ಸಮಾಜಮುಖಿ ಕಾರ್ಯಗಳಿಂದ ಮಾತ್ರ ಯಾವುದೇ ವ್ಯಕ್ತಿ ಮರಣಾನಂತರವೂ ಶಾಶ್ವತವಾಗಿರಲು ಸಾಧ್ಯ…
ಶಿಕಾರಿಪುರ: ಸಮಾಜಮುಖಿ ಕಾರ್ಯದಿಂದ ಮಾತ್ರ ವ್ಯಕ್ತಿ ಮರಣಾನಂತರದಲ್ಲಿಯೂ ಶಾಶ್ವತ ವಾಗಿರಲು ಸಾಧ್ಯ. ಈ ದಿಸೆಯಲ್ಲಿ ದಿ.ಶೇಖರಪ್ಪನವರ ಬದುಕು ಸಂಪೂರ್ಣ ಸಮಾಜಕ್ಕೆ ಅರ್ಪಿತವಾ ಗಿದ್ದು ಅವರ ಕೊಡುಗೆ ಜೀವಿತಾವಧಿ ನಂತರವೂ ಸಮುದಾಯ ಮರೆಯಲು ಸಾಧ್ಯವಿಲ್ಲ ಎಂದು ರೋಟರಿ ಕ್ಲಬ್ ಶಿಕಾರಿಪುರ ಕದಂಬ ನಿಯೋಜಿತ ಅಧ್ಯಕ್ಷ ಶಿವಪ್ರಕಾಶ್ ತಿಳಿಸಿದರು.
ಪಟ್ಟಣದ ಚನ್ನಕೇಶವ ನಗರ ದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರೋಟರಿ ಕ್ಲಬ್ ಶಿಕಾರಿಪುರ ಕದಂಬ, ಪುರಸಭೆ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಸಾರ್ವಜನಿಕ ಆಸ್ಪತ್ರೆ, ನಂಜಪ್ಪ ಆಸ್ಪತ್ರೆ ಮತ್ತು ನಂಜಪ್ಪ ಲೈಫ್ ಕೇರ್ ವತಿಯಿಂದ ಭದ್ರ ಕಾಡಾ ಮಾಜಿ ಅಧ್ಯಕ್ಷ, ತಾಲೂಕು ಸಾಧು ವೀರಶೈವ ಸಮಾಜದ ಮಾಜಿ ಅಧ್ಯಕ್ಷ ದಿ.ಕೆ ಶೇಖರಪ್ಪ ನವರ ಸ್ಮರಣಾರ್ಥ ಅಧಿಕ ರಕ್ತದೊತ್ತಡ, ಮಧುಮೇಹ, ನೇತ್ರ ತಪಾಸಣೆ, ಶ್ವಾಸಕೋಶ, ಮೂತ್ರಪಿಂಡ, ಕ್ಯಾನ್ಸರ್ ಸಂಬಂಧಿತ ಕಾಯಿಲೆಗಳಿಗೆ ತಜ್ಞ ವೈದ್ಯರಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ದಿ.ಶೇಖರಪ್ಪನವರು ತಮ್ಮ ವೈಯುಕ್ತಿಕ ಬದುಕನ್ನು ಸಮಾಜಕ್ಕಾಗಿ ಸಮರ್ಪಿಸಿಕೊಂಡಿದ್ದು ಸಮಾಜ ದಲ್ಲಿನ ಅಶಕ್ತರು, ಅಸಹಾಯಕರ ಸಮಸ್ಯೆ ತೊಂದರೆಗೆ ಸ್ಪಂದಿಸುತ್ತಿದ್ದ ರೀತಿ ಅದ್ಬುತವಾಗಿತ್ತು. ಸಮಾಜದಲ್ಲಿನ ಎಲ್ಲ ವರ್ಗದ ಜನತೆಗೆ ಆರ್ಥಿಕ ಶಕ್ತಿಯನ್ನು ಕಲ್ಪಿಸಿಕೊಡಲು ಸಹಕಾರಿ ಸಂಘದ ಮೂಲಕ ಹೆಚ್ಚಿನ ರೀತಿಯಲ್ಲಿ ಶ್ರಮಿಸುತ್ತಿದ್ದರು. ಜತಿ ವರ್ಗ ತಾರತಮ್ಯವಿಲ್ಲದೆ ಸರ್ವ ಸಮುದಾಯದ ಹಿತದಲ್ಲಿ ಸಂತಸ ಪಡುತ್ತಿದ್ದ ಅವರು ಮರಣಾ ನಂತರದಲ್ಲಿಯೂ ಶಾಶ್ವತವಾಗಿರಲು ಸಾಧ್ಯ ಎಂಬುದನ್ನು ಸಾಬೀತು ಪಡಿಸಿzರೆ ಎಂದ ಅವರು, ಪುತ್ರ ರವಿ ಅವರ ಮಾರ್ಗದರ್ಶನ ದಲ್ಲಿಯೇ ಪ್ರತಿ ವರ್ಷ ಸಮಾಜಮುಖಿ ಕಾರ್ಯವನ್ನು ಆಯೋಜಿಸುವ ಮೂಲಕ ಆದರ್ಶ ವ್ಯಕ್ತಿತ್ವಕ್ಕೆ ಮಾದರಿಯಾಗಿzರೆ ಎಂದು ಪ್ರಶಂಸಿಸಿದರು.
ತಾಲೂಕು ವೈದ್ಯಾಧಿಕಾರಿ ಡಾ. ನವೀದ್ ಖಾನ್ ಅವರು ಮಾತನಾಡಿ, ಜನತೆ ಇತ್ತೀಚಿನ ವರ್ಷದಲ್ಲಿ ಹೆಚ್ಚು ಹೆಚ್ಚು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು ಆಧುನಿಕ ಜೀವನಪದ್ದತಿ ಒತ್ತಡದ ಬದುಕು ಸಾಂಕ್ರಾಮಿಕ ರೋಗಕ್ಕಿಂತ ಅಸಾಂಕ್ರಾಮಿಕ ರೋಗ ಹೆಚ್ಚಳವಾ ಗಲು ಕಾರಣವಾಗಿದೆ. ಈ ದಿಸೆಯಲ್ಲಿ ಅಸಾಂಕ್ರಾಮಿಕ ಬಿ.ಪಿ, ಮಧುಮೇಹ,ಕ್ಯಾನ್ಸರ್ ಮತ್ತಿತರ ಕಾಯಿಲೆಗಳನ್ನು ನಿರ್ಲಕ್ಷಿಸದೆ ಸಕಾಲಕ್ಕೆ ತಪಾಸಣೆ ಮೂಲಕ ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚಿ ಶಾಶ್ವತವಾಗಿ ಗುಣಪಡಿಸಿ ಕೊಳ್ಳುವಂತೆ ತಿಳಿಸಿ ದಿ.ಶೇಖರಪ್ಪನವರ eಪಕಾರ್ಥ ವಾಗಿ ಉಚಿತ ಆರೋಗ್ಯ ತಪಾಸಣೆ ಮೂಲಕ ಪುತ್ರ ರವಿ ಸಮುದಾಯ ಹಿತ ಕಾಪಾಡುವ ಅರ್ಥಪೂರ್ಣ ಕಾರ್ಯದಲ್ಲಿ ತೊಡಗಿಸಿ ಕೊಂಡಿ zರೆ ಎಂದು ಶ್ಲಾಘಿಸಿದರು.
ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಯ ತಜ್ಞ ವೈದ್ಯ ಡಾ| ಸುಧಾಕರ್ ಮಾತನಾಡಿ, ಮಹಿಳೆಯರು ಇತ್ತೀಚಿನ ವರ್ಷ ದಲ್ಲಿ ಗರ್ಭ ಕೋಶ, ಸ್ತನ ಕ್ಯಾನ್ಸರ್ನಿಂದ ಹೆಚ್ಚು ಬಳಲುತ್ತಿದ್ದು ಸಕಾಲದಲ್ಲಿ ತಪಾಸಣೆ ಮೂಲಕ ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡುವಂತೆ ತಿಳಿಸಿ ಹೃದಯ ಸಂಬಂಧಿ ಕಾಯಿಲೆಗಳು ಒತ್ತಡದ ಬದುಕಿನಿಂದ ಹೆಚ್ಚಾ ಗುತ್ತಿದ್ದು ಜೀವನಶೈಲಿ ಬದಲಾ ಯಿಸಿ ಕೊಳ್ಳುವಂತೆ ಸಲಹೆ ನೀಡಿ ದರು.
ಈ ಸಂದರ್ಬದಲ್ಲಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಶಿವಾನಂದ್, ತಜ್ಞ ವೈದ್ಯ ಡಾ.ಅನಿಲ್ ಕುಮಾರ್, ಡಾ.ವಿನುತ, ನಂಜಪ್ಪ ಲೈಫ್ ಕೇರ್ನ ಡಾ.ನಮ್ರತಾ ಉಡುಪ, ಡಾ.ಹರೀಶ್ ಆರೋಗ್ಯ ಇಲಾಖೆ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಸುರೇಶ್, ಪಿರ್ರ್ಖಾನ್, ಆಪ್ತ ಸಮಾ ಲೋಚಕ ಚಂದ್ರಶೇಖರ್, ಹರೀಶ್ ರೋಟರಿ ಶಿಕಾರಿಪುರ ಕದಂಬ ನಿಕಟಪೂರ್ವ ಅಧ್ಯಕ್ಷ ರಘು ಎಂ.ಆರ್, ಶಿವಮೂರ್ತಿ, ಕಾನೂರು ನಿರಂಜನ, ಗಿರೀಶ್ ಕಲ್ಯಾಣಿ, ಸಿದ್ದಲಿಂಗಪ್ಪ( ನ್ಯಾಮತಿ), ಪ್ರಾಚಾರ್ಯ ಡಾ. ವೀರೇಂದ್ರ, ವೀರೇಂದ್ರ ವಾಲಿ, ಸಂತೋಷ್ ಸಕ್ರಿ, ನಾಗರಾಜ್ ಸ್ಕಂದ, ಕು.ಶರಣ್ಯ ಮತ್ತಿತರರು ಹಾಜರಿದ್ದರು.