ಮೂಲಭೂತ ಸೌಲಭ್ಯ ಕಲ್ಪಿಸಲು ಆಗ್ರಹಿಸಿ ಮನವಿ

ಶಿವಮೊಗ್ಗ: ಮೂಲಭೂತ ಸೌಲಭ್ಯ ಕಲ್ಪಿಸಲು ಆಗ್ರಹಿಸಿ ಬೊಮ್ಮನಕಟ್ಟೆ ಮುಖ್ಯರಸ್ತೆ ಕ್ಷೇಮಾಭಿವೃದ್ಧಿ ಸಮಿತಿ ವತಿಯಿಂದ ಪಾಲಿಕೆ ಆಯುಕ್ತರಿಗೆ ಇಂದು ಮನವಿ ಸಲ್ಲಿಸಲಾಯಿತು.
ನಗರದ ಒಂದು ಮತ್ತು ಎರಡನೇ ವಾರ್ಡ್‌ನಲ್ಲಿ ಹಾದು ಹೋಗಿರುವ ರೈಲ್ವೆ ಗೇಟ್‌ನಿಂದ ಹಳೆಬೊಮ್ಮನಕಟ್ಟೆಗೆ ಹೋಗುವ ಮುಖ್ಯ ರಸ್ತೆಗೆ ಯಾವುದೇ ರೀತಿಯ ಮೂಲಭೂತ ಸೌಕರ್ಯ ಗಳನ್ನು ಒದಗಿಸಿಲ್ಲ. ಈ ರಸ್ತೆಯಲ್ಲಿ ಇದುವರೆಗೆ ಬಾಕ್ಸ್‌ಡ್ರೈನ್, ಒಳಚರಂಡಿಯಂತಹ ಮೂಲ ಸೌಕರ್ಯ ಇರುವುದಿಲ್ಲ ಹಾಗೂ ಇತ್ತೀಚೆಗೆ ಕುಡಿಯುವ ನೀರಿನಲ್ಲಿ ಕಲುಷಿತ ನೀರು ಮಿಶ್ರಣಗೊಂಡು ಈ ಭಾಗದ ಜನರ ಆರೋಗ್ಯದಲ್ಲಿ ತೊಂದರೆ ಕಾಣಿಸಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಈವರೆಗೆ ಗಮನಹರಿಸಿಲ್ಲ. ಡೆಂಗ್ಯೂ ಹಾಗೂ ಚಿಕುನ್‌ಗುನ್ಯಾ ದಂತಹ ಮಾರಣಾಂತಿಕ ಕಾಯಿಲೆ ಹಬ್ಬುತ್ತಿದೆ. ಕೂಡಲೇ ಪಾಲಿಕೆ ವತಿಯಿಂದ ಮೂಲಭೂತ ಸೌಲಭ್ಯ ಕಲ್ಪಿಸಿಕೊಡಲು ಆಗ್ರಹಿಸಿದೆ.
ಈಸಂದರ್ಭದಲ್ಲಿ ಪ್ರಮುಖ ರಾದ ರಘು ಬಿ, ಬೊಮ್ಮನಕಟ್ಟೆ ಮುಖ್ಯರಸ್ತೆ ನಿವಾಸಿಗಳ ಸಂಘದ ಮುಖ್ಯಸ್ಥರು ಮೊದಲಾದವರು ಇದ್ದರು.