ವಿಶ್ವಕ್ಕೆ ಅಂಹಿಸಾ ಮಾರ್ಗ ಮತ್ತು ಸ್ವಾಭಿಮಾನ, ನೈತಿಕತೆ ಹೇಳಿಕೊಟ್ಟ ಇಬ್ಬರು ಮಹಾತ್ಮರು…
ಪ್ರತಿ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಎರಡನೇ ತಾರಿಖಿನಂದು ಇಡಿ ವಿಶ್ವವೇ ಮಾನ್ಯ ಮಾಡಿದ ಇಬ್ಬರು ಮಹಾನ್ ನಾಯಕರ ಜನ್ಮ ದಿನಾವರಣೆಯನ್ನು ಭಾರತದಾದ್ಯಂತ ಆಚರಿಸಲಾಗುತ್ತದೆ.
ಒಂದು ಕಡೆ ಇಡೀ ಜಗತ್ತಿಗೆ ಅಹಿಂಸೆಯನ್ನು ಪರಿಚಯಿಸಿದ ಮಹಾನ್ ಚೇತನ ಮಹಾತ್ಮ ಗಾಂಧೀಜಿ ಯಾದರೆ, ಇನ್ನೊಂದು ಕಡೆಗೆ ತಮ್ಮ ಜೀವನದುದ್ದಕ್ಕು ಯಾವುದಕ್ಕೂ ಅಂಜದೆ ಧೈರ್ಯದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದ ಸರಳತೆಯ ಪ್ರತೀಕವಾದ ಮಾಜಿ ಪ್ರಧಾನಿ ಲಾಲ್ ಬಹದ್ದೂರ ಶಾಸ್ತ್ರೀಜಿ. ಇವರಿರ್ವರ ಸಾಧನೆ, ತ್ಯಾಗ, ಬಲಿದಾನ, ದೇಶಪ್ರೇಮ ನೆನಪಿಸಿಕೊಂಡಾಗ ಭಾರತೀಯರಾದ ನಮಗೆ ಧನ್ಯತಾ ಭಾವ ಮೂಡುತ್ತದೆ.
ಅಹಿಂಸೆಯ ಹರಿಕಾರ ಬಾಪೂಜಿ: ಭಾರತ ದೇಶದ ಸ್ವತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿ ಕೇಳಿಬರುವ ಹೆಸರೇ ನಮ್ಮ ಈ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ. ಇವರ ಸ್ವತಂತ್ರ್ಯ ಹೋರಾಟದ ದಾರಿಯನ್ನೊಮ್ಮೆ ನೆನಪಿಸಿಕೊಂಡರೆ ರೋಮಾಂಚನಾವಾಗುತ್ತದೆ. ಮೋಹನದಾಸ ಕರಮಚಂದ್ ಗಾಂಧಿಯವರು ೧೮೬೯ ಅಕ್ಟೋಬರ್ ೨ರಂದು ಗುಜರಾತ್ ರಾಜ್ಯದ ಕರಾವಳಿ ಪಟ್ಟಣ ಪೋರಬಂದರ್‌ನಲ್ಲಿ ಜನಿಸಿದರು. ಇವರ ತಂದೆ ಬ್ರೀಟಿಷ ಆಡಳಿತದಲ್ಲಿ ಕಾಠೀಯಾವಾಡ್ ನಿಯೋಗದಲ್ಲಿನ ಪೋರಬಂದರ ರಾಜ್ಯದ ದಿವಾನರಾಗಿದ್ದರು. ಗಾಂಧೀಜಿ ಯವರಿಗೆ ೧೮೮೨ರ ಮೇ ತಿಂಗಳಿನಲ್ಲಿ ೧೩ ವರ್ಷವಿರುವಾಗಲೇ ಕಸ್ತೂರಿಬಾಯಿ ಎಂಬುವವರ ಜೊತೆ ಮದುವೆಯಾಯಿತು.
ಭಾರತೀಯ ಮೇರು ಕಥೆಗಳು, ಅದರಲ್ಲೂ ವಿಶೇಷವಾಗಿ ಭಾರತೀಯ ಮಹಾಕೃತಿಗಳಲ್ಲಿನ ಶ್ರವಣ ಮತ್ತು ಹರಿಶ್ಚಂದ್ರ ಮಹಾರಾಜರ ಬಾಲ್ಯಾವಸ್ಥೆಯಲ್ಲಿದ್ದ ಗಾಂಧಿಯವರ ಮೇಲೆ ಭಾರಿ ಪ್ರಭಾವ ಬೀರಿದ್ದವು. ಇದನ್ನು ಸ್ವತಃ ಗಾಂಧೀಜಿಯವರೆ ತಮ್ಮ ಆತ್ಮ ಚರಿತ್ರೆಯಲ್ಲಿ ಒಪ್ಪಿಕೊಂಡಿzರೆ. ಅದು ನನನ್ನು ಕಾಡಿಸಿದ ಪರಿಣಾಮವಾಗಿ ನಾನೇ ಸ್ವತಃ ಎಣಿಸಲಾಗದಷ್ಟು ಬಾರಿ ಹರಿಶ್ಚಂದ್ರನಂತೆ ವರ್ತಿಸಿದ್ದುಂಟು ಎಂದು ಬರೆದುಕೊಂಡಿzರೆ.
ಅಷ್ಟೇ ಅಲ್ಲದೆ ಮುಯ್ಯಿಗೆ ಮುಯ್ಯಿ ತೀರಿಸಿಕೊಳ್ಳುತ್ತಲೇ ಹೋದರೆ ಇಡೀ ಪ್ರಪಂಚವೇ ನಾಶವಾಗುವುದು ಮತ್ತು ನಾನು ಪ್ರಾಣ ತೆರೆಲು ಸಿದ್ಧನಿರಲಿಕ್ಕೆ ಹಲವಾರು ಕಾರಣಗಳಿವೆ, ಆದರೆ ಪ್ರಾಣ ತೆಗೆಯಲು ಸಿದ್ಧನಿರಲಿಕ್ಕೆ ಯಾವ ಕಾರಣವೂ ಇಲ್ಲ ಎಂಬ ಉಖಗಳು ಅವರ ಆತ್ಮ ಚರಿತ್ರೆಯಲ್ಲಿ ಇವೆ. ಈ ಅಂಶಗಳನ್ನು ಗಮನಿಸಿದಾಗ ಅವರ ಅಹಿಂಸಾ ಮಾರ್ಗ ಎಷ್ಟು ಬಲಿಷ್ಠವಾಗಿತ್ತು ಎಂಬುದು ಅರ್ಥವಾಗುತ್ತದೆ.
ಅವರು ವಿದೇಶಕ್ಕೆ ಹೋದಾಗ ಮಾಂಸ, ಮದ್ಯ ಮತ್ತು ಕಾಮದಾಹಗಳಿಂದ ದೂರವಿರ ಬೇಕೆಂಬ ಹಿಂದೂ ಆಚಾರ ಸೂತ್ರಗಳನ್ನು ಪಾಲಿಸುವುದಕ್ಕಾಗಿ ಜೈನ ಸನ್ಯಾಸಿ ಬೆಚಾರ್ಜೀ ಅವರ ಸನ್ನಿಧಿಯಲ್ಲಿ ತಾಯಿಗೆ ಪ್ರಮಾಣ ಮಾಡಿದ್ದು ಲಂಡನ್ ಪ್ರವಾಸದ ಮೇಲೆ ಪ್ರಭಾವ ಬೀರಿತ್ತು.
೧೮೯೩-೧೯೧೪ ರ ಅವಧಿಯ ದಕ್ಷಿಣ ಆಫ್ರಿಕಾದಲ್ಲಿ ವಕೀಲರಾಗಿದ್ದ ಸಮಯದಲ್ಲಿ ಅಲ್ಲಿ ವಾಸವಿದ್ದ ಭಾರತೀಯ ಸಮುದಾಯವು ನಾಗರಿಕ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿತ್ತು. ಇಂತಹ ಸಂದರ್ಭದಲ್ಲಿ ಅಹಿಂಸಾತ್ಮಕ ನಾಗರಿಕ ಅವಿಧೇಯತೆಯ ಆಂದೋಲನವನ್ನು ಮೊದಲ ಭಾರಿಗೆ ಪ್ರಯೋಗಿಸಿದರು. ೧೯೦೬ರಲ್ಲಿ ಜುಲು ಸಮರದಲ್ಲಿ ಮಹತ್ವದ ಪಾತ್ರವನ್ನೂ ವಹಿಸಿದರು.
೧೯೨೧ರಲ್ಲಿ ಭಾರತದ ಸ್ವತಂತ್ರ್ಯ ಚಳುವಳಿಯ ನೇತೃತ್ವ ವಹಿಸಿದ ಗಾಂಧೀಜಿಯವರು ಬಡತನ ನಿವಾರಣೆ, ಮಹಿಳಾ ಹಕ್ಕುಗಳ ವಿಸ್ತರಣೆ, ಜತಿ ಮತ್ತು ಜನಾಂಗೀಯ ಸೌಹಾರ್ದ, ಅಸ್ಪೃಶ್ಯತೆಯ ಅಂತ್ಯ, ಆರ್ಥಿಕ ಸ್ವಾವಲಂಬನೆ ಹೀಗೆ ಹಲವಾರು ಆಯಾಮಗಳಲ್ಲಿ ರಾಷ್ಟ್ರವ್ಯಾಪಿ ಹೋರಾಟದ ನೇತೃತ್ವ ವಹಿಸಿದರು.
ಬ್ರೀಟಿಷರು ಹೇರಿದ್ದ ಉಪ್ಪಿನ ತೆರಿಗೆಯನ್ನು ವಿರೋಧಿಸಲು ಅಸಹಕಾರ ಚಳುವಳಿಯನ್ನು ಹಮ್ಮಿಕೊಂಡು ದಂಡಿ ಉಪ್ಪಿನ ಯಾತ್ರೆ ನಡೆಸಿದರು. ಈ ಎಲ್ಲವುಗಳನ್ನು ಅಹಿಂಸಾ ರೂಪದಲ್ಲಿ ಮಾಡಿ ಇಡೀ ಜಗತ್ತಿಗೆ ಅಹಿಂಸಾ ಮಾರ್ಗವನ್ನು ತೋರಿಸಿಕೊಟ್ಟರು.
ಬ್ರಿಟಿಷರ ವಿರುದ್ದ ಕ್ವಿಟ್ ಇಂಡಿಯಾ ಚಳುವಳಿಯನ್ನು ನಡೆಸಿ ದಕ್ಷಿಣ ಆಪ್ರಿಕಾ ಮತ್ತು ಭಾರತದಲ್ಲಿ ಹಲವು ವರ್ಷಗಳ ಕಾಲ ಕಾರಾಗೃಹ ವಾಸವನ್ನು ಅನುಭವಿಸಿದರು. ನಿರಾಡಂಬರವಾದ ಜೀವನವನ್ನು ನಡೆಸಿದ ಇವರು ಚರಕದ ಮೂಲಕ ತಾವೇ ತೆಗೆದ ನೂಲಿನಿಂದ ನೇಯ್ದ ಸಾಂಪ್ರದಾಯಿಕ ಭಾರತೀಯ ಧೋತಿ ಮತ್ತು ಶಾಲನ್ನು ತೊಡುತ್ತಿದ್ದರು.
ಸರಳ ಸಸ್ಯಾಹಾರವನ್ನು ಸೇವಿಸುತ್ತಿದ್ದ ಅವರು ಸ್ವಶುದ್ಧಿಕರಣ ಮತ್ತು ಸಾಮಾಜಿಕ ಪ್ರತಿಭಟನೆಗಳೆರಡರ ಸಂಕೇತವಾಗಿ ದೀರ್ಘಾವಧಿಯ ಉಪವಾಸಗಳನ್ನು ಕೈಗೊಳ್ಳುತ್ತಿದ್ದರು. ಇವರ ಜನ್ಮ ದಿನಾಚರಣೆಯನ್ನು ಅಂತರಾಷ್ಟ್ರೀಯ ಅಹಿಂಸಾ ದಿನವನ್ನಾಗಿ ವಿಶ್ವಮಟ್ಟದಲ್ಲಿ ಪ್ರತಿ ವರ್ಷ ಆಚರಣೆ ಮಾಡಲಾಗುತ್ತಿದೆ. ಇದರ ಹರಿಕಾರ ನಮ್ಮ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಎಂಬುದು ನಮ್ಮೆಲ್ಲರ ಹೆಮ್ಮೆ.
ಧೈರ್ಯದ ಸಂಕೇತ: ಭಾರತ ದೇಶದ ಇತಿಹಾಸ ಮತ್ತು ರಾಜಕೀಯದಲ್ಲಿ ಅತೀ ಕಡಿಮೆ ಅವಧಿಯಲ್ಲಿ ಹೆಚ್ಚು ಜನಪ್ರಿಯತೆ ಪಡೆದ ಮಹಾನ್ ನಾಯಕನೆಂದರೆ ಅದು ಶಾಸ್ತ್ರೀಜಿಯವರು.
ಬಹುಶಃ ಅವರು ಭಾರತ ಕಂಡ ಅತ್ಯಂತ ದಕ್ಷ ಹಾಗೂ ಪ್ರಾಮಾಣಿಕ ಪ್ರಧಾನಿಯಾಗಿದ್ದರು. ಇವರ ಸ್ವಾಭಿಮಾನ ಮತ್ತು ದೇಶಪ್ರೇಮಕ್ಕೆ ತಲೆದೂಗದವರೇ ಇಲ್ಲ. ಇವರು ಎಂತಹ ಕಠಿಣ ಪರಿಸ್ಥಿತಿಯಲ್ಲೂ ಧೃತಿಗೇಡದೆ ಒಳ್ಳೆಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು. ಆದ್ದರಿಂದ ಇವರನ್ನು ಧೈರ್ಯದ ಸಂಕೇತವೆಂದು ಕರೆಯಬಹುದು. ಇದಕ್ಕೆ ಉತ್ತಮ ಉದಾಹರಣೆಯಂದರೆ ಇವರು ಪ್ರಧಾನಿಯಾದ ಸಂದರ್ಭದಲ್ಲಿ ನಡೆದ ಭಾರತ-ಪಾಕಿಸ್ತಾನ ಯುದ್ಧ.
ಶಾಸ್ತ್ರೀಜಿಯವರು ೧೯೦೪ ಅಕ್ಟೋಬರ ೨ ರಂದು ಉತ್ತರ ಪ್ರದೇಶದ ಮೊಘಲಸಾರಾಯ್ ಎಂಬಲ್ಲಿ ಜನಿಸಿದರು. ೧೯೨೧ರಲ್ಲಿ ಮಹಾತ್ಮ ಗಾಂಧೀಜಿಯವರು ಕರೆ ಕೊಟ್ಟ ಅಸಹಕಾರ ಚಳುವಳಿಯಲ್ಲಿ ಭಾಗವಹಿಸಿದರು. ಒಂಭತ್ತು ವರ್ಷಗಳ ಕಾಲ ಕಾರಾಗೃಹವಾಸ ಅನುಭವಿಸಿದ ಇವರು ಸ್ವತಂತ್ರ್ಯ ಚಳುವಳಿ ಪ್ರಾರಂಭವಾದ ನಂತರ ೧೯೪೬ರ ವರೆಗೂ ಜೈಲುಶಿಕ್ಷೆ ಅನುಭವಿಸಿದರು.
ಭಾರತ ಸರಕಾರದಲ್ಲಿ ಸೇವೆ : ಸ್ವತಂತ್ರನಂತರ ಗೋವಿಂದ ವಲ್ಲಭ ಪಂತ್‌ರವರ ಸರಕಾರದಲ್ಲಿ ಪೋಲಿಸ್ ಖಾತೆಯನ್ನು ವಹಿಸಿಕೊಂಡರು. ೧೯೫೧ರಲ್ಲಿ ಲೋಕಸಭೆಗೆ ಜನರಲ್ ಸೆಕ್ರೆಟರಿಯಾಗಿ ಆಯ್ಕೆಯಾದರು. ಇದರ ಪರ್ಯಾಯವಾಗಿ ರೈಲ್ವೆ ಖಾತೆಯನ್ನು ವಹಿಸಿಕೊಂಡರು. ಅರಿಯಳೂರು ಬಳಿ ನಡೆದ ರೈಲ್ವೆ ದುರಂತದ ತರುವಾಯ ತಮ್ಮ ರೈಲ್ವೆ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು, ಇದು ಇವರ ನೈತಿಕತೆಗೆ ಹಿಡಿದ ಕೈಗನ್ನಡಿಯಾಗಿದೆ. ನಂತರ ಪುನಃ ಕ್ಯಾಬಿನೆಟ್‌ಗೆ ಮರಳಿ ಮೊದಲ ಸಾರಿಗೆ ಮಂತ್ರಿಯಾದರು, ಬಳಿಕ ೧೯೬೧ರಲ್ಲಿ ಗೃಹ ಮಂತ್ರಿಯೂ ಆದರು.
ಪ್ರಧಾನಮಂತ್ರಿಯಾಗಿ ಶಾಸ್ತ್ರೀಜಿ:ನೆಹರು ನಂತರ ೧೯೬೪ ರಲ್ಲಿ ಶಾಸ್ತ್ರೀಜಿಯವರು ಭಾರತದ ಪ್ರಧಾನಿಯಾದರು. ಆಗಿನ ಕಾಲದ ಪ್ರಮುಖ ರಾಜಕೀಯ ಸಮಸ್ಯೆಯೆಂದರೆ ಪಾಕಿಸ್ತಾನದೊಂದಿಗಿನ ಸಂಬಂಧ. ಇವರ ಪ್ರಧಾನಿ ಕಾಲದಲ್ಲಿ ಎರಡನೇ ಭಾರತ-ಪಾಕ್ ಯುದ್ಧ ಪ್ರಾರಂಭವಾಗಿ ಭಾತರದ ಪಡೆ ಲಾಹೋರ ತುಲುಪುತ್ತಲೇ ಶಾಂತಿ ಒಪ್ಪಂದ ಮಾಡಿಕೊಳ್ಳಲಾಯಿತು.
ಅಂದಿನ ರಷ್ಯಾ ಪ್ರಧಾನಿ ಅಲೆಕ್ಸಿ ಕೂಸಗಿನ್ ಮಧ್ಯಸ್ಥಿಕೆಯಲ್ಲಿ ಶಾಸ್ತ್ರೀ ಮತ್ತು ಅಯೂಬ್‌ಖಾನ್ ನಡುವೆ ತಾಸ್ಕೆಂಡ ಒಪ್ಪಂದದ ಮೂಲಕ ಯುದ್ದ ಕೊಣೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಮುಂದೆಂದೂ ಬಲಪ್ರಯೋಗದ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಯತ್ನಿಸುವುದಿಲ್ಲ ಎಂದು ಲಿಖಿತ ಭರವಸೆ ನೀಡಬೇಕೆಂದು ಶಾಸ್ತ್ರೀಜಿಯವರು ಪಟ್ಟು ಹಿಡಿದರು, ಇದಕ್ಕೆ ಅಯೂಬ್‌ಖಾನ್ ಒಪ್ಪದೆ ಹೋದಾಗ ಹಾಗಾದರೆ ಬೇರೆ ಪ್ರಧಾನಿ ಬರುವವರೆಗೂ ನೀವು ಕಾಯಬೇಗುತ್ತದೆ ಎಂದು ಯಾವುದೇ ಅಂಜಿಕೆ ಇಲ್ಲದೇ ಧೈರ್ಯದಿಂದ ಅತೀ ನಿಷ್ಠುರವಾಗಿ ಹೇಳಿದ ಧೀಮಂತ ನಾಯಕ ಇವರು.
ಶಾಸ್ತ್ರೀಜಿ ಅವರು ಭಾರತವನ್ನು ಸ್ವಾಭಿಮಾನಿ ದೇಶವನ್ನಾಗಿ ಮಾಡಲು ಶ್ರಮಿಸಿದ್ದರು. ಇವರು ಪ್ರಧಾನಿಯಾದ ಸಂದಂರ್ಭದಲ್ಲಿ ದೇಶದಲ್ಲಿ ಬರಗಾಲ ಉಂಟಾಗಿ ಆಹಾರವನ್ನು ಆಮದು ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬಂದು ಸಾಲಭಾರ ಅಧಿಕವಾಯಿತು. ಈ ಸಂದರ್ಭದಲ್ಲಿ ಒಂದು ದಿನ ಊಟ ಬಿಟ್ಟರೆ ಎಷ್ಟು ಆಹಾರ ಸಂಗ್ರವಾಗುವುದು ಎಂದು ಲೆಕ್ಕಹಾಕಿ, ಪ್ರತಿ ಸೋಮವಾರ ರಾತ್ರಿ ಊಟವನ್ನು ಬಿಡಲು ಸಾರ್ವಜನಿಕರಲ್ಲಿ ಮನವಿ ಮಾಡಿದರು. ಇಡೀ ದೇಶವೇ ಅವರ ಕರೆಗೆ ಸಾಥ್ ನೀಡಿತು. ಈ ನಿರ್ಣಯವು ಅವರ ಸ್ವಾಭಿಮಾನ ಯಾತ್ರೆಗೆ ಮುಕುಟ ಪ್ರಾಯವಾಗಿದೆ. ಭಾರತ ಕಂಡಂತಹ ಬಲು ಅಪರೂಪದ ವ್ಯಕ್ತಿ ಇವರು, ಜೈ ಜವಾನ್ ಜೈ ಕಿಸಾನ್ ಎಂಬ ಘೋಷಣೆ ಮೊಳಗಿಸಿ, ದೇಶಪ್ರೇಮ, ಸ್ವಾಭಿಮಾನಿ, ನೈತಿಕತೆ, ದೈರ್ಯದ ಸಂಕೇತವಾಗಿ ನಮ್ಮ ಮುಂದೆ ನಿಲ್ಲುವ ವ್ಯಕ್ತಿತ್ವ ಇವರದು.
ಗಾಂಧೀಜಿ ಮತ್ತು ಶಾಸ್ತ್ರೀಜಿ ಯಂತಹ ಹಲವಾರು ಮಹನಿಯರು ಭಾರತೀಯರ ಮನದಲ್ಲಿ ಅಚ್ಚಳಿಯದೆ ಉಳಿದಿzರೆ. ಇಂತಹ ವ್ಯಕ್ತಿ ಹಾಗೂ ವ್ಯಕ್ತಿತ್ವದ ಬಗ್ಗೆ ಮುಂದಿನ ಪೀಳಿಗೆಗೆ eನವನ್ನು ವರ್ಗಾವಣೆ ಮಾಡಬೇಕಾದ ಜವಾಬ್ದಾರಿ ನಮ್ಮ ನಿಮ್ಮೆಲರ ಮೇಲಿದೆ.