ಭದ್ರಾವತಿ: ಅರಬಿಳಚಿ ಗ್ರಾಪಂ ಪಿಡಿಒ ಅಮಾನತ್‌ಗೆ ಆಗ್ರಹ…
ಹೊಳೆಹೊನ್ನೂರು: ಭದ್ರಾವತಿ ತಾಲ್ಲೂಕು ಅರಬಿಳಚಿ ಗ್ರಾಪಂನ ಪಿಡಿಓ ನರೇಗಾ ಕೂಲಿ ಕೆಲಸ ನೀಡುವಲ್ಲಿ ವಿಫಲವಾಗಿದ್ದು, ಇ ಸ್ವತ್ತಿನ ವಿಚಾರದಲ್ಲಿ ಲಂಚಗುಳಿತ ಮಾಡುತ್ತಿzರೆ ಆರೋಪಿಸಿದ ಗ್ರಾಮಸ್ಥರು, ಸದರಿ ಪಿಡಿಓ ಅವರನ್ನು ವಜಗೊಳಿಸಿ ಇಲ್ಲವೇ ವರ್ಗಾಯಿಸಿ ಎಂದು ಆಗ್ರಹಿಸಿ ಗ್ರಾಪಂ ಮುಂಭಾಗ ಅನಿರ್ದಿಷ್ಠಾ ವಧಿ ಮುಷ್ಕರ ಪ್ರತಿಭಟನೆ ನಡೆಸಿದ್ದು ಇಂದು ಭದ್ರಾವತಿ ತಾ.ಪಂ. ಎದರು ಪ್ರತಿಭಟನೆ ನಡೆಸುತ್ತಿzರೆ.
ಅರಬಿಳಚಿ ಗ್ರಾಪಂ ವ್ಯಾಪ್ತಿಯ ನರೇಗಾ ಕಾರ್ಮಿಕರು ದಲಿತ ಸಂಘರ್ಷ ಸಮೀತಿ ಆಶ್ರಯದಲ್ಲಿ ಪ್ರತಿಭಟನೆ ನಡೆಸಿ ಪಿಡಿಒ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು.
ಗ್ರಾಪಂ ವ್ಯಾಪ್ತಿಯ ಗ್ರಾಮಸ್ಥರಿಗೆ ಪಿಡಿಓ ನರೆಗಾ ಕೂಲಿ ಕೆಲಸವನ್ನು ನೀಡುತ್ತಿಲ್ಲ. ಬಾಕಿ ಕೂಲಿ ಹಣವನ್ನು ಖಾತೆಗಳಿಗೆ ಜಮಾ ಮಾಡದೆ ಸತಾಯಿಸುತ್ತಿzರೆ. ಇಸ್ವತ್ತು ನೀಡಲು ಸಾವಿರಾರು ರೂಪಾಯಿ ಹಣ ಕೇಳುತ್ತಿzರೆ. ಲಂಚ ನೀಡದ ೧೪೦ಕ್ಕೂ ಹೆಚ್ಚು ಗ್ರಾಮಸ್ಥರಿಗೆ ಇಸ್ವತ್ತು ನೀಡಿಲ್ಲ ಎಂದು ಪಿಡಿಒ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾರೆ. ಇದೆ ಅಧಿಕಾರಿ ವಿರುದ್ಧ ಕಲ ದಿನಗಳ ಹಿಂದೆ ಪ್ರತಿಭಟನೆಯಾದಾಗ ಅರಬಿಳಚಿ ಗ್ರಾಪಂ ತನಿಖಾಧಿ ಕಾರಿಯಾಗಿ ನೇಮಕವಾದ ತಾಪಂ ಸಹಾಯಕ ನಿರ್ದೆಶಕ ಉಪೇಂದ್ರ ಪ್ರತಿಭಟನಾಕಾರರ ಮನವೊಲಿ ಸಲು ಮುಂದಾದರೂ ಅದು ಫಲಿಸಲಿಲ್ಲ. ಪಿಡಿಓ ಹನುಮಂತಪ್ಪ ಅವರನ್ನು ಕೂಡಲೆ ವಜಗೊಳಿಸಿ ಸೂಕ್ತ ಕಾನೂನು ಕ್ರಮ ಜರುಗಿಸುವ ವರೆಗೂ ಪ್ರತಿಭಟನೆಯನ್ನು ಕೈ ಬಿಡುವುದಿಲ್ಲ ಎಂದು ಪಟ್ಟು ಹಿಡಿದಿzರೆ.
ಮಧ್ಯಾಹ್ನದ ವೇಳೆಗೆ ಗ್ರಾಪಂಗೆ ಭೇಟಿ ನೀಡಿದ ಭದ್ರಾವತಿ ತಾಪಂ ಇಒ ರಮೇಶ್ ಪ್ರತಿಭಟನಾ ಕಾರ ರೊಂದಿಗೆ ಮಾತನಾಡಿದರೂ ಯಾವುದೇ ಪ್ರಯೋಜವಾಗಲಿಲ್ಲ. ಪಿಡಿಒ ವರ್ಗಾವಣೆಗೊಳಿಸಿ ಗ್ರಾಪಂ ಸಮಸ್ಯೆಗಳನ್ನು ಸರಿ ಪಡಿಸುವವರೆಗೆ ಪ್ರತಿಭಟನೆಯನ್ನು ಕೈ ಬಿಡುವುದಿಲ್ಲ ಎಂದು ಅನಿರ್ದಿಷ್ಠಾವಧಿ ಪ್ರತಿಭಟ ನೆ ಆರಂಭಿಸಿ, ಗ್ರಾಮ ಪಂಚಾಯಿತಿ ಆವರಣದಲ್ಲಿ ಅಡುಗೆ ಮಾಡಿ ಸೇವಿಸಿದರು. ಪಿಡಿಓ ಹಣ ದುರುಪಯೋಗದ ಆರೋಪ ಸೇರಿದಂತೆ ಕಾರ್ಯವೈಖರಿಯಿಂದ ಅಮಾಧಾನಗೊಂಡ ಗ್ರಾಪಂ ಸದಸ್ಯರು ಪ್ರತಿಭಟನಾಕಾರ ರೊಂದಿಗೆ ಪಿಡಿಓ ವಿರುದ್ಧ ಇಓಗೆ ದೂರು ನೀಡಿದರು.
ರೈತ ಮುಖಂಡ ಮಂಜು ನಾಥ್, ಗ್ರಾಪಂ ಅಧ್ಯಕ್ಷ ಸದಾ ಶಿವಪ್ಪ, ಡಿಎಸ್‌ಎಸ್ ತಾಲೂಕು ಸಂಚಾಲಕ ಸುರೇಶ್, ರಾಮ ಲಿಂಗಂ, ಗ್ರಾಪಂ ಸದಸ್ಯರಾದ ಕಿರಣ್, ಶಬರಿಶ್, ಗುಣಶೇಖರ್, ಬಸವರಾಜ್, ವೀರಭದ್ರಪ್ಪ, ಆಂಜ ನೇಯ ಇತರರಿದ್ದರು.