ಅ. ೧೩: ಅಲಮೇಲಮ್ಮನ ಶಾಪ ನಾಟಕ ಪ್ರದರ್ಶನ
ಶಿವಮೊಗ್ಗ: ನಗರದ ಅನುಪಿನಕಟ್ಟೆಯಲ್ಲಿರುವ ಮಂಟೇನ್ ಇನ್ನೋವೇಟಿವ್ ಸ್ಕೂಲ್ನ ವಿದ್ಯಾರ್ಥಿಗಳು ಅ.೧೩ರ ಶುಕ್ರವಾರ ಸಂಜೆ ಇಲ್ಲಿನ ಕುವೆಂಪು ರಂಗಮಂದಿರದಲ್ಲಿ ಅಲಮೇಲಮ್ಮನ ಶಾಪ ಎಂಬ ನಾಟಕ ಪ್ರದರ್ಶಿಸಲಿzರೆ.
ಸಂಜೆ ೪ ಗಂಟೆಗೆ ನಡೆಯಲಿರುವ ಸಭಾ ಕಾರ್ಯಕ್ರಮಕ್ಕೆ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಡಿಡಿಪಿಐ ಸಿ.ಆರ್. ಪರಮೇಶ್ವರ, ಬಿಇಓ ನಾಗರಾಜ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು, ಮಂಟೇನ್ ಇನ್ನೋವೇಟಿವ್ ಎಜುಕೇಷನ್ ಸೊಸೈಟಿ (ಎಂಐ ಇಎಸ್) ಶೈಕ್ಷಣಿಕ ನಿರ್ದೇಶಕರಾದ ಟಿ.ಎಸ್. ಶಿವ ಕುಮಾರ್ ಅಧ್ಯಕ್ಷತೆ ವಹಿಸಲಿzರೆ. ಕಾರ್ಯದರ್ಶಿ ಶಿಲ್ಪಶ್ರೀ ಉಪಸ್ಥಿತರಿರುವರು.
ಕನ್ನಡ ನಾಡು, ನುಡಿ, ಕಲೆ, ಸಾಹಿತ್ಯ, ಸಂಸ್ಕತಿಯನ್ನು ಪ್ರತಿಬಿಂಬಿಸುವಕರ್ನಾಟಕ ಗತ ವೈಭವ ಎಂಬ ಪರಿಕಲ್ಪನೆಯೊಂದಿಗೆ ಕನ್ನಡ ಸಾಹಿತ್ಯದ ಮೆರಗು, ವೈeನಿಕತೆಯಲ್ಲಿ ಕರ್ನಾಟಕ, ನಾಡಿನ ಸಾಮ್ರಾಜ್ಯಗಳ ವೈಭವ, ನೃತ್ಯ ವೈಭೋಗದೊಂದಿಗೆ ಅಲಮೇಲಮ್ಮನ ಶಾಪ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.