ಭಾರತದ ವಿರುದ್ಧ ನಿಂತು ಜಗತ್ತಿನ ಮುಂದೆ ಬೆತ್ತಲಾದ ಕೆನಡಾ…
ಕಳೆದ ಕೆಲವು ದಿನಗಳ ಹಿಂದೆ ಕೆನಡಾದಲ್ಲಿ ಸಾಲು ಸಾಲು ಖಲಿಸ್ತಾನಿಗಳ ಹತ್ಯೆಯಾಗಿತ್ತು. ಅದೇ ರೀತಿ ಬ್ರಿಟಿಷ್ ಕೊಲಂಬಿಯಾದ ಸರೈಯಲ್ಲಿನ ಗುರುದ್ವಾರದ ಹೊರಗೆ ಜೂನ್ ೧೮ನೇ ತಾರೀಖಿನಂದು ಇಬ್ಬರೂ ಅಪರಿಚಿತ ಬಂದೂಕುಧಾರಿಗಳು ಗುಂಡಿನ ದಾಳಿ ಮಾಡಿ ಪ್ರಸಿದ್ಧ ಸಿಖ್ ನಾಯಕ, ಖಲಿಸ್ತಾನ್ ಪ್ರತ್ಯೇಕವಾದಿ ಮುಖಂಡ ಹರ್ದಿಪ್ ಸಿಂಗ್ ನಿಜ್ಜರ್ ಅನ್ನು ಹತ್ಯೆ ಮಾಡಿದ್ದರು. ಇವನ ಹತ್ಯೆ ಕೆನಡಾದ್ ಖಲಿಸ್ಥಾನಗಳ ಆಕ್ರೋಶಕ್ಕೆ ಕಾರಣವಾಗಿತ್ತು. ನಿಜ್ಜರ್ ಹತ್ಯೆಯ ಹಿಂದೆ ಭಾರತ ಸರ್ಕಾರದ ಕೈವಾಡವಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ಕಳೆದ ಸೋಮವಾರ ಕೆನಡಾದ ಸಂಸತ್ತಿನಲ್ಲಿ ಭಾರತದ ವಿರುದ್ಧ ಗಂಭೀರ ಆರೋಪವನ್ನು ಮಾಡಿದ್ದರು. ಅದರ ಬೆನ್ನಲೇ ಕೆನಡಾದ ಪ್ರಧಾನಿ ಜಸ್ಟಿನ್ ಟ್ರೂಡೊ ಅಲ್ಲಿನ ರಜತಾಂತ್ರಿಕ ಕಚೇರಿಯ ಹಿರಿಯ ಅಧಿಕಾರಿಯೊಬ್ಬರನ್ನು ವಾಪಸ್ ಹೋಗುವಂತೆ ಆದೇಶವನ್ನು ಹೊರಡಿಸಿದ್ದರು ಅಲ್ಲದೆ ಅಮೆರಿಕ ಕೆನಡಾದಲ್ಲಿರುವಂತಹ ಭಾರತೀಯ ರಾಯಭಾರ ಕಟ್ಟಡಗಳ ಮೇಲೆ ದಾಳಿ ಮಾಡಿದೆ. ಮತ್ತು ನಿಜ್ಜರ್ ಹತ್ಯೆಯ ಹಿಂದೆ ಭಾರತೀಯ ಏಜೆನ್ಸಿಗಳ ಕೈವಾಡ ಇದೆ ಎಂಬುದಕ್ಕೆ ಕೆನಡಾ ಸರಿಯಾದ ಸಾಕ್ಷ್ಯ ನೀಡಲು ವಿಫಲವಾಗಿ ಈಗ ಜಗತ್ತಿನ ಮುಂದೆ ಬೆತ್ತಲಾಗಿ ನಿಂತಿದೆ.
ಇನ್ನೂ ಭಾರತ ಕೂಡ ಕೆನಡಾ ಮಾಡುತ್ತಿರುವಂತಹ ಈ ಆರೋಪಗಳಿಗೆ ತೀವ್ರವಾಗಿ ಪ್ರತಿಕ್ರಿಯಿಸಿದ್ದು ಕೆನಡಾ ಪ್ರಧಾನಿಯ ಹೇಳಿಕೆಯನ್ನು ಅಸಂಬದ್ಧ ಮತ್ತು ಪೂರ್ವಗ್ರಹ ಪೀಡಿತ ಎಂದು ಸಾರಾಸಾಗಟಾಗಿ ಅಲ್ಲಗೆಳೆದಿದೆ. ಭಾರತದ ವಿದೇಶಾಂಗ ಇಲಾಖೆ ಇಲ್ಲಿನ ಕೆನಡಾ ರಾಯಭಾರಿಯನ್ನು ಕರೆಸಿಕೊಂಡು ರಾಜತಾಂತ್ರಿಕ ಹಿರಿಯ ಅಧಿಕಾರಿಯೊಬ್ಬರನ್ನು ದೇಶದಿಂದ ಹೊರ ಹಾಕುತ್ತಿರುವ ನಿರ್ಧಾರವನ್ನು ಕೆನಡಾದ ರಾಯಭಾರಿಗೆ ತಿಳಿಸಿದೆ. ಇದರ ಜೊತೆಗೆ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಕೂಡ ಕೆನಡಾದ ಆರೋಪಗಳ ವಿರುದ್ಧ ಭಾರತ ಸರ್ಕಾರವನ್ನು ಬೆಂಬಲಿಸುತ್ತಿದೆ. ಸದ್ಯಕ್ಕೆ ಉಭಯ ದೇಶಗಳ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಏರ್ಪಟ್ಟಿದ್ದು ಪರಸ್ಪರರ ಮೇಲೆ ಆರೋಪಗಳನ್ನು ಹೊರಿಸುವ ಮೂಲಕ ಭಾರತ ಮತ್ತು ಕೆನಡಾದ ಸಂಬಂಧ ಮತ್ತಷ್ಟು ಹದಗೆಟ್ಟಿದೆ.
ಕೆನಡಾದ ಪ್ರಧಾನಿ ಭಾರತದ ಮೇಲೆ ಮಾಡುತ್ತಿರುವ ಆರೋಪಗಳಿಗೆ ನಿಜ ಕಾರಣವೇನು ?
ಮೂರು ತಿಂಗಳ ಹಿಂದೆ ನಡೆದಿದ್ದ ಖಾಲಿಸ್ತಾನ್ ನಾಯಕ ನಿಜ್ಜರ್ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ದೆಹಲಿಯಲ್ಲಿ ನಡೆದ ಜಿ೨೦ ಶೃಂಗಸಭೆಯನ್ನು ಮುಗಿಸಿ ಭಾರತದಿಂದ ವಾಪಸ್ ಹೋದ ಬೆನ್ನೆಲೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ಭಾರತದ ಮೇಲೆ ಗಂಭೀರವಾದ ಆರೋಪವನ್ನು ಮಾಡಿzರೆ. ಆರೋಪಕ್ಕೆ ನಿಜ ಕಾರಣ ಮೊನ್ನೆ ಜಿ೨೦ ಶೃಂಗಸಭೆಯ ಸಮಯದಲ್ಲಿ ಕೆನಡಾದ ಪ್ರಧಾನಿ ಜಸ್ಟಿನ್ ಟ್ರೂಡೊ ಭಾರತಕ್ಕೆ ಭೇಟಿ ನೀಡಿದಾಗ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಜೊತೆಯ ದ್ವಿಪಕ್ಷಿಯ ಮಾತುಕತೆಯ ಸಂದರ್ಭದಲ್ಲಿ ಕೆನಡಾ ಸರ್ಕಾರ ಖಾಲಿಸ್ತಾನಿ ಚಟುವಟಿಕೆಗಳಿಗೆ ಪ್ರೋತ್ಸಾಹ ಕೊಡ್ತಾ ಇದೆ ಅನ್ನೋ ಕಾರಣಕ್ಕೆ ಜಸ್ಟಿನ್ ಟ್ರೂಡೊ ಅವರನ್ನು ಪ್ರಧಾನಿ ಮೋದಿ ತರಾಟೆಗೆ ತೆಗೆದುಕೊಂಡಿದ್ದರು. ಅದಲ್ಲದೆ ಕೆನಡಾಗೆ ಭಾರತ ಗಟ್ಟಿ ಧ್ವನಿಯಲ್ಲಿ ಎಚ್ಚರಿಕೆಯನ್ನು ಕೂಡ ನೀಡಿತ್ತು. ಇನ್ನು ವಾಪಸ್ ಹೋಗುವ ಸಮಯದಲ್ಲಿ ಕೆನಡಾದ ಪ್ರದಾನಿ ಜಸ್ಟಿನ್ ಟ್ರೂಡೊ ಬಂದ ವಿಮಾನ ಕೈ ಕೊಟ್ಟಿದ್ದರಿಂದ ಹೆಚ್ಚುವರಿಯಾಗಿ ಎರಡು ದಿನ ಭಾರತದ ಉಳಿಯಬೇಕಾಗಿ ಬಂತು. ಇತ್ತ ಜಿ೨೦ ಸಭೆಯಲ್ಲಿಯೂ ಕೂಡ ಜಸ್ಟಿನ್ ಟ್ರೂಡೊ ಭಾಗವಹಿಸುವಿಕೆ ಅಷ್ಟಾಗಿ ಎದ್ದು ಕಾಣುತ್ತಿರಲಿಲ್ಲ. ಆತ ಮದುಮಗನಂತೆ ವಿಧವಿಧದ ಬಟ್ಟೆ ಹಾಕಿಕೊಂಡು ಮೆರವಣಿಗೆ ಮಾಡಿಸಿಕೊಳ್ಳುವುದರಲ್ಲಿ ತೋರಿಸಿದ ಆಸಕ್ತಿ ಜಿ೨೦ಯ ಮಹತ್ವದ ಸಭೆಗಳಲ್ಲಿ ತೋರಿಸಿರಲಿಲ್ಲ. ಅತ್ತ ಜಿ೨೦ ಸಭೆಗೆ ಗೈರಾಗಿ ಚೀನಾದ ಅಧ್ಯಕ್ಷರು ನಷ್ಟಕ್ಕಿಡಾದರೆ ಇತ್ತ ಜಿ೨೦ ಸಭೆಗಾಗಿ ಭಾರತಕ್ಕೆ ಬಂದರೂ ಕೂಡ ಎಲ್ಲಿಯೂ ಗಮನ ಸೆಳೆಯದೆ ವಿಶ್ವದ ಪಶ್ಚಿಮ ಮಾಧ್ಯಮಗಳ ಮತ್ತು ಕೆನಡಾದ ಪ್ರತಿಪಕ್ಷಗಳ ವಿಪರೀತ ಪ್ರಮಾಣದ ಟೀಕೆಗಳಿಗೆ ಗುರಿಯಾದರು. ಅಷ್ಟೇ ಅಲ್ಲದೆ ಟ್ರೂಡೊ ಒಬ್ಬ ಅಸಮರ್ಥ ನಾಯಕ ಎಂದು ಅವನ ರಾಜೀನಾಮೆಗೆ ಪಟ್ಟು ಹಿಡಿದು ಕುಳಿತಿದ್ದವು. ಇದೇ ಕಾರಣಕ್ಕೆ ಕೆನಡಾದ ಪ್ರಧಾನಿ ಜಸ್ಟಿನ್ ಟ್ರೂಡೊ ಭಾರತದ ಮೇಲೆ ಪ್ರತಿಕಾರಕ್ಕೆ ಮುಂದಾಗಿರುವುದು ನಿಜಂಶ ಆಗಿದೆ.
ಯಾರು ಈ ಹರ್ದಿಪ್ ಸಿಂಗ್ ನಿಜ್ಜರ್ ? ಭಾರತಕ್ಕೂ ಇವನಿಗೂ ಏನು ಸಂಬಂಧ ?
ಉಗ್ರಗಾಮಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಕುಖ್ಯಾತಿ ಗಳಿಸಿದ ಹರ್ದೀಪ್ ಸಿಂಗ್ ನಿಜ್ಜರ್ ಪಂಜಬ್‌ನ ಜಲಂಧರ್‌ನ ಭರ್ ಸಿಂಗ್ ಪುರ ಗ್ರಾಮದಲ್ಲಿ ಹುಟ್ಟಿ ಬೆಳೆದು ೧೯೯೭ ರಲ್ಲಿ ಕೆನಡಾಕ್ಕೆ ವಲಸೆ ಬರುತ್ತಾನೆ, ಅಲ್ಲಿ ಅವನು ಪ್ಲಂಬರ್ ಆಗಿ ವೃತ್ತಿಜೀವನವನ್ನು ಪ್ರಾರಂಭಿಸುತ್ತಾನೆ ನಂತರ ಅಲ್ಲಿಗಯೇ ಮದುವೆಯಾಗಿ ಸಂಸಾರ ನಡೆಸುತ್ತಾನೆ ಹಾಗು ಇವನಿಗೆ ಇಬ್ಬರು ಗಂಡು ಮಕ್ಕಳು ಕೂಡ ಇzರೆ. ನಂತರದ ದಿನಗಳಲ್ಲಿ ಕೆನಡಾದಲ್ಲಿ ನೆಲೆಸಿದ ನಂತರ ಖಲಿಸ್ತಾನ್ ಉಗ್ರಗಾಮಿತ್ವದೊಂದಿಗೆ ಆಳವಾಗಿ ಸಿಕ್ಕಿಹಾಕಿಕೊಂಡಿದ್ದರಿಂದ ನಿಜ್ಜರ್‌ನ ಜೀವನ ಕರಾಳ ತಿರುವು ಪಡೆದುಕೊಂಡಿತು. ಖಲಿಸ್ತಾನ್ ಟೈಗರ್ ಫೋರ್ಸ್ (ಕೆಟಿಎಫ್) ನಲ್ಲಿ ಟ ಮಹತ್ವದ ಪಾತ್ರವನ್ನು ವಹಿಸುತ್ತಾನೆ. ನಂತರ ನಿಜರ್ ಕಾನೂನುಬಾಹಿರ ಪ್ರತ್ಯೇಕತಾವಾದಿ ಗುಂಪು ಸಿಖ್ಸ್ ಫಾರ್ ಜಸ್ಟಿಸ್ (Sಈಎ) ನೊಂದಿಗೆ ಸಹ ಸಂಬಂಧ ಹೊಂದಿ ಭಾರತದ ವಿರುದ್ಧ ಸಂಚುಗಳನ್ನು ರೂಪಿಸುತ್ತಾನೆ ನಂತರ ೨೦೨೦ ರಲ್ಲಿ ಭಾರತ ಸರ್ಕಾರವು ನಿಜ್ಜರ್ ನನ್ನು ಭಯೋತ್ಪಾದಕ ಎಂದು ಹೆಸರಿಸಲು ಕಾರಣವಾಯಿತು. ನಿಜ್ಜರ್ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಆತನ ಕುಖ್ಯಾತಿಗೆ ಕಾರಣವಾಯಿತು. ೨೦೦೭ ರಲ್ಲಿ ಪಂಜಬ್‌ನ ಲುಧಿಯಾನದಲ್ಲಿ ಆರು ಜನರ ಸಾವಿಗೆ ಕಾರಣನಾದ ಮತ್ತು ಸುಮಾರು ೪೦ ವ್ಯಕ್ತಿಗಳು ಗಾಯಗೊಂಡಿದ್ದ ಸ್ಫೋಟಕ್ಕೆ ಸಂಬಂಧಿಸಿದ ಪ್ರಕರಣದಲ್ಲೂ ಈತನು ಭಾರತಕ್ಕೆ ಬೇಕಾಗಿರುತ್ತಾನೆ. ೨೦೦೯ ರಲ್ಲಿ ಪಟಿಯಾಲಾದಲ್ಲಿ ನಡೆದ ರಾಷ್ಟ್ರೀಯ ಸಿಖ್ ಸಂಗತ್ ಅಧ್ಯಕ್ಷ ರುಲ್ದಾ ಸಿಂಗ್ ಅವರ ಹತ್ಯೆಯಲ್ಲಿ ಕೂಡ ಇವನು ಭಾಗಿಯಾಗಿದ್ದನು. ಪಂಜಬ್‌ನ ಜಲಂಧರ್‌ನಲ್ಲಿ ನಡೆದ ಹಿಂದೂ ಪುರೋಹಿತರ ಹತ್ಯೆಯಲ್ಲಿ ಕೂಡ ಈತ ಭಾಗಿಯಾಗಿರುವ ಶಂಕೆಯ ಹಿನ್ನೆಲೆಯಲ್ಲಿ ಭಾರತಕ್ಕೆ ಬೇಕಾಗಿzನೆ ಎಂದು ಭಾರತ ಸರ್ಕಾರ ಎಷ್ಟು ಸಲ ಕೇಳಿದ್ದರು ಭಾರತಕ್ಕೆ ಹಸ್ತಾಂತರಿಸದೆ ಕೆನಡಾ ಖಾಲಿಸ್ತಾನಿ ಉಗ್ರರನ್ನು ಪೋಷಿಸಿಕೊಂಡು ಬಂದಿದೆ.
ಭಾರತದ ಮೇಲಿನ ಆರೋಪಗಳಿಗೆ ಕೆನಡಾದ ವಿರೋಧ
ಭಾರತದ ವಿಚಾರದಲ್ಲಿ ಕೆನಡಾದ ಪ್ರಧಾನಿ ಜಸ್ಟಿನ್ ಟ್ರೂಡೊ ವಿರುದ್ಧವೇ ಅಲ್ಲಿನ ಮಾಧ್ಯಮಗಳು ಮತ್ತು ಪ್ರತಿಪಕ್ಷಗಳು ವಿರೋಧವನ್ನು ವ್ಯಕ್ತಪಡಿಸುತ್ತಿವೆ. ಬೆಲೆ ಏರಿಕೆ, ಮನೆಯ ಸಾಲದ ಬಡ್ಡಿ ಹೆಚ್ಚಳದಿಂದ ಬಸವಳಿದಿರುವ ಕೆನಡಿಯನ್ನರಿಗೆ ಭಾರತದೊಂದಿಗೆ ಪ್ಯಾಪಾರದ ಸಂಬಂಧ ಅತ್ಯಗತ್ಯ ವಾಗಿದೆ . ಟ್ರುಡೊ ಸರಕಾರಕ್ಕೆ ಬೆಂಬಲ ನೀಡಿರುವ ಎನ್‌ಡಿಪಿ ನಾಯಕ ಜಗಮೀತ್ ಸಿಂಗ್, ಖಲಿಸ್ತಾನಿ ಅನುಯಾಯಿ. ಇತ್ತೀಚಿನ ಸರ್ವೆಗಳ ಪ್ರಕಾರ, ಟ್ರುಡೊ ಮುಂದಿನ ಚುನಾವಣೆಯಲ್ಲಿಸೋಲುವುದು ಖಚಿತ ಎಂಬ ಸಮೀಕ್ಷೆಗಳು ಹೊರಬೀಳುತ್ತಿವೆ. ಮೈತ್ರಿಪಕ್ಷಗಳನ್ನು, ಮತದಾರರನ್ನು ಓಲೈಸಿಕೊಳ್ಳಲು, ಜಿ೨೦ ಶೃಂಗದ ವೇಳೆ ಭಾರತದಲ್ಲಿಆದ ಅವಮಾನ ಮುಚ್ಚಿಹಾಕಲು ಟ್ರುಡೊ ಯತ್ನಿಸುತ್ತಿzರೆ ಎಂಬ ಆರೋಪಗಳಿವೆ. ಟ್ರುಡೊ ಸರಕಾರ ಬಂದಾಗಿನಿಂದ ಭಾರತದಲ್ಲಿಬಾಂಬ್ ಸ್ಫೋಟ ನಡೆಸಿದ ಆರೋಪ ಹೊತ್ತ ಆತಂಕವಾದಿಗಳಿಗೂ ಪೌರತ್ವ ನೀಡುತ್ತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಭಾರತಕ್ಕೆ ಹೆಚ್ಚಿನ ಪೊಟ್ಯಾಷ್ ಬರುವುದು ಕೆನಡಾದ ಸಸ್ಕಾಚುವನ್ ಪ್ರಾಂತ್ಯದಿಂದ. ಸಿಟ್ಟಿಗೆದ್ದಿರುವ ಅಲ್ಲಿನ ಸರಕಾರ, ಭಾರತದ ಜೊತೆಗಿನ ಪ್ಯಾಪಾರ ಸಂಬಂಧಕ್ಕೆ ಟ್ರುಡೊ ಅನಗತ್ಯ ವಾಗಿ ಅಡ್ಡಗಾಲು ಹಾಕುತ್ತಿzರೆ ಎಂದು ಆರೋಪಿಸಿದೆ. ೧೯೮೨ರಲ್ಲಿಇಂದಿರಾಗಾಂಧಿಯವರು ಖಲಿಸ್ತಾನಿ ಆತಂಕಿ ತಲ್ವಿಂದರ್ ಪಾರ್ಮರ್‌ನನ್ನು ಭಾರತಕ್ಕೆ ಹಸ್ತಾಂತರಿಸಲು ಕೋರಿzಗ ಇದೇ ಜಸ್ಟಿನ್ ಟ್ರುಡೊ ತಂದೆ ಪಿಯರ್ ಎಲಿಯಟ್ ಟ್ರುಡೊ ಅಂದು ಪ್ರಧಾನಿ. ಪಾರ್ಮರ್‌ನನ್ನು ಕೆನಡಾದ ಇಟ್ಟುಕೊಂಡ ಪರಿಣಾಮ ಆತ ನಡೆಸಿದ ವಿಮಾನ ಬಾಂಬ್ ಸ್ಫೋಟದಿಂದಾಗಿ ೩೨೯ ಜನರು ಅಸುನೀಗಿದ್ದರು. ಕೆನಡಾವು ಭಾರತದಿಂದ ಔಷಧ, ಕಬ್ಬಿಣ, ಪರಮಾಣು ಒಲೆ ಆಮದು ಮಾಡಿಕೊಳ್ಳುತ್ತದೆ. ಇಲ್ಲಿನ ಶೇ.೪೭ ವಿದೇಶಿ ವಿದ್ಯಾರ್ಥಿಗಳು ಭಾರತೀಯರಾಗಿದ್ದು, ಇವರು ೨೦ ಬಿಲಿಯನ್ ಡಾಲರ್ ಅಂದರೆ ಭಾರತದ ರಪ್ತು ಆಮದಿಗಿಂತ ದುಪ್ಪಟ್ಟು ಹಣವನ್ನು ಕೆನಡಾಕ್ಕೆ ತರುತ್ತಾರೆ. ಭಾರತ ಇವನ್ನು ನಿರ್ಬಂಧಿಸಿದರೆ ಕೆನಡಾ ಖಂಡಿತಾ ಪಾಠ ಕಲಿಯುತ್ತದೆ
ಒಂದು ವೇಳೆ ಯುದ್ಧ ಸಂಭವಿಸಿದರೆ??
ಹೊಸದಿಲ್ಲಿಯಿಂದ ಕೆನಡಾದ ರಾಜಧಾನಿ ಒಟ್ಟಾವ ೧೧,೩೧೯ ಕಿ.ಮೀ. ದೂರದಲ್ಲಿದೆ. ಇಷ್ಟು ಸುದೀರ್ಘ ಅಂತರವಿರುವ ರಾಷ್ಟ್ರಗಳು ಯುದ್ಧಕ್ಕೆ ಮುಂದಾಗುವ ಸಾಧ್ಯತೆ ತೀರಾ ಕಡಿಮೆಯಾದರೂ, ಇದು ಉಗ್ರಗಾಮಿಗಳಿಗೆ ಸಂಬಂಧಿಸಿದ ವಿಚಾರವೂ ಇರುವುದರಿಂದ ಮುಂದಿನ ಹೆಜ್ಜೆಗಳು ಏನೆಂದು ಊಹಿಸಲಾಗದು. ನ್ಯಾಟೋ ಪಡೆಯ ಬೆಂಬಲ ಹೊಂದಿರುವ ಕೆನಡಾ ತನ್ನ ಸ್ವಂತ ಸೇನೆಯನ್ನು ಅಷ್ಟಾಗಿ ಸದೃಢಗೊಳಿಸಿಲ್ಲ. ಜಗತಿಕ ಫೈರ್ ಪವರ್ ಸೂಚ್ಯಂಕದ ಪ್ರಕಾರ, ಭಾರತದ ಸೇನೆ ಜಗತ್ತಿನ ೪ನೇ ರಾರಯಂಕ್ ಹೊಂದಿದ್ದರೆ, ಕೆನಡಾದ ಪಡೆ ೨೦ನೇ ಸ್ಥಾನದಲ್ಲಿದೆ. ಕೆನಡಾದ ಒಟ್ಟು ಸೈನಿಕರ ಸಂಖ್ಯೆ ಕೇವಲ ೯೫ ಸಾವಿರ. ಭಾರತಕ್ಕೆ ಬರೋಬ್ಬರಿ ೧೪ ಲಕ್ಷ ಯೋಧಬಲವಿದೆ. ಕೆನಡಾ ಸೈನ್ಯದಲ್ಲಿಕೇವಲ ೨೩ ಸಾವಿರ ಸೈನಿಕರು ಮಾತ್ರವೇ ಪೂರ್ಣಾವಧಿ. ಮಿಕ್ಕವರು ಅಗತ್ಯಕ್ಕೆ ತಕ್ಕಂತೆ ಕೆಲಸ ಮಾಡುವ ಅರೆಕಾಲಿಕ ಉದ್ಯೋಗಿಗಳಷ್ಟೇ. ಅಲ್ಲಿನ ಸೇನಾ ನೇಮಕಾತಿಗೆ ಅಭ್ಯರ್ಥಿಗಳೇ ಸಿಗುವುದಿಲ್ಲ. ಭಾರತ ಸುಧಾರಿತ ಪರಮಾಣು ಶಸ್ತ್ರಾಸ್ತ್ರ ಹೊಂದಿದ್ದರೆ, ಕೆನಡಾ ಬಳಿ ಯಾವುದೇ ಪರಮಾಣು ಶಸ್ತ್ರಾಸ್ತ್ರಗಳಿಲ್ಲ.
ಭಾರತಕ್ಕೆ ಹಲವು ಯುದ್ಧಗಳನ್ನು ಗೆದ್ದ ಅನುಭವವಿದ್ದರೆ, ಕೆನಡಾ ವಿಶ್ವಯುದ್ಧಗಳಲ್ಲಿಸೈಡ್ ಆ?ಯಕ್ಟರ್‌ನಂತೆ ಪಾತ್ರ ನಿರ್ವಹಿಸಿದೆ. ೮೦ ವರ್ಷಗಳಿಂದ ಅಲ್ಲಿನ ಸೇನೆ ಯುದ್ಧದ ಅನುಭವವನ್ನೇ ಕಂಡಿಲ್ಲ.
ಕೆನಡಾದ ಸಾಕ್ಷಿಯತ್ತ ಜಗತ್ತಿನ ಚಿತ್ತ
ಕೆನಡಾ ನಿಜ್ಜರ್‌ಹತ್ಯೆಯಲ್ಲಿ ಭಾರತ ಸರ್ಕಾರದ ಪಾತ್ರವಿದೆ ಎಂದು ಆರೋಪ ಹೊರಿಸಿದ್ದರಿ ಂದ, ಜಗತ್ತು ಈಗ ಕೆನಡಾ ಒದಗಿಸಲಿರುವ ಸಾಕ್ಷಿಯತ್ತ ದೃಷ್ಟಿ ನೆಟ್ಟಿದೆ. ಒಂದು ವೇಳೆ ಏನಾ ದರೂ ಮಹತ್ವದ ಪುರಾವೆಗಳನ್ನೇ ನಾದರೂ ಕೆನಡಾ ತೆರೆದಿಡಲು ಸಾಧ್ಯವಾದರೆ, ಇದರಿಂದ ಭಾರತ – ಕೆನಡಾ ನಡುವಿನ ಉದ್ವಿಗ್ನತೆ ಧ ಇನ್ನಷ್ಟು ಹೆಚ್ಚಾಗಲಿದೆ. ಅದರೊಡನೆ, ಪಾಶ್ಚಾತ್ಯ ಸರ್ಕಾರ ಗಳೊಡನೆ, ಅದರಲ್ಲೂ ಅಮೆರಿಕಾದೊಡನೆ ಭಾರತದ ಸಂಬಂಧ ಹದಗೆಡುವ ಅಪಾಯಗಳಿವೆ. ಅಮೆರಿಕಾ ಚೀನಾವನ್ನು ಹಿಮ್ಮೆಟ್ಟಿಸುವ ಸಲುವಾಗಿ ಭಾರತದೊಡನೆ ಗಟ್ಟಿಯಾದ ಮೈತ್ರಿಕೂಟವನ್ನು ಹೊಂದಲು ಪ್ರಯತ್ನಿಸುತ್ತಿದೆ. ಆದರೆ, ಅದು ಆಗಾಗ ಮಾನವ ಹಕ್ಕುಗಳು ಮತ್ತು ಮಾಧ್ಯಮ ಸ್ವಾತಂತ್ರ್ಯದ ಕುರಿತೂ ತನ್ನ ಕಳವಳವನ್ನು ಹೊರಹಾಕುತ್ತಾ ಬಂದಿದೆ.