ಯಾವುದೇ ಕಾರಣಕ್ಕೂ ಮಕ್ಕಳು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಬಾರದು
ಹೊನ್ನಾಳಿ: ತಾಲೂಕಿನ ಹೊಳೆ ಮದಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ದನದ ಕೊಟ್ಟಿಗೆ ಯಾಗಿದೆ. ಕಟ್ಟಡವಿಲ್ಲದೆ ಮೂರು ವರ್ಷಗಳಿಂದ ಗ್ರಾಮದ ದೇವಸ್ಥಾನ ದಲ್ಲಿ ಮಕ್ಕಳಿಗೆ ಶಿಕ್ಷಕರು ಪಾಠ ಮಾಡುತಿzರೆ. ಇದೆಲ್ಲ ಶಿಕ್ಷಣ ಇಲಾಖೆಗೆ ಗೊತ್ತಿದ್ದರೂ ಇದುವರಿಗೂ ಕ್ರಮ ತಗೆದು ಕೊಂಡಿಲ್ಲ. ಈ ಶಾಲೆಗೆ ಬೇಟಿ ನೀಡಿ ಅಲ್ಲಿನ ವಾಸ್ತು ಸ್ಥಿತಿ ಕುರಿತು ಗಮನಿಸಿ ಮಾಹಿತಿ ಪಡೆದಿzವೆ. ಈ ದುಸ್ತಿತಿಗೆ ಶಿಕ್ಷಣ ಇಲಾಖೆ ಮತ್ತು ಗ್ರಾಪಂ ಪಿಡಿಒ ಮತ್ತು ತಾಲೂಕಿನ ಶಾಸಕರು ಕಾರಣರಾಗಿzರೆ ಎಂದು ಹೊನ್ನಾಳಿ ಜೆಎಂಎಫ್‌ಸಿ ನ್ಯಾಯಲಯದ ನ್ಯಾಯದೀಶರಾದ ದೇವದಾಸ್ ತಿಳಿಸಿದರು.
ಹೊನ್ನಾಳಿಯ ಹಿರೇಕಲ್ಮಠದ ಸಮುದಾಯ ಭವನದಲ್ಲಿ ನಡೆದ ಕಾನೂನು ಸೇವಾ ಪ್ರಾಧಿಕಾರ ಹೊನ್ನಾಳಿ ಘಟಕದ ಆಶ್ರಯದಲ್ಲಿ ನಡೆದ ಸಭೆಯಲ್ಲಿ ಮಾತಾನಾಡಿದ ನ್ಯಾಯಧೀಶರು ಈಗಾಗಲೇ ಶಾಲೆಯ ಕೊಠಡಿಯ ಕಟ್ಟಡಕ್ಕೆ ಅನುದಾನ ಬಿಡುಗಡೆಯಾಗಿದೆ ಶಿಕ್ಷಕರು, ಪಿ ಡಿ ಒ ,ಗುಣಮಟ್ಟದಲ್ಲಿ ಕಟ್ಟಡ ಕಟ್ಟುವಂತೆ ನೋಡಿಕೊಳ್ಳಿ ಎಂದು ಸೂಚಿಸಿದರು.
ನ್ಯಾಮತಿ ತಾಲೂಕಿನ ಸೋರಗೊಂಡನಕೊಪ್ಪ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೂ ಭೇಟಿ ನೀಡಿzವೆ. ಅಲ್ಲಿನ ಕಟ್ಟಡದಲ್ಲಿ ಸಿಮೆಂಟಿನ ಪ್ರಮಾಣ ಕಡಿಮೆಯಿದೆ, ಅಲ್ಲಿನ ಶೌಚಾಲಯ ನೋಡಿದ ನಮಗೆ ವಾಕರಿಕೆ ಬರುವಂತೆ ಅಗುತ್ತದೆ ಇನ್ನು ಮಕ್ಕಳ ಪರುಸ್ಥಿತಿ ಏನು ಎಂದು ಪ್ರಶ್ನಿಸಿದ ಅವರು, ಶಾಲೆಯ ಮೂಲಭೂತ ಸೌಕರ್ಯಗಳ ಸಮಸ್ಯೆ ಬಗ್ಗೆ ಸ್ಥಳಿಯ ಗ್ರಾಮ ಪಂಚಾಯಿತಿ ಪಿಡಿಒ , ಮತ್ತು ಶಿಕ್ಷಣ ಇಲಾಖೆ ಗಮನಕ್ಕೆ ಮನವಿ ಮಾಡಿ ಅವರು ಸ್ಪಂದಿಸದಿದ್ದರೆ ನ್ಯಾಯಲದ ಗಮನಕ್ಕೆ ಸಮಸ್ಸೆಯ ಸಂಬಂಧ ಪಟ್ಟ ಒಂದು ಫೋಟೋ ಹಾಗೂ ಒಂದು ಅರ್ಜಿ ಕೊಡಿ ನಾನೇ ಸಂಬಂಧ ಪಟ್ಟ ಅಧಿಕಾರಿಗಳಿಂದ ಕೆಲಸ ಆಗುವಂತೆ ಮಾಡಿಸುತ್ತೆವೆ ಎಂದರು.
ಸರ್ಕಾರಿ ಹೆಸರಲ್ಲಿರುವ ಶಾಲೆಯ ನಿವೇಶನವನ್ನು ಶಾಲೆಯ ಹೆಸರಿಗೆ ಮಾಡಲು ಸ್ಥಳದಲ್ಲಿದ್ದ ತಾಲೂಕು ದಂಡಾಧಿಕಾರಿಗಳಿಗೆ ತಿಳಿಸಿ, ಶಾಲೆಯ ಆವರಣದಲ್ಲಿ ಸಾರ್ವಜನಿಕರಿಗೆ ಪ್ರವೇಶವಿಲ್ಲದಂತೆ ಒಂದು ಭೋರ್ಡ್ ಹಾಕಿಸಿ ಯಾರಾದರೂ ಆವರಣದಲ್ಲಿ ಸಾರ್ವಜನಿಕರು ಆಟ ಆಡುವುದು ಮಲಿನಗೊಳಿಸುವುದು ಕಂಡು ಬಂದರೆ ಪೊಲೀಸ್ ಇಲಾಖೆ ಗಮನಕ್ಕೆ ತನ್ನಿ. ಒಟ್ಟಾರೆ ಮಕ್ಕಳ ಹಕ್ಕುಗಳಿಗೆ ಮಾನ್ಯತೆ ನೀಡಿ ಮಕ್ಕಳ ಮೂಲಭೂತ ಸೌಕರ್ಯಗಳ ಕಡೆ ಎಸ್ ಡಿ ಎಂಸಿ, ಸಮಿತಿ, ಗ್ರಾಮ ಪಂಚಾಯಿತಿ, ಶಿಕ್ಷಣ ಇಲಾಖೆ, ಹೆಚ್ಚನ ಗಮನ ನೀಡಬೇಕು. ನೀವೂ ನಿರ್ಲಕ್ಷ್ಯ ಮಾಡಿದರೆ ನಿಮ್ಮ ವಿರುದ್ದ ದೂರು ದಾಖಾಲಿಸಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಹೊನ್ನಾಳಿ ತಾಲೂಕು ತಹಸಿಲ್ದಾರ್ ಪಟ್ಟ ರಾಜೆ ಗೌಡ, ನ್ಯಾಮತಿ ತಾಲೂಕಿನ ತಹಸಿಲ್ದಾರ್ ಗೋವಿಂದಪ್ಪ. ಬಿಇಒ, ನಂಜುರಾಜ್, ತಾಲೂಕು ಕ್ಷೇತ್ರಾ ಸಮನ್ವಯಾಧಿಕಾರಿ , ತಿಪ್ಪೇಶಪ್ಪ. ಇ ಒ, ರಾಘವೇಂದ್ರ, ಪೊಲೀಸ್ ಇನ್ಸ್‌ಪೆಕ್ಟರ್ ಸಿದ್ದೇಗೌಡ. ಜಯಪ್ಪ. ಹಾಗೂ ನ್ಯಾಮತಿ ಅವಳಿ ತಾಲೂಕಿನ ಪಿಡಿಒಗಳು, ತಾಲೂಕಿನ ಶಿಕ್ಷಕರು, ಹೊನ್ನಾಳಿ ನ್ಯಾಮತಿ ತಾಲೂಕಿನ ಶಿಕ್ಷಕರು ಗ್ರಾಮ ಪಂಚಾಯಿತಿ ಅಧ್ಯಕ್ಷರು , ಎಸ್‌ಡಿಎಂಸಿ ಅಧ್ಯಕ್ಷರು ಪಾಲ್ಗೊಂಡಿದ್ದರು .