ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ೧೦ನೇ ಬಾರಿಗೆ ಆರ್ಎಂಎಂ ಅವಿರೋಧ ಆಯ್ಕೆ…
ಶಿವಮೊಗ್ಗ: ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಆರ್ಎಂಎಂ ೧೦ನೆ ಬಾರಿಗೆ ಅವಿರೋಧವಾಗಿ ಆಯ್ಕೆ ಯಾಗಿzರೆ.
ಆರ್.ಎಂ. ಮಂಜುನಾಥ ಗೌಡ ಅವರು ಅಧ್ಯಕ್ಷ ಹುzಗೆ ನಾಮಪತ್ರ ಸಲ್ಲಿಸಿದ್ದರು. ಬೇರೆ ಯಾರೂಕೂಡ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಅವರು ಅಧ್ಯಕ್ಷರಾಗಿzರೆ ಎಂದು ಚುನಾವಣಾಧಿಕಾರಿ ರುದ್ರಪ್ಪ ಅವರು ಘೋಷಣೆ ಮಾಡಿದರು.
ಈ ಸಂದರ್ಭದಲ್ಲಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಆರ್.ಎಂ. ಮಂಜುನಾಥ ಗೌಡರು ನನ್ನ ಮುಂದೆ ಸಾಕಷ್ಟು ಸವಾಲುಗಳಿಗೆ. ೨೫ ವರ್ಷಗಳ ಅನುಭವವೂ ಇದೆ. ಪ್ರಾಮಾಣಿಕವಾಗಿ ಕೆಲಸ ಮಾಡು ತ್ತೇನೆ. ಸ್ತ್ರೀ ಶಕ್ತಿ ಸ್ವಸಹಾಯ ಸಂಘ ಗಳಿಗೆ ಮತ್ತಷ್ಟು ಶಕ್ತಿ ತುಂಬಬೇಕಿದೆ. ಡಿಸಿಸಿ ಬ್ಯಾಂಕ್ ಅಡಿಯಲ್ಲಿ ಸಾವಿರಕ್ಕೂ ಹೆಚ್ಚು ಸಹಕಾರ ಸಂಘಗಳಿವೆ. ಅವುಗಳಿಗೆ ಆರ್ಥಿಕ ನೆರವು ನೀಡಬೇಕಾಗಿದೆ ಎಂದರು.
ಬರಗಾಲ ಕಾಲಿಟ್ಟಿದೆ. ಇಂತಹ ಸಂದರ್ಭದಲ್ಲಿ ರೈತರು ಧೃತಿಗೆಡುವ ಅಗತ್ಯವಿಲ್ಲ. ಹಲವು ಬರಗಾಲಗ ಳನ್ನು ನಾನು ಕಂಡಿದ್ದೇನೆ. ಡಿಸಿಸಿ ಬ್ಯಾಂಕ್ ರೈತರ ಹಿತ ಕಾಪಾಡಲು ಯಾವಾಗಲು ಬದ್ಧವಾಗಿದೆ.ಅವರ ನೆರವಿಗೆ ಖಂಡಿತಾ ಬರುತ್ತದೆ ಎಂದರು.
ಪಿಎಲ್ಡಿ ಬ್ಯಾಂಕ್ ಉಪಾ ಧ್ಯಕ್ಷ ವಿಜಯಕುಮಾರ್ (ಧನಿ), ನಿರ್ದೇಶಕರುಗಳಾದ ಜಗದೀಶ್, ಶ್ರೀಪಾದರಾವ್, ದಿನೇಶ್, ಷಡಾ ಕ್ಷರಿ, ಶಾಸಕ ಬೇಳೂರು ಗೋಪಾಲ ಕೃಷ್ಣ, ಭಾಸ್ಕರ್ ಹಾಗೂ ಆರ್.ಎಂ. ಮಂಜುನಾಥ ಗೌಡರ ಅಭಿಮಾನಿ ಗಳು ಹಾರ, ಶಾಲುಗ ಳೊಂದಿಗೆ ಅವರನ್ನು ಸನ್ಮಾನಿಸಿ ದರು. ಪಟಾಕಿ ಸಿಡಿಸಿ ಸಂಭ್ರಮಿಸಿ ದರು. ಬ್ಯಾಂಕಿನ ೧೪ ನಿರ್ದೇಶ ಕರು, ಇಬ್ಬರು ಸರ್ಕಾರಿ ಅಧಿಕಾರಿ ಗಳು ಮತದಾನ ದಲ್ಲಿ ಪಾಲ್ಗೊಂಡಿದ್ದರು.