ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಗೋಪಿನಾಥ ಲೋಕಾಯುಕ್ತ ಬಲೆಗೆ…

ಶಿವಮೊಗ್ಗ : ಸ್ಮಶಾನ ಕಾಮಗಾರಿಯ ವರದಿ ನೀಡಲು ಲಂಚ ಕೇಳಿದ ಶಿವಮೊಗ್ಗ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎಸ್. ಗೋಪಿನಾಥರನ್ನು ಜಿ ಲೋಕಾಯುಕ್ತ ಅಧಿಕಾರಿಗಳು ಬಂಧಿಸಿ, ತನಿಖೆಗೆ ಒಳಪಡಿಸಿzರೆ.


ರಾಮಿನಕೊಪ್ಪ ಗ್ರಾಮದ ಸ್ಮಶಾನ ಅಭಿವೃದ್ಧಿ ಕಾಮಗಾರಿ ಬಾಬು ರೂ. ೭ ಲಕ್ಷಗಳನ್ನು ಶಿವಮೊಗ್ಗ ನಿರ್ಮಿತಿ ಕೇಂದ್ರದಿಂದ ಮಂಜೂರು ಮಾಡಿದ್ದು, ಇನ್ನೂ ರೂ.೨೩.೦೦ ಲಕ್ಷಗಳು ಬರಲು ಬಾಕಿಯಿರುತ್ತದೆ. ಹಾಗೆಯೇ ಬುಕ್ಲಾಪುರ ಗ್ರಾಮದ ಸ್ಮಶಾನ ಅಭಿವೃದ್ಧಿ ಕಾಮಗಾರಿಗೆ ಸಂಬಂಧಿಸಿದಂತೆ ರೂ.೧೦ ಲಕ್ಷಗಳು ಶಿವಮೊಗ್ಗ ನಿರ್ಮಿತಿ ಕೇಂದ್ರದಿಂದ ಮಂಜೂರಾಗಿದ್ದು, ಉಳಿದ ರೂ. ೧೦ ಲಕ್ಷಗಳು ಶಿವಮೊಗ್ಗ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಕಛೇರಿಯಿಂದ ಸ್ಥಳಕ್ಕೆ ಭೇಟಿ ನೀಡಿ ವರದಿ ಕೊಟ್ಟ ನಂತರ ಮಂಜೂರಾ ಗುವುದು ಬಾಕಿಯಿರುತ್ತದೆ. ಈ ಬಗ್ಗೆ ವರದಿಯನ್ನು ನೀಡುವಂತೆ ಕಾಟಕೆರೆ ಗ್ರಾಮದ ಸಬ್ ಕಾಂಟ್ರಾಕ್ಟರ್ ರವಿಕುಮಾರ್ ಇವರು ಶಿವಮೊಗ್ಗ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರನ್ನು ಕೇಳಿಕೊಂಡಾಗ ಅವರು ಹಣವನ್ನು ಕೊಡುವಂತೆ ಕೇಳಿ ವರದಿ ನೀಡಲು ಸತಾಯಿಸಿರುತ್ತಾರೆ. ಈ ಕುರಿತು ಫಿರ್ಯಾದಿಯು ಶಿವಮೊಗ್ಗದ ಲೋಕಾಯುಕ್ತ ಠಾಣೆಗೆ ದೂರಿತ್ತಿದ್ದರು.
ಅದರಂತೆ ಅ.೧೩ರಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎಸ್. ಗೋಪಿನಾಥ್ ಅವರು ಬುಕ್ಲಾಪುರ ಗ್ರಾಮದ ಸ್ಮಶಾನದ ಬಳಿ ಫಿರ್ಯಾದಿಯಿಂದ ರೂ. ೧೫,೦೦೦ ಲಂಚದ ಹಣವನ್ನು ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುತ್ತಾರೆ. ಆಪಾದಿತ ಎಸ್. ಗೋಪಿನಾಥ್ ಇವರನ್ನು ತನಿಖಾಧಿಕಾರಿ ಹೆಚ್.ಎಸ್. ಸುರೇಶ್ ಬಂಧಿಸಿ ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಲೋಕಾಯುಕ್ತ ಶಿವಮೊಗ್ಗ ಕಛೇರಿಯ ಪೊಲೀಸ್ ಅಧೀಕ್ಷಕ ಎನ್. ವಾಸುದೇವರಾಮ ಇವರ ಮಾರ್ಗದರ್ಶನದಲ್ಲಿ ಪ್ರಕರಣ ದಾಖಲಿಸಿ ಆಪಾದಿತರನ್ನು ಬಂಧಿಸಲಾಗಿರುತ್ತದೆ. ಟ್ರ್ಯಾಪ್ ಕಾಲಕ್ಕೆ ಶಿವಮೊಗ್ಗ ಲೋಕಾಯುಕ್ತ ಕಛೇರಿಯ ಪೊಲೀಸ್ ಉಪಾಧೀಕ್ಷಕ ಉಮೇಶ ಈಶ್ವರ ನಾಯ್ಕ, ಪೊಲೀಸ್ ನಿರೀಕ್ಷಕ ಪ್ರಕಾಶ್, ಸಿಬ್ಬಂದಿಗಳಾದ ಮಹಂತೇಶ, ಯೋಗೀಶ್, ಸುರೇಂದ್ರ, ಚನ್ನೇಶ, ಪ್ರಶಾಂತ್‌ಕುಮಾರ್, ಅರುಣ್‌ಕುಮಾರ್, ದೇವರಾಜ, ರಘುನಾಯ್ಕ, ಶ್ರೀಮತಿ ಪುಟ್ಟಮ್ಮ, ತರುಣ್‌ಕುಮಾರ್, ಪ್ರದೀಪ್ ಕುಮಾರ್, ಜಯಂತ್ ಇವರುಗಳು ಹಾಜರಿದ್ದು, ಕರ್ತವ್ಯ ನಿರ್ವಹಿಸುತ್ತಾರೆ.