ಕ್ಷೇಮ ಟ್ರಸ್ಟ್ ವತಿಯಿಂದ ಜೀವನ ಕಲೆ ಪುಸ್ತಕ ಲೋಕಾರ್ಪಣೆ

ಶಿವಮೊಗ್ಗ : ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಅಂಗ ವಾಗಿ ನಗರದ ಖ್ಯಾತ ಮನೋ ವೈದ್ಯೆ ಡಾ. ಕೆ ಎಸ್ ಪವಿತ್ರರವರು ಬರೆದ ಜೀವನ ಕಲೆ ಪುಸ್ತಕ ಲೋಕಾರ್ಪಣೆ ನಡೆಯಿತು.
ನಗರದ ಕ್ಷೇಮ ಟ್ರಸ್ಟ್ ಹಾಗೂ ರಾಜೇಂದ್ರನಗರ ಕ್ಷೇಮಾಭಿವೃದ್ಧಿ ಸಂಘ ಇವರುಗಳ ಸಂಯುಕ್ತ ಆಶ್ರಯದಲ್ಲಿ ಅನಿಕೇತನ ಪಾರ್ಕಿ ನಲ್ಲಿ ನಡೆದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜೇಂದ್ರನಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪ್ರೊ. ಜೆ ಎಲ್ ಪದ್ಮನಾಭ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕ್ಷೇಮ ಟ್ರಸ್ಟಿನ ಅಧ್ಯಕ್ಷ ಡಾ. ಕೆ ಎಸ್ ಶ್ರೀಧರ್, ರೋಟರಿ ಪೂರ್ವ ಸಂಸ್ಥೆ ಅಧ್ಯಕ್ಷ ಸತೀಶ್ ಚಂದ್ರ, ಪ್ರಾಂಶು ಪಾಲ ಸೂರ್ಯನಾರಾಯಣ, ಪಾಲಿಕೆ ಸದಸ್ಯ ನಾಗರಾಜ ಕಂಕಾರಿ ಆಗಮಿಸಿದ್ದರು.
ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಅಂಗವಾಗಿ ಸಾರ್ವ ಜನಿಕರಿಗೆ ಮಾನಸಿಕ ಆರೋಗ್ಯ ಕುರಿತ ರಸಪ್ರಶ್ನೆ ಕಾರ್ಯಕ್ರಮ eನದೀಪ ಶಾಲೆಯ ಎಂ ವಿ ಮಲ್ಲಿಕಾರ್ಜುನ್ ರವರಿಂದ ನಡೆಯಿತು. ಖ್ಯಾತ ಲೇಖಕಿ, ಪ್ರಸಿದ್ಧ ಮನೋವೈದ್ಯೆ ಡಾ. ಕೆ ಎಸ್ ಶುಭ್ರತಾ ಅಚ್ಚುಕಟ್ಟಾಗಿ ಕಾರ್‍ಯ ಕ್ರಮದ ನಿರೂಪಣೆ ಮಾಡಿದರು.