ಸಮಾಜ ಕಟ್ಟುವ ಕೆಲಸಕ್ಕೆ ಪಕ್ಷ-ಭೇದ ಮರೆತು ಎಲ್ಲರೂ ಶ್ರಮವಹಿಸಿ

ಹೊನ್ನಾಳಿ: ವೀರ ಮದಕರಿ ನಾಯಕರು ೨೫ ವರ್ಷಗಳ ಕಾಲ ಚಿತ್ರದುರ್ಗದ ಕೋಟೆಯನ್ನು ಕಟ್ಟಿ ಸಮರ್ಥವಾಗಿ ಆಡಳಿತ ನಡೆಸಿದ್ದು ಅವರ ಆದರ್ಶಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳ ಬೇಕೆಂದು ಎಂದು ವಾಲ್ಮೀಕಿ ಸಮಾಜದ ಅಧ್ಯಕ್ಷ ಟಿ.ಎಂ. ಶಿವಾನಂದ್ ಬಣ್ಣಿಸಿದರು.


ಟಿ.ಬಿ. ವೃತ್ತದಲ್ಲಿರುವ ವಾಲ್ಮೀಕಿ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ವೀರ ಮದಕರಿ ನಾಯಕರ ಜಯಂತಿ ಕಾರ್ಯಕ್ರಮ ವನ್ನುದ್ದೇಶಿಸಿ ಮಾತನಾಡಿದ ಅವರು, ವೀರ ಮದಕರಿ ನಾಯಕರು ೧೨ ವರ್ಷದ ಬಾಲಕ ನಾಗಿzಗ ಗದ್ದುಗೆ ಏರಿ ಇಡೀ ನಾಯಕ ಸಮುದಾಯಕ್ಕೆ ಕಿರೀಟಪ್ರಾಯರಾಗಿ ಚರಿತ್ರೆಯಲ್ಲಿ ಇಂದಿಗೂ ಅವರ ಹೆಸರು ಅಜರಾಮರವಾಗಿದೆ ಎಂದರು.
ಅವರು ತಮ್ಮ ಜೀವವನ್ನು ಲೆಕ್ಕಿಸದೇ ಹೋರಾಟ ಮಾಡಿ ಇತಿಹಾಸದ ಪುಟಗಳಲ್ಲಿ ತಮ್ಮ ಛಾಪು ಮೂಡಿಸಿದ್ದ ಧೀಮಂತ ನಾಯಕ ಎಂದು ವಿವರಿಸಿದರು.
ಸಮಾಜ ಕಟ್ಟುವ ಕೆಲಸಕ್ಕೆ ಎಲ್ಲರೂ ಪಕ್ಷ-ಭೇದ ಮರೆತು ಶ್ರಮಿಸುವಂತೆ ಮನವಿ ಮಾಡಿದರು.
ಗೌರವಾಧ್ಯಕ್ಷ ತಿಮ್ಮೇನಹಳ್ಳಿ ಚಂದಪ್ಪ ಅವರು ಮಾತನಾಡಿ, ವೀರಮದಕರಿ ನಾಯಕರನ್ನು ಹೈದರಾಲಿಯು ಸ್ನೇಹ ಬೆಳೆಸಿ ಮೋಸದಿಂದ ವಿಷಪ್ರಾಶನ ಮಾಡಿಸಿ ಕೊಲ್ಲಿಸಿದ್ದ. ತಮ್ಮ ಕೊನೆ ಘಳಿಗೆಯ ವರೆಗೂ ಹೈದರಾಲಿಯ ಸಾಮಂತರಾಗಿ ಕಪ್ಪ ಕಾಣಿಕೆ ಕೋಡದೇ ವೀರ ಮರಣವನ್ನ ಪ್ಪಿದರು ಎಂದು ತಿಳಿಸಿದರು. ಸಮಾಜದಲ್ಲಿ ಶಿಕ್ಷಿತರ ಸಂಖ್ಯೆ ಹೆಚ್ಚಾಗುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮಾಜಿ ಅಧ್ಯಕ್ಷ ಕೆ.ಎಲ್. ರಂಗಪ್ಪ ಮಾತನಾಡಿ, ವಾಲ್ಮೀಕಿ ಸಮಾಜ ರಾಜ್ಯದಲ್ಲಿ ಸುಮಾರು ೮೦ ಲಕ್ಷ ಜನರಿದ್ದು ಸಮುದಾಯದ ಪ್ರಶ್ನೆ ಬಂದಾಗ ಎಲ್ಲರೂ ಒಗ್ಗಟ್ಟಾಗಿ ಅನ್ಯಾಯದ ವಿರುದ್ಧ ಹೋರಾಡಲು ಕಂಕಣಬದ್ಧರಾಗಿರಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಕೊಣನತಲೆ ನಾಗಪ್ಪ, ಮಾರಿಕೊಪ್ಪದ ತಿಮ್ಮಪ್ಪ, ಪ್ರಧಾನ ಕಾರ್ಯದರ್ಶಿ ಸಿ. ಹನುಮಂತಪ್ಪ, ಕೋಶಾಧ್ಯಕ್ಷ ಎಂ.ಆರ್. ಹನುಮಂತಪ್ಪ, ಸಹಕಾರ್ಯದರ್ಶಿ ಕುಳಗಟ್ಟೆ ಡಿ.ಬಿ.ರಮೇಶ್, ಶ್ರೀನಿಧಿ, ಪರಶುರಾಮ್,ಎಸ್ಟಿ ಮೋರ್ಚಾ ಅಧ್ಯಕ್ಷ ಬಸವರಾಜಪ್ಪ, ಸಮಾಜದ ಮುಖಂಡರುಗಳಾದ ಜೆಸಿಬಿ ಹನುಮಂತ, ಕ್ಯಾಸಿನಕೆರೆ ಶೇಖರಪ್ಪ, ನೇರಲಗುಂಡಿ ಕುಬೇರಪ್ಪ, ಪ್ರಭು, ಟಿ.ಎಚ್.ಅಣ್ಣಪ್ಪ, ಪ್ರವೀಣ್, ರಮೇಶ್, ಕುಬೇರಪ್ಪ, ಹನುಮನಹಳ್ಳಿ ಹನುಮಂತಪ್ಪ, ವಿ.ಚಂದ್ರಪ್ಪ, ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.