ಬಡ ದಲಿತನ ಮೇಲೆ ಮಾರಣಾಂತಿಕ ಹ ನಡೆಸಿದ ವ್ಯಕ್ತಿಗಳನ್ನು ಬಂಧಿಸಲು ಆಗ್ರಹಿಸಿ ಪ್ರತಿಭಟನೆ
ಶಿವಮೊಗ್ಗ: ಬಡ ದಲಿತನ ಮೇಲೆ ಮಾರಣಾಂತಿಕ ಹ ನಡೆಸಿದ ವ್ಯಕ್ತಿಗಳನ್ನು ಬಂಧಿಸಬೇಕು ಮತ್ತು ಕರ್ತವ್ಯಲೋಪ ಎಸಗಿರುವ ವಿಭಾಗ ೨ರ ಡಿವೈಎಸ್‌ಪಿಯ ವರನ್ನು ಬಂಧಿಸಬೇಕು ಎಂದು ಆಗ್ರ ಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ)ಯ ಪದಾಧಿಕಾರಿಗಳು ಇಂದು ಜಿಧಿಕಾರಿಗಳ ಕಚೇರಿ ಎದುರು ಪ್ರತಿಭ ಟನೆ ನಡೆಸಿ ಜಿಧಿಕಾರಿಗಳ ಮೂಲಕ ಗೃಹಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ದಲಿತರ ಮೇಲೆ ದೌರ್ಜ ನ್ಯಗಳು ನಿರಂತರವಾಗಿ ನಡೆಯು ತ್ತಲೇ ಇದೆ. ಶಿವಮೊಗ್ಗ ವಿಭಾಗ ೨ರ ಡಿವೈಎಸ್‌ಪಿ ಸುರೇಶ್ ಎಂ. ಅವರು ಶಿವಮೊಗ್ಗಕ್ಕೆ ಬಂದ ನಂತರ ಪರಿಶಿಷ್ಟರ ಮೇಲಿನ ದೌರ್ಜನ್ಯ ಹೆಚ್ಚಗುತ್ತಿದೆ. ದಔರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕೊಳ್ಳುತ್ತಿಲ್ಲ. ದಾಖಲಿಸಲೇಬೇ ಕೆಂಬ ಅನಿವಾರ್ಯ ಸ್ಥಿತಿ ಬಂದಾಗ ನಿರೀಕ್ಷಣಾ ಜಮೀನು ಪಡೆಯಲು ಅನುಕೂಲವಾಗುವಂತೆ ನೋಡಿ ಕೊಳ್ಳುತ್ತಾರೆ. ದೂರು ಕೊಟ್ಟವರನ್ನೆ ಬೆದರಿಸುತ್ತಾರೆ ಎಂದು ದೂರಿ ದರು.
ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಸವನ ಗಂಗೂರು ಗ್ರಾಮದ ಪರಿಶಿಷ್ಟ ಜನಾಂಗದ ಕೋಟಿ ಎಂಬುವರ ಮೇಲೆ ಅದೇ ಗ್ರಾಮದ ಅರುಣ್ ಮತ್ತು ಸಂಗಡಿಗರು ಅ.೨ರಂದು ಮನೆಯಿಂದ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಬೆತ್ತಲೆ ಗೊಳಿಸಿ ಮದ್ಯ ಸುರಿದು ದೊಣ್ಣೆ ಗಳಿಂದ ಮಾರಣಾಂತಿಕ ಹ ನಡೆಸಿ ಚಾಕುವಿನಿಂದ ತಿವಿದಿzರೆ. ಇವರ ವಿರುದ್ಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾ ಗಿದ್ದರೂ ಕೂಡ ಆರೋಪಿಗಳನ್ನು ಬಂಧಿಸದೆ ನಿರೀಕ್ಷಣಾ ಜಮೀನು ಪಡೆಯಲು ಅವಕಾಶ ಮಾಡಿಕೊ ಟ್ಟಿzರೆ ಎಂದು ಪ್ರತಿಭಟನಕಾ ರರು ತಿಳಿಸಿzರೆ.
ಕೊಲೆ ಪ್ರಯತ್ನ ಹಾಗೂ ದೌರ್ಜನ್ಯ ಪ್ರಕರಣದ ಆರೋಪಿ ಗಳನ್ನು ಬಂಧಿಸದೆ ಕರ್ತವ್ಯ ಲೋಪ ಎಸಗಿರುವ ಸುರೇಶ್ ಅವರನ್ನು ತಕ್ಷಣವೇ ವರ್ಗಾವಣೆ ಮಾಡಿ ತಪ್ಪಿತಸ್ಫರ ಮೇಲೆ ಕ್ರಮ ಕೈಗೊಳ್ಳ ಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಪ್ರತಿಭಟನೆಯಲ್ಲಿ ದಲಿತ ಸಂಘರ್ಷ ಸಮಿತಿಯ ಜಿ ಸಂಚಾಲಕ ಟಿ.ಹೆಚ್. ಹಾಲೇಶಪ್ಪ, ಪ್ರಮುಖರಾದ ಎಂ.ಬಿ. ಶಿವಕುಮಾರ್, ಎ.ಡಿ. ಆನಂದ್, ರಂಗಸ್ವಾಮಿ, ಪರಮೇಶ್ ಸೂಗೂರು, ಶೇಷಪ್ಪ, ಜಗ್ಗು, ಸೇರಿದಂತೆ ಹಲವರಿದ್ದರು.