ಮಹಾತ್ಮ ಗಾಂಧಿ ಪುಸ್ತಕಗಳ ಅಧ್ಯಯನ ಅವಶ್ಯಕ
ಶಿವಮೊಗ್ಗ: ಇಂದಿನ ಯುವ ಪೀಳಿಗೆಯು ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಪುಸ್ತಕಗಳ ಅಧ್ಯಯನ ಮಾಡಬೇಕು. ಅವರ ಜೀವನ ಚರಿತ್ರೆಯಿಂದ ಸ್ಫೂರ್ತಿ ಪಡೆದು ಉತ್ತಮ ಗುಣಗಳನ್ನು ಮೈಗೂಡಿಸಿ ಕೊಳ್ಳಬೇಕು ಎಂದು ರೋವರ್‍ಸ್ ಕ್ಲಬ್ ಅಧ್ಯಕ್ಷ ಕೆ.ಸಿ.ಮಲ್ಲಿಕಾ ರ್ಜುನಪ್ಪ ಹೇಳಿದರು.
ಶಿವಮೊಗ್ಗ ನಗರದ ರೋವರ್‍ಸ್ ಕ್ಲಬ್ ಕಚೇರಿಯಲ್ಲಿ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಅಹಿಂಸೆ ತತ್ವವನ್ನು ಮಹಾತ್ಮ ಗಾಂಧೀಜಿ ಪ್ರತಿಪಾದಿಸಿ ಜೀವನುದ್ದಕ್ಕೂ ಪಾಲಿಸಿಕೊಂಡು ಬಂದರು. ಸತ್ಯ ಮಾರ್ಗದಲ್ಲಿ ಜೀವ ನ ನಡೆಸಬೇಕು ಎಂದು ತಿಳಿಸಿದರು.
ಮಹಾತ್ಮ ಗಾಂಧೀಜಿ ಜೀವನವು ವಿಶ್ವದ ಸಾವಿರಾರು ಜನರಿಗೆ ಪ್ರೇರಣೆಯನ್ನು ಒದಗಿಸಿದ್ದು, ಲಕ್ಷಾಂತರ ಜನರು ಗಾಂಧೀಜಿ ಜೀವನ ಚರಿತ್ರೆಯಿಂದ ಪ್ರಭಾವಿತ ರಾಗಿzರೆ. ಯುವ ವಿದ್ಯಾರ್ಥಿ ಗಳು ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳುವಲ್ಲಿ ಗಾಂಧೀಜಿ ಅವರ ಜೀವನವು ಪರಿಣಾಮ ಬೀರುತ್ತದೆ ಎಂದರು.
ರೋವರ್‍ಸ್ ಕ್ಲಬ್ ಕಾರ್ಯದರ್ಶಿ ಆ.ಮ.ಪ್ರಕಾಶ್, ಖಜಂಚಿ ಎ.ಎಚ್.ಸುನೀಲ್, ನಿರ್ದೇಶಕರಾದ ಜಿ.ವಿಜಯ್ ಕುಮಾರ್, ಚಿನ್ನಪ್ಪ, ವಿನಾಯಕ, ಸಂದೀಪ್ ಕುಮಾರ್ ಬಳ್ ಮೊದಲಾದವರು ಉಪಸ್ಥಿತರಿ ದ್ದರು.