ಆರ್.ಪ್ರಸನ್ನಕುಮಾರ್ ಹುಟ್ಟು ಹಬ್ಬದ ನಿಮ್ಮಿತ್ತ ಅಲೆಮಾರಿಗಳಿಗೆ ಅಗತ್ಯವಸ್ತುಗಳ ವಿತರಣೆ
ಶಿಕಾರಿಪುರ : ಉಳ್ಳಿ ಫೌಂಡೇ ಶನ್ ವತಿಯಿಂದ ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ಪ್ರಸನ್ನ ಕುಮಾರ್ ಹುಟ್ಟು ಹಬ್ಬವನ್ನು ಗುರುವಾರ ಅಲೆಮಾರಿಗಳಿಗೆ ಅಗತ್ಯವಸ್ತು ವಿತರಿಸುವ ಮೂಲಕ ಸರಳವಾಗಿ ಆಚರಿಸಲಾಯಿತು,
ವಿ.ಪ ಮಾಜಿ ಸದಸ್ಯ ಆರ್. ಪ್ರಸನ್ನ ಕುಮಾರ್ ರವರ ಹುಟ್ಟು ಹಬ್ಬದ ಅಂಗವಾಗಿ ಇಂದು ಪಟ್ಟಣದ ಹೊರವಲಯದಲ್ಲಿನ ಅಲೆಮಾರಿ ಜನತೆಗೆ ಬೆಡ್ ಶೀಟ್,ಬಿಸ್ಕತ್ ವಿತರಿಸಿದ ಉಳ್ಳಿ ಫೌಂಡೇಶನ್ ಅದ್ಯಕ್ಷ ಹಾಗೂ ಪುರಸಭಾ ಸದಸ್ಯ ಉಳ್ಳಿ ದರ್ಶನ್ ಮಾತನಾಡಿ,ವಿಪ ಮಾಜಿ ಸದಸ್ಯ ಪ್ರಸನ್ನಕುಮಾರ್ ಸರಳ ವ್ಯಕ್ತಿತ್ವದ ಜತೆಗೆ ಸದಾ ಜನಸಾಮಾನ್ಯರ ಹಿತ ಬಯಸುವ ಅಪರೂಪದ ರಾಜ ಕಾರಣಿಯಾಗಿzರೆ ಎಂದು ತಿಳಿಸಿ ದರು.
ವಿಪ ಸದಸ್ಯರಾದ ಅವಧಿಯಲ್ಲಿ ತಾಲೂಕಿನ ಬಹುತೇಕ ಗ್ರಾಮದ ರಸ್ತೆ ಚರಂಡಿ ಮತ್ತಿತರ ಕಾಮಗಾರಿಗೆ ಅನುದಾನವನ್ನು ನೀಡಿ ತಾಲೂಕಿನ ಅಭಿವೃದ್ದಿಗೆ ಕೊಡುಗೆಯನ್ನು ಸಲ್ಲಿಸಿzರೆ ಜನ ಪರ ಕಾಳಜಿಯ ಪ್ರಸನ್ನಕುಮಾರ್ ರವರು ದೊರೆತ ಅಧಿಕಾರಾವಧಿಯಲ್ಲಿ ಸಂಪೂರ್ಣ ಜನಸೇವೆಗೆ ಸಮಯ ಮೀಸಲಿಟ್ಟು ಮಾದರಿ ವ್ಯಕ್ತಿತ್ವದ ರಾಜಕಾರಣಿಯಾಗಿ ಗುರುತಿಸಿಕೊಂಡಿzರೆ ಎಂದು ತಿಳಿಸಿದರು.
ಅವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿಸುವ ದಿಸೆ ಯಲ್ಲಿ ಉಳ್ಳಿ ಫೌಂಡೇಶನ್ ವತಿ ಯಿಂದ ಸಾಮಾನ್ಯ ಜನತೆ, ಅಲೆ ಮಾರಿಗಳಿಗೆ ಬೆಡ್‌ಶೀಟ್,ಬಿಸ್ಕತ್ ವಿತರಿಸಿ ತಾಲೂಕಿಗೆ ಅವರ ಸೇವೆ ಕೊಡುಗೆಯನ್ನು eಪಿಸಿಕೊಳ್ಳಲು ಸಕಾಲವಾಗಿದೆ ಪುನಃ ಅವರಿಗೆ ಭಗವಂತ ಜನಸಾಮಾನ್ಯರ ಸೇವೆ ಗೈಯುವ ಅವಕಾಶ ಕಲ್ಪಿಸಲಿ ಎಂದು ಹಾರೈಸಿ ಈ ದಿಸೆಯಲ್ಲಿ ಅವರಿಗೆ ಸುಖ ಸಂತೋಷ ನೆಮ್ಮದಿ ದೊರೆಯಲಿ ಎಂದು ಪ್ರಾರ್ಥಿಸಿ ದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಶ್ರೀಧರ್ ಕರ್ಕಿ, ಸುರೇಶ್ ಕಲ್ಮನೆ,ಡಿಡಿ ಶಿವ ಕುಮಾರ್,ದಯಾನಂದ ಗಾಮ, ರಾಜು ಉಡಗುಣಿ, ಗಣೇಶ್, ಸುಹಾಸ್,ನಾಗರಾಜ್ ಮತ್ತಿತರ ಮುಖಂಡರು ಹಾಜರಿದ್ದರು.