ದೇವಿಕೊಪ್ಪದ ಇಂಗಿನಕೆರೆಗೆ ಶಾಸಕರಿಂದ ಬಾಗಿನ ಅರ್ಪಣೆ

ಶಿಕಾರಿಪುರ: ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಸಂಸದ ರಾಘವೇಂದ್ರ ಅವರ ಸತತ ಪರಿಶ್ರಮದಿಂದ ಮೊದಲ ಹಂತದಲ್ಲಿ ತಾಲೂಕಿನ ಉಡಗಣಿ, ತಾಳಗುಂದ ಹೊಸೂರು, ಹೋಬಳಿಯ ಅಂದಾಜು ೧೮೦ ಕೆರೆಗಳಲ್ಲಿ ೧೧೪ ಕೆರೆಗಳು ಪೂರ್ತಿ ತುಂಬಿದ್ದು, ೩೮ ಕೆರೆಗಳು ಶೇ.೫೦ ತುಂಬಿದೆ. ಉಳಿದ ೨೮ ಕೆರೆಗಳು ತುಂಬಿಸುವುದು ಬಾಕಿ ಇದೆ. ಎರಡನೇ ಹಂತದಲ್ಲಿ ೧೦೧ ಕೆರೆ ತುಂಬಿಸುವ ಕಾಮಗಾರಿ ಕೈಗೆತ್ತಿ ಕೊಂಡಿದ್ದು ಎ ಕೆರೆಗಳಿಗೆ ಅಕ್ಟೋಬರ್ ಕೊನೆಯಲ್ಲಿ ನೀರು ತುಂಬಿಸಲಾಗುವುದು ಎಂದು ಎಂದು ಕ್ಷೇತ್ರದ ಶಾಸಕ ವಿಜಯೇಂದ್ರ ತಿಳಿಸಿದರು.


ತಾಲೂಕಿನ ದೇವಿಕೊಪ್ಪದ ಇಂಗಿನಕೆರೆ ತುಂಬಿ ಹರಿಯುತ್ತಿರುವ ಹಿನ್ನಲೆಯಲ್ಲಿ ಬಾಗಿನ ಸಮರ್ಪಿಸಿ ಮಾತನಾಡಿದ ಅವರು, ರಾಜ ಕೀಯ ಜನ್ಮ ನೀಡಿದ ತಾಲೂಕಿನ ಜನತೆಯ ಋಣ ತೀರಿಸುವ ಸಂಕಲ್ಪದಿಂದ ಯಡಿಯೂರಪ್ಪ ನವರು ಮುಖ್ಯಮಂತ್ರಿಯಾದ ಕೂಡಲೇ ತಾಲೂಕಿನಾದ್ಯಂತ ನೀರಾವರಿ ಯೋಜನೆಗೆ ಅಗತ್ಯ ವಿರುವ ಹಣ ವನ್ನು ಬಿಡುಗಡೆ ಗೊಳಿಸಿ ಕಾಳಜಿ ಯನ್ನು ಮೆರೆದಿ zರೆ. ಕೇವಲ ವರ್ಷದ ಅವಧಿಯಲ್ಲಿಯೇ ತಾಲೂಕಿನ ಎಲ್ಲ ಹೋಬಳಿಗೆ ಏತ ನೀರಾವರಿ ಯೋಜನೆ ಪೂರ್ಣ ಗೊಳಿಸಿ ರೈತ ಸಮುದಾಯಕ್ಕೆ ಸಮರ್ಪಿಸಿzರೆ. ಸಂಸದ ರಾಘವೇಂದ್ರ ಅವರ ಸತತ ಪರಿಶ್ರಮದಿಂದ ತಾಲೂಕಿನ ಉಡ ಗಣಿ, ತಾಳಗುಂದ ಹೊಸೂರು, ಹೋಬಳಿಯ ಅಂದಾಜು ೧೮೦ ಕೆರೆಗಳಿಗೆ ಮೊದಲನೇ ಹಂತದಲ್ಲಿ ೧೧೪ ಕೆರೆಗಳು ಯೋಜನೆ ಯಿಂದಾಗಿ ಪೂರ್ತಿ ತುಂಬಿದ್ದು ೩೮ ಕೆರೆಗಳು ಶೇ.೫೦ ಭರ್ತಿಯಾಗಿದೆ ಉಳಿದ ೨೮ ಕೆರೆಗಳು ತುಂಬಿಸು ವುದು ಮಾತ್ರ ಬಾಕಿ ಉಳಿದಿದೆ ಎಂದು ತಿಳಿಸಿದ ಅವರು, ೨ನೇ ಹಂತದಲ್ಲಿ ೧೦೧ ಕೆರೆ ತುಂಬಿಸುವ ಕಾಮಗಾರಿ ಕೈಗೆತ್ತಿಕೊಂಡಿದ್ದು ಎ ಕೆರೆಗಳಿಗೆ ಅಕ್ಟೋಬರ್ ಅಂತ್ಯಕ್ಕೆ ನೀರು ತುಂಬಿಸಲಾ ಗುವುದು ಎಂದರು.
ಪ್ರಸ್ತುತ ವಿದ್ಯುತ್ ಅಭಾವ ದಿಂದಾಗಿ ಎಲ್ಲ ಕೆರೆಗಳಿಗೆ ನೀರು ತುಂಬಿಸಲು ಸಾಧ್ಯವಾಗಿಲ್ಲ. ಆದ್ದರಿಂದ ಸಂಸದ ರಾಘವೇಂದ್ರರ ಸಮಕ್ಷಮದಲ್ಲಿ ನೀರಾವರಿ ಹಾಗೂ ಇಂಧನ ಇಲಾಖೆಯ ಅಧಿಕಾರಿಗಳು ಸಭೆ ನಡೆಸಿ ಯಾವುದೇ ತೊಂದರೆ ಗಳಾಗದಂತೆ ಎಚ್ಚರ ವಹಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದ ಅವರು, ನವಂಬರ್ ಅಂತ್ಯದೊಳಗೆ ತಾಲೂ ಕಿನ ಎ ಕೆರೆಗಳಿಗೆ ಸಂಪೂರ್ಣ ನೀರು ತುಂಬಿಸುವ ಕಾರ್ಯವನ್ನು ಯಶಸ್ವಿ ಯಾಗೊಳಿಸುವುದು ನಿಶ್ಚಿತ. ಆ ಮೂಲಕ ಸಮಗ್ರ ಶಿಕಾರಿಪುರ ತಾಲೂಕು ಎಂದಿನಂತೆ ಸಮೃದ್ಧಿಯ ಬೀಡಾಗಿಸುವ ಗುರಿ ಹೊಂದಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಲೆ ನಾಡು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಗುರುಮೂರ್ತಿ, ಮಹಾಶಕ್ತಿ ಕೇಂದ್ರ ಅಧ್ಯಕ್ಷ ತಾಳ ಗುಂದ ಸತೀಶ್ ಮುಖಂಡ ಕೊಳಗಿ ರೇವಣಪ್ಪ,ಸಣ್ಣ ಹನುಮಂತಪ್ಪ, ಕವಲಿ ಸುಬ್ರಹ್ಮಣ್ಯ, ಪರಮೇ ಶಪ್ಪ,ಮುತ್ತು ಗೌಡ್ರು, ಶಿವಯೋಗಿ ಗೌಡ್ರು, ಗ್ರಾ.ಪಂ ಸದಸ್ಯ ಜಗ ದೀಶ್, ಗಿರೀಶ್ ಗೌಡ್ರು, ಮಂಜ ಪ್ಪ ಉಮೇಶ್ ಗೌಡ್ರು ಬಿಜೆಪಿ ಕಾರ್‍ಯಕರ್ತರು ಉಪಸ್ಥಿತರಿದ್ದರು.