ರಕ್ಷಣೆ ಕುರಿತು ತುಟಿಕ್ ಪಿಟಿಕ್ ಎನ್ನದ ರಕ್ಷಕರು…!

ಶಾಂತಿ ನಗರದ ಮನೆಯೊಂದರಲ್ಲಿ ಸತ್ಯಶೋಧನಾ ಸಮಿತಿ ಮುಖಂಡರು ಸ್ಥಳೀಯರೊಂದಿಗೆ ಸಭೆ ನಡೆಸಿದರು. ಹಿಂದೂ ರಕ್ಷಣೆಯ ಬಗ್ಗೆ ಪುಂಖಾನುಪುಂಖ ಭಾಷಣ ಮಾಡುವ ಇವರು ಹಿಂದೂಗಳ ರಕ್ಷಣೆ ಬಗ್ಗೆ ಪ್ರಶ್ನೆ ಎದುರಾದಾಗ ಸಭೆಯನ್ನೇ ಮುಕ್ತಾಯಗೊಳಿಸುವ ಮೂಲಕ ನೆರೆದವರೆಲ್ಲರಿಗೂ ಅಚ್ಚರಿಯನ್ನುಂಟು ಮಾಡಿತು.
ನಿರೀಕ್ಷೆಗಳನ್ನು ಹೊತ್ತು ಸಭೆಯಲ್ಲಿ ಉಪಸ್ಥಿತರಿದ್ದ ಹಿಂದೂಗಳಿಗೆ ರಕ್ಷಣೆ ಏನು ಎಂಬುದರ ಬಗ್ಗೆ ನಾಯಕರು ಮಾತನಾಡದೆ ಸಭೆ ಮುಗಿಸಿರುವುದು ಅಚ್ಚರಿ ಮೂಡಿಸಿದೆ. ಹಿಂದೂ ಹುಲಿ ಖ್ಯಾತಿಯ ಮಾಜಿ ಡಿಸಿಎಂ ಈಶ್ವರಪ್ಪ, ಮಾಜಿ ಗೃಹ ಸಚಿವ ಆರಗ eನೇಂದ್ರ, ಬಿಜೆಪಿ ರಾಜಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸಂಸದ ಬಿ.ವೈ ರಾಘವೇಂದ್ರ ಹಾಗೂ ಮತ್ತೋರ್ವ ಮಾಜಿ ಡಿಸಿಎಂ ಅಶ್ವಥ್ ನಾರಾಯಣ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಇವರ್‍ಯಾರೂ ಹಿಂದೂಗಳ ರಕ್ಷಣೆ ಕುರಿತು ಮಾತ್ರ ತುಟಿ ಬಿಚ್ಚಲಿಲ್ಲ.