ಸೈಲ್-ವಿ.ಐ.ಎಸ್.ಎಲ್ ಆಸ್ಪತ್ರೆಯಲ್ಲಿ ಉಚಿತ ಸ್ತನ ಕ್ಯಾನ್ಸರ್ ತಪಾಸಣಾ ಶಿಬಿರ

ಭದ್ರಾವತಿ: ವಿ.ಐ.ಎಸ್. ಎಲ್ ಆಸ್ಪತ್ರೆ, ನಾರಾಯಣ ಆಸ್ಪತ್ರೆ ಮತ್ತು ಮಜುಂದಾರ್ ಷಾ ಕ್ಯಾನ್ಸರ್ ಸಂಸ್ಥೆ, ಬೆಂಗಳೂರು ಇವರ ಸಹಯೋಗದೊಂದಿಗೆ ವಿ.ಐ.ಎಸ್.ಎಲ್ ಆಸ್ಪತ್ರೆಯಲ್ಲಿ ಮಹಿಳೆಯರಿಗಾಗಿ ಉಚಿತ ಸ್ತನ ಕ್ಯಾನ್ಸರ್ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.
ವಿಐಎಸ್‌ಎಲ್ ಆಸ್ಪತ್ರೆಯ ವೈದ್ಯರಾದ ಡಾ| ಕೆ.ಎಸ್. ಸುಜೀತ್ ಕುಮಾರ್ ಮತ್ತು ಡಾ| ಎಸ್.ಎನ್. ಸುರೇಶ್, ಪ್ರಧಾನ ವ್ಯವಸ್ಥಾಪಕರಾದ (ಹಣಕಾಸು) ಶೋಭಾ ಶಿವಶಂಕರನ್ ಕಾರ್ಯಕ್ರಮ ಉದ್ಘಾಟಿಸಿದರು. ವಿ.ಐ.ಎಸ್.ಎಲ್ ಆಸ್ಪತ್ರೆಯ ಚೀಪ್ ಕನ್ಸಲ್‌ಟೆಂಟ್‌ಗಳಾದ (ಮೆಡಿಕಲ್) ಡಾ| ಎಚ್. ಶೋಭಾ, ಡಾ| ಟಿ.ಎನ್. ಸುಶ್ಮಾ, ಮತ್ತು ಸಹಾಯಕ ಪ್ರಬಂಧಕರಾದ (ಸಿಬ್ಬಂದಿ) ಶ್ರೀಮತಿ ಕೆ.ಎಸ್. ಶೋಭಾ, ನಾರಾಯಣ ಆಸ್ಪತ್ರೆಯ ಡಾ| ಕೀರ್ತನ, ಮಾರ್ಕೆಟಿಂಗ್ ಎಕ್ಸಿಕ್ಯೂಟೀವ್ ಕೆ.ಸಿ. ಆಕಾಶ್, ಎಕ್ಸ್ ರೇ-ತಂತ್ರಜ್ಞರಾದ ನಿರ್ಮಲ, ಕ್ಯಾನ್ಸ್ಸರ್ ನರ್ಸಿಂಗ್ ತಂಡದ ಲಲಿತ ಉಪಸ್ಥಿತರಿದ್ದರು.