉಪಸ್ಥಿತರಿ ದ್ದರು.
ಕಥೆಗಾರರಾದ ಸಿಮ್ಸ್ ಕಾಲೇ ಜಿನ ಡಾ| ಕೆ.ಎಸ್. ಗಂಗಾಧರ, ಕುವೆಂಪುಯ ವಿ.ವಿ. ಡಾ| ಹಸೀ ನಾ, ನೇತ್ರಾವತಿ ಆಯ ನೂರು, ಎನ್‌ಇಎಸ್ ಸಾರ್ವಜನಿಕ ಸಂಪ ರ್ಕಾಧಿಕಾರಿ ಸಿ.ಎಂ. ನೃಪತುಂಗ, ಮೇದಿನಿ ಕೆಸಿನಮನೆ, ಡಿ.ಎಚ್. ಸೂರ್ಯ ಪ್ರಕಾಶ್, ಸೊರಬದ ರಾಜ್ ಗೋಕಲೆ, ಭದ್ರಾವತಿ ನಾಗೋಜಿ ರಾವ್, ಡಾ. ಕೆ.ಜಿ. ವೆಂಕಟೇಶ್, ಶ್ರೀನಿವಾಸ ನಗಲಾಪುರ ಸಣ್ಣಕಥೆ ವಾಚಿಸಿದರು.