ಸ್ವ ಉದ್ಯೋಗದೊಂದಿಗೆ ಕೌಶಲ್ಯ ರೂಪಿಸಿಕೊಳ್ಳಿ…
ಭದ್ರಾವತಿ: ಸೆಂಟ್ ಚಾರ್ಲ್ಸ್‌ನ ಅಧೀನದಲ್ಲಿರುವ ಕರುಣಾ ಸೇವಾ ಕೇಂದ್ರ ಮತ್ತು ಕರುಣಾ ಮಹಿಳಾ ಮಂಡಳಿಗಳ ಒಕ್ಕೂಟದ ಸಹಯೋಗದಲ್ಲಿ ಹಮ್ಮಿಕೊಂಡಿ ರುವ ಸ್ವಸಹಾಯ ಸಂಘಗಳಿಗೆ ಸ್ವಉದ್ಯೋಗ ಮಾಹಿತಿ ಕಾರ್ಯಗಾರವನ್ನು ನಗರಸಭೆ ಸಿಎಓ ಶ್ರೀಮತಿ ಸುಹಾಸಿನಿ ಅವರು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಎ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದಿರುವುದು ಹೆಮ್ಮೆಯ ವಿಷಯವಾಗಿದೆ. ಹೆಣ್ಣು ಮಕ್ಕಳು ಸ್ವಉದ್ಯೋಗ ಮಾಡುವುದರ ಜೊತೆಗೆ ಕೌಶಲ್ಯಗಳನ್ನು ಬೆಳೆಸಬೇಕು ಎಂದು ಕರೆ ನೀಡಿದರು.
ಕರುಣಾ ಸೇವಾ ಕೇಂದ್ರದ ನಿರ್ದೇಶಕಿ ಸಿಸ್ಟರ್ ಹೆಲೆನ್ ಮೊರಸ್ ಅವರು ಮಾನವ ಕಳ್ಳ ಸಾಗಾಣಿಕೆ ಬಗ್ಗೆ ಅರಿವು ಮೂಡಿಸಿದರು.
ವಿಶೇಷ ಅಗತ್ಯತೆಯುಳ್ಳ ಮಕ್ಕಳ ಶಾಲೆಯ ಮುಖ್ಯಸ್ಥೆ ಸಿಸ್ಟರ್ ಪ್ರಭ, ಕರುಣಾ ಮಹಿಳಾ ಮಂಡಳಿಗಳ ಅಧ್ಯಕ್ಷೆ ಶ್ರೀಮತಿ ಧನಲಕ್ಷಿ , ಒಕ್ಕೂಟದ ಸದಸ್ಯ ಅಲ್ಫೋನ್ಸ್ ಕಾರ್ಯಕರ್ತರಾದ ಗ್ರೇಸಿ ವಿನ್ನಿ ಧನಲಕ್ಷ್ಮಿ ಸೇರಿದಂತೆ ಸುಮಾರು ೧೫೦ ಮಹಿಳೆಯರು ಕಾರ್ಯ ಕ್ರಮದಲ್ಲಿ ಉಪಸ್ಥಿತರಿದ್ದರು.