ಶ್ರೀರಾಮ ಸೇನೆಯಿಂದ ಶೀಘ್ರವೇ ಶಿವಮೊಗ್ಗ ಚಲೋ ಚಳುವಳಿ…

ಶಿವಮೊಗ್ಗ: ಶ್ರೀರಾಮ ಸೇನೆ ಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರನ್ನು ಶಿವಮೊಗ್ಗ ಪೊಲೀಸರು ನಗರ ಪ್ರವೇಶ ಮಾಡ ದಂತೆ ತಡೆದಿರುವುದನ್ನು ರಾಜ ಧ್ಯಕ್ಷ ಗಂಗಾಧರ್ ಕುಲಕರ್ಣಿ ತೀವ್ರವಾಗಿ ಖಂಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದ ಹಿಂದೂಗಳ ಮೇಲಿನ ಹಗೆ ಸಂಬಂಧಿಸಿದಂತೆ ಮುತಾಲಿಕ್ ಅವರು ಇಂದು ರಾಗಿಗುಡ್ಡಕ್ಕೆ ಭೇಟಿ ನೀಡಿ ನೊಂದ ಹಿಂದೂ ಬಾಂಧವರಿಗೆ ಸಾಂತ್ವನ ಹೇಳಬೇಕಿತ್ತು. ಆದರೆ ಶಿವಮೊಗ್ಗ ಪೊಲೀಸರು ರಾತ್ರಿ ೨ ಗಂಟೆಗೆಯೇ ಬಸ್ಸಿನಲ್ಲಿ ಬರುತ್ತಿರುವಾಗ ಬಸ್ಸನ್ನೇ ತಡೆದು ಅವರಿಗೆ ೩೦ ದಿವಸದ ವರೆಗೆ ಗಡಿಪಾರು ಮಾಡಿ ದಾವಣ ಗೆರೆಗೆ ಕರೆದುಕೊಂಡು ಹೋಗಿರು ವುದನ್ನುಶ್ರೀರಾಮ ಸೇನೆ ಬಲವಾಗಿ ಖಂಡಿಸುತ್ತದೆ ಎಂದರು.
ಮುತಾಲಿಕ್ ಅವರು ಇನು ಪ್ರತಿಭಟನೆಗೆ ಬಂದವ ರಲ್ಲ. ಹೋರಾಟವನ್ನು ಮಾಡುತ್ತಿ ರಲಿಲ್ಲ. ಹಿಂದೂಗಳಿಗಾದ ಅನ್ಯಾ ಯಕ್ಕೆ ಸಾಂತ್ವನ ಹೇಳಲೂಬಾರದು ಎಂದರೆ ಇದು ಪ್ರಜಪ್ರಭುತ್ವ ವ್ಯವಸ್ಥೆಯೇ. ಕಾಂಗ್ರೆಸ್ ಸರ್ಕಾರ ಹಕ್ಕುಗಳನ್ನು ಧಮನ ಮಾಡಲು ಹೊರಟಿದೆ. ಇದು ನಾಚಿಕೆಗೇಡಿನ ಸಂಗತಿಯಾಗಿದೆ. ರಾಗಿಗುಡ್ಡ ಘಟನೆ ಪೂರ್ವನಿಯೋಜಿತ ವಾದುದು. ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ. ಪೊಲೀಸ್ ವರಿಷ್ಠಾಧಿಕಾರಿಗಳ ಮೇಲೆಯೇ ಹ ಮಾಡಲು ಹೊರಟಾಗ ಅವರಿಗೆ ಅದೇಕೆ ತಮ್ಮ ಸೊಂಟದ ಬೆಲ್ಟ್‌ನಲ್ಲಿದ್ದ ಪಿಸ್ತೂಲ್ ನೆನಪಾಗಲಿಲ್ಲವೋ ಗೊತ್ತಿಲ್ಲ ಎಂದರು.
ಶಿವಮೊಗ್ಗದ ಪೊಲೀಸರಿಗೆ ಮುತಾಲಿಕ್ ಎಷ್ಟು ಹೊತ್ತಿಗೆ ಬರು ತ್ತಾರೆ ಎಂಬ ಮಾಹಿತಿ ಗೊತ್ತಿರು ತ್ತದೆ. ಆದರೆ ಗಲಭೆಯಲ್ಲಿ ಹಿಂದೂ ಗಳ ಮೇಲೆ ಕಸೆದವರು ಯಾರು, ತಳವಾರು ಹಿಡಿದು ಝಳಪಿಸಿ ದವರು ಯಾರು, ಯಾವ ಭಯೊ ತ್ಪಾದಕರು ಶಿವ ಮೊಗ್ಗದಲ್ಲಿzರೆ ಈ ಮಾಹಿತಿಗಳು ಸಿಗುವುದಿಲ್ಲವೇ ಎಂದು ಪ್ರಶ್ನಿಸಿದರು.
ಈ ಎ ಘಟನೆಗಳನ್ನು ಇಟ್ಟುಕೊಂಡು ಹಿಂದೂಗಳ ಮೇಲೆ ಆಗುತ್ತಿರುವ ಅನ್ಯಾಯ, ಅತ್ಯಾಚಾ ರಗಳನ್ನು ವಿರೋಧಿಸಿ ಶಿವಮೊಗ್ಗ ದಲ್ಲಿ ಬರುವ ದಿನಗಳಲ್ಲಿ ಶಿವಮೊಗ್ಗ ಚಲೋ ಚಳುವಳಿಯನ್ನು ಶ್ರೀರಾಮ ಸೇನೆ ಹಮ್ಮಿಕೊಂಡಿದೆ. ಇದಕ್ಕೆ ರಾಜದ್ಯಂತದ ಹಿಂದೂ ರಾಷ್ಟ್ರಭಕ್ತರು ಲಕ್ಷ ಸಂಖ್ಯೆಯಲ್ಲಿ ಬರುತ್ತಾರೆ. ಹರ್ಷನ ಕೊಲೆ ಮಾಡಿದವರು ರಾಗಿಗುಡ್ಡದಲ್ಲಿ ಹಿಂದೂಗಳ ಮನೆಗಳ ಮೇಲೆ ಕಲ್ಲು ಎಸೆದವರು, ಖಡ್ಗವನ್ನು ಪ್ರದರ್ಶಿ ಸಿದವರು ತಾಕತ್ತು ದಮ್ಮು ಇದ್ದರೆ ಆ ಪುಂಡ ಪೋಕರಿಗಳೆಲ್ಲ ಬರಲಿ ಎಂದು ಸವಾಲು ಹಾಕಿದರು. ಸುದ್ದಿಗೋಷ್ಠಿಯಲ್ಲಿ ಶಶಿ ಇದ್ದರು.