ಅ.೮: ರಾಷ್ಟ್ರೀಯ ಕುಸ್ತಿ ಪಂದ್ಯಕ್ಕೆ ರಾಜ್ಯ ತಂಡದ ಆಯ್ಕೆ ಪ್ರಕ್ರಿಯೆ

ಶಿವಮೊಗ್ಗ: ೩೭ನೇ ರಾಷ್ಟ್ರೀಯ ಕುಸ್ತಿ ಪಂದ್ಯಾವಳಿ ಗೋವಾದಲ್ಲಿ ನಡೆಯಲಿದ್ದು, ಇದರ ಅಂಗವಾಗಿ ಕರ್ನಾಟಕ ತಂಡದ ಆಯ್ಕೆ ಪ್ರಕ್ರಿಯೆ ಅ.೮ರಂದು ಮೈಸೂರು ವಿವಿಯ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಆಸಕ್ತ ಕುಸ್ತಿಪಟುಗಳು ಭಾಗವಹಿಸ ಬೇಕು ಎಂದು ಶಿವಮೊಗ್ಗ ಜಿ ಕುಸ್ತಿ ಸಂಘದ ಅಧ್ಯಕ್ಷ ಎಸ್.ಕೆ. ರಘುವೀರ್ ಸಿಂಗ್ ತಿಳಿಸಿzರೆ.
ಕರ್ನಾಟಕ ಕುಸ್ತಿ ಸಂಘದ ರಾಜಧ್ಯಕ್ಷ ಬಿ. ಗುಣರಂಜನ್ ಶೆಟ್ಟಿ ಅವರ ನಿರ್ದೇಶನದ ಮೇರೆಗೆ ಈ ಆಯ್ಕೆ ಪಂದ್ಯಾವಳಿ ನಡೆಯಲಿದ್ದು, ಕರ್ನಾಟಕದ ಕುಸ್ತಿಪಟುಗಳು ಮಾತ್ರ ಇದರಲ್ಲಿ ಭಾಗವಹಿಸಬಹು ದಾಗಿದೆ. ಭಾಗವಹಿಸುವವರು ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್, ಪೋಟೋ ಹಾಗೂ ಡಬ್ಲ್ಯುಎಫ್‌ಐ ಲೈಸೆನ್ಸ್ ಬುಕ್ ಕಡ್ಡಾಯವಾಗಿ ತರಬೇಕು. ಯಾವುದೇ ಸರ್ಕಾರಿ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವವರು ಇದರಲ್ಲಿ ಭಾಗವಹಿಸುವಂತಿಲ್ಲ. ಒಂದು ಕೆಜಿ ದೇಹದ ತೂಕದಲ್ಲಿ ರಿಯಾಯಿತಿ ಇರುತ್ತದೆ. ಅ.೮ರ ಬೆಳಿಗ್ಗೆ ೮ ಗಂಟೆಗೆ ದೇಹತೂಕವನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಅವರು ತಿಳಿಸಿzರೆ.
ಪಂದ್ಯಾವಳಿಗಳು ಬೆಳಿಗ್ಗೆ ೧೦ ಗಂಟೆಗೆ ಆರಂಭವಾಗಲಿದ್ದು, ಫ್ರೀಸ್ಟೈಲ್‌ನಲ್ಲಿ ೫೭, ೬೫, ೭೪, ೮೬, ೯೭, ೧೨೫ ಕೆಜಿ ಮತ್ತು ಗ್ರೀಕ್‌ರೋಮ್‌ನಲ್ಲಿ ೬೦, ೬೭, ೭೭, ೮೭, ೯೭, ೧೩೦ ಕೆಜಿ ವಿಭಾಗಗಳು, ಮಹಿಳಾ ವಿಭಾಗದಲ್ಲಿ ೫೦, ೫೩, ೫೭, ೬೨, ೬೮, ೭೬ ಕೆಜಿಗಳ ಕ್ರಮವಾಗಿ ಆಯ್ಕೆ ಮಾಡಲಾಗುವುದು. ಹೆಚ್ಚಿನ ವಿವರಗಳಿಗೆ ದೂ. ೯೯೦೦೭೧೧೧೫೧ ಅಥವಾ ೯೯೦೧೬೩೦೩೮೩ರಲ್ಲಿ ಸಂಪರ್ಕಿಸಬಹುದಾಗಿದೆ.