ಮಾನಸಿಕ ಆರೋಗ್ಯಕ್ಕೆ ಪ್ರಾಮುಖ್ಯತೆ ನೀಡುವುದು ಮುಖ್ಯ….
ಶಿವಮೊಗ್ಗ: ಮಾನಸಿಕ ಆರೋ ಗ್ಯವನ್ನು ಬಹುತೇಕ ಎಲ್ಲರೂ ನಿರ್ಲಕ್ಷ್ಯ ಮಾಡುತ್ತಿದ್ದು, ಪ್ರತಿ ಯೊಬ್ಬರು ಮನಸ್ಸಿನ ಆರೋಗ್ಯ ಸದೃಢವಾಗಿ ಕಾಪಾಡಿಕೊಳ್ಳಲು ಮುಂದಾಗಬೇಕು. ಮಾನಸಿಕ ಆರೋಗ್ಯ ಕಾಯ್ದುಕೊಳ್ಳಲು ಪ್ರಾಮುಖ್ಯತೆ ನೀಡಬೇಕು ಎಂದು ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್‌ಕುಮಾರ್ ಹೇಳಿದರು.
ರಾಜೇಂದ್ರ ನಗರದ ಅನಿಕೇತನ ಉದ್ಯಾನವನದಲ್ಲಿ ಸಾರ್ವಜನಿಕರಿಗೆ ಆಯೋಜಿಸಿದ್ದ ವಿಶ್ವ ಮಾನಸಿಕ ಆರೋಗ್ಯ ಜಗೃತಿ ಕಾರ್ಯಕ್ರಮ, ರಸಪ್ರಶ್ನೆ ಮತ್ತು ಪುಸ್ತಕ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ದೇಹದ ಅಂಗಗಳ ಆರೋಗ್ಯ ಸರಿಯಿಟ್ಟುಕೊಳ್ಳುವುದು ಎಷ್ಟು ಮುಖ್ಯವೋ ಮನಸ್ಸಿನ ಆರೋಗ್ಯವು ಸಹ ಅಷ್ಟೇ ಮುಖ್ಯ. ಕುಟುಂಬದಲ್ಲಿ ಒಬ್ಬರು ಮಾನಸಿಕ ರೋಗಿ ಇದ್ದರೂ ಕುಟುಂಬದ ಚಿತ್ರಣವೇ ಬೇರೆ ಇರುತ್ತದೆ. ಮಾನಸಿಕ ಆರೋಗ್ಯಗಳಿಗೆ ಸಕಾಲ ದಲ್ಲಿ ಸೂಕ್ತ ಚಿಕಿತ್ಸೆ ಹಾಗೂ ಆಪ್ತ ಸಮಾಲೋಚನೆ ಮುಖ್ಯ ಎಂದು ತಿಳಿಸಿದರು.
ಇಂದು ಸಮಾಜದಲ್ಲಿ ಮಾನ ಸಿಕ ಕಾಯಿಲೆಯಿಂದ ಬಳಲುವರ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರತಿಯೊಂ ದು ಕ್ಷೇತ್ರದಲ್ಲಿ ಜನರು ಒತ್ತಡದಿಂದ ಬದುಕುತ್ತಿzರೆ. ಮಾನಸಿಕ ಕಾಯಿಲೆ ಬರದ ಹಾಗೆ ನೋಡಿ ಕೊಳ್ಳಲು ಉತ್ತಮ ಜೀವನ ಶೈಲಿ, ಸಕಾರಾತ್ಮಕ ಮನೋಭಾವನೆ, ಯೋಗ, ಪ್ರಾಣಾಯಾಮ, ಧ್ಯಾನ ಅತ್ಯಂತ ಪರಿಣಾಮಕಾರಿಯಾಗಿ ಸಹಕಾರಿಯಾಗುತ್ತದೆ ಎಂದರು.
ಡಾ. ಕೆ.ಎಸ್.ಪವಿತ್ರ ಅವರ ೫೬ನೇ ಕೃತಿ ಜೀವನ ಶೈಲಿ ಪುಸ್ತಕ ವನ್ನು ಕ್ಷೇಮ ಟ್ರಸ್ಟ್ ಅಧ್ಯಕ್ಷ ಡಾ. ಕೆ.ಆರ್.ಶ್ರೀಧರ್ ಲೋಕಾರ್ಪಣೆ ಗೊಳಿಸಿ ಮಾತನಾಡಿ, ಉತ್ತಮ ಪುಸ್ತಕಗಳು ಒಳ್ಳೆಯ ಅಭ್ಯಾಸಗಳು ಒಳ್ಳೆಯ ಸಂಗೀತವನ್ನು ಕೇಳುವುದ ರಿಂದ ಸದಾ ನಮ್ಮ ಮನಸ್ಸು ಉಲ್ಲ ಸಿತಗೊಳ್ಳುತ್ತದೆ. ಮಾನಸಿಕ ಆರೋಗ್ಯ ಸಾರ್ವತ್ರಿಕ ಮಾನವನ ಹಕ್ಕು ಆಗಿದೆ ಎಂದು ಹೇಳಿದರು.
ಸಾಮಾಜಿಕ ಜಲತಾಣ, ಟಿವಿ ಮಾಧ್ಯಮ, ತಂಬಾಕು ಮಧ್ಯಪಾನ ದುಶ್ಚಟಗಳಿಂದ ದೂರವಿರಬೇಕು. ಪ್ರಾರಂಭಿಕ ಹಂತದಲ್ಲಿ ಮಾನಸಿಕ ಕಾಯಿಲೆ ಗುರುತಿಸಿದರೆ ಗುಣಪಡಿ ಸಲು ಸಾಧ್ಯವಾಗಬಹುದು. ನಾವು ವಿಶ್ವ ಮಾನಸಿಕ ಆರೋಗ್ಯ ಕಾರ್ಯಕ್ರಮವನ್ನು ಬಡಾವಣೆಯ ಜನರಿಗೆ ಹೆಚ್ಚು ಹೆಚ್ಚು ತಲುಪಿಸುವುದರ ಮುಖಾಂತರ ಕಾರ್ಯಕ್ರಮಗಳನ್ನು ಹಮ್ಮಿಕೊ ಳ್ಳುತ್ತಿದ್ದೇವೆ ಎಂದು ತಿಳಿಸಿದರು.
eನದೀಪ ಶಾಲೆಯ ಉಪ ನ್ಯಾಸಕ ಮಲ್ಲಿಕಾರ್ಜುನ್ ಅವರು ಸಾರ್ವಜನಿಕರಿಗೆ ಮಾನಸಿಕ ಕಾಯಿಲೆ ಬಗ್ಗೆ ರಸಪ್ರಶ್ನೆಗಳನ್ನು ಕೇಳುವುದರ ಮುಖಾಂತರ ಅವರಿಗೆ ನಗದು ಬಹುಮಾನ ಹಾಗೂ ಪುಸ್ತಕಗಳನ್ನು ಕ್ಷೇಮ ಟ್ರಸ್ಟ್ ವತಿಯಿಂದ ವಿತರಿಸಿದರು.
ಇದೇ ಸಂದರ್ಭದಲ್ಲಿ ಡಾ. ಕೆ.ಎಸ್.ಶುಭ್ರತಾ ಅವರು ಮಾನಸಿಕ ಕಾಯಿಲೆ ಹಾಗೂ ಜೀವನ ಶೈಲಿಯ ಬಗ್ಗೆ ಮಾತನಾಡಿದರು. ರಾಜೇಂದ್ರ ನಗರದ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪ್ರೊ. ಜೆ.ಎಲ್.ಪದ್ಮನಾಭ ಅಧ್ಯಕ್ಷತೆ ವಹಿಸಿದ್ದರು. ಡಾ. ಕೆ.ಎಸ್.ಪವಿತ್ರಾ, ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಸತೀಶ್ ಚಂದ್ರ, ಸೂರ್ಯನಾರಾಯಣ ಮೊದಲಾದವರು ಉಪಸ್ಥಿತರಿ ದ್ದರು.