ವಿಐಎಸ್‌ಎಲ್ ನಲ್ಲಿ ಗಾಂಧಿ ಜಯಂತಿ ಆಚರಣೆ…

ಭದ್ರಾವತಿ: ವಿಐಎಸ್‌ಎಲ್ ಕಾರ್ಖಾನೆ ವತಿಯಿಂದ ಗಾಂಧಿ ಜಯಂತಿಯನ್ನು ವಿಐಎಸ್‌ಎಲ್ ನ ಭದ್ರಾಅತಿಥಿಗೃಹ, ನ್ಯೂಟೌನ್, ಭದ್ರಾವತಿಯಲ್ಲಿ ಆಚರಿಸಲಾ ಯಿತು.
ಕೆ.ಎಸ್. ಸುರೇಶ್, ಮುಖ್ಯ ಮಹಾಪ್ರಬಂಧಕರು (ಸ್ಥಾವರ) ಮತ್ತು ಪ್ರಭಾರಿ ಕಾರ್ಯಪಾಲಕ ನಿರ್ದೇಶಕರು, ಎಲ್. ಪ್ರವೀಣ್ ಕುಮಾರ್, ಮಹಾಪ್ರಬಂಧಕರು (ಸಿಬ್ಬಂದಿ ಮತ್ತು ಸಾರ್ವಜನಿಕ ಸಂಪರ್ಕ), ಜೆ. ಜಗದೀಶ್, ಅಧ್ಯಕ್ಷರು, ವಿಐಎಸ್‌ಎಲ್ ಕಾರ್ಮಿಕರ ಸಂಘ, ಅಜಯ್ ಸೋಂಕುವರ್, ಪ್ರಧಾನ ಕಾರ್ಯದರ್ಶಿ, ವಿಐಎಸ್‌ಎಲ್ ಅಧಿಕಾರಿಗಳ ಸಂಘ ಮತ್ತು ಶೋಭ ಶಿವಶಂಕರನ್, ಇಸ್ಪಾತ್ ಮಹಿಳಾ ಸಮಾಜದ ಪ್ರತಿನಿಧಿ ಇವರುಗಳು ಜ್ಯೋತಿಯನ್ನು ಬೆಳಗಿಸಿ, ಗಾಂಧಿಜಿ ಭಾವಚಿತ್ರಕ್ಕೆ ಪುಷ್ಫ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಧಾರ್ಮಿಕ ಗ್ರಂಥಗಳಿಂದ ಆಯ್ದ ಭಾಗಗಳ ಪಠಣವನ್ನು ಮಾಡಲಾಯಿತು. ಭಗವದ್ಗೀತೆಯನ್ನು ಕುಮಾರಿ ಅಧಿತ್ರಿ ರಾಘವೇಂದ್ರ, ಬೈಬಲ್ ಅನ್ನು ನೋರಾ ಮೆನೆಜಸ್ ಮತ್ತು ಕುರಾನ್ ಅನ್ನು ಶ್ರೀ ಹಫೀಝ್ -ಉರ್-ರೆಹಮಾನ್ ಪಠಿಸಿದರು. ಉನ್ನಿಕೃಷ್ಣನ್, ಹಿರಿಯ ಪ್ರಬಂಧ ಕರು (ಹಣಕಾಸು) ರಘುಪ ತಿರಾಘವ ಭಜನೆಯನ್ನು ಹಾಡಿ ಎಲ್ಲರೂ ಸಹ ಭಜನೆಯಲ್ಲಿ ಪಾಲ್ಗೊಳ್ಳುವಂತೆ ಮಾಡಿದರು. ಈ ಸಂದರ್ಭದಲ್ಲಿ ಸ್ವಚ್ಛತಾ ಪ್ರತಿe ಯನ್ನು ತೆಗೆದುಕೊಳ್ಳಲಾಯಿತು.
ವಿಐಎಸ್‌ಎಲ್ ಉದ್ಯೋಗಿ ಗಳು, ವಿಐಎಸ್‌ಎಲ್ ಕಾರ್ಮಿಕ ಸಂಘ ಮತ್ತು ಅಧಿಕಾರಿಗಳ ಸಂಘದ ಪದಾಧಿಕಾರಿಗಳು ಮತ್ತು ಕಾರ್ಯ ಕಾರಿ ಸಮಿತಿ ಸದಸ್ಯರುಗಳು, ಗುತ್ತಿಗೆ ಕಾರ್ಮಿಕರು, ಇಸ್ಪಾತ್ ಮಹಿಳಾ ಸಮಾಜದ ಸದಸ್ಯರು ಮತ್ತು ಪತ್ರಿಕಾ ಪ್ರತಿನಿಧಿಗಳು ಕಾರ್‍ಯಕ್ರಮದಲ್ಲಿ ಭಾಗವಹಿಸಿದ್ದರು.
ಎಲ್. ಪ್ರವೀಣ್ ಕುಮಾರ್, ಮಹಾಪ್ರಬಂಧಕರು (ಸಾರ್ವ ಜನಿಕ ಸಂಪರ್ಕ) ಸ್ವಾಗತಿಸಿ, ನಿರೂಪಿಸಿದರು ಮತ್ತು ಕೆ.ಎಸ್. ರಾಘವೇಂದ್ರ, ವಿಐಎಸ್‌ಎಲ್ ಅತಿಥಿಗೃಹದ ಸೂಪರ್‌ವೈಸರ್ ರವರು ವಂದನಾರ್ಪಣೆ ಸಲ್ಲಿಸಿ ದರು. ಕಾರ್ಯಕ್ರಮವನ್ನು ವಿಐಎಸ್‌ಎಲ್ ನ ಸಾರ್ವಜನಿಕ ಸಂಪರ್ಕ ಇಲಾಖೆ ಮತ್ತು ಅತಿಥಿಗೃಹ ಆಯೋಜಿಸಿತ್ತು.