ಪರಸ್ಪರ ಕರುಣೆ – ಸಹಾನುಭೂತಿ- ಮಾನವೀಯತೆ ಇಸ್ಲಾಂ ಧರ್ಮದ ಧ್ಯೇಯ…

ಶಿಕಾರಿಪುರ : ಮಾನವ ಧರ್ಮ ಅತ್ಯಂತ ಶ್ರೇಷ್ಟ ಧರ್ಮವಾಗಿದ್ದು, ಪ್ರತಿಯೊಬ್ಬರ ಬಗ್ಗೆ ಕರುಣೆ, ಸಹಾನುಭೂತಿ, ಮಾನವೀಯತೆ ನೈಜ ಇಸ್ಲಾಂ ಧರ್ಮದ ಧ್ಯೇಯ ವಾಗಿದೆ ಎಂದು ಇಲ್ಲಿನ ಅಂಜುಮಾನ್-ಎ-ಇಸ್ಲಾಂ ಅಧ್ಯಕ್ಷ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ.ಮೌಲಾನಾ ಅಮ್ಜದ್ ಹುಸೇನ್ ಹಾಫೀಜ್ ಕರ್ನಾಟಕಿ ತಿಳಿಸಿದರು.
ಪ್ರವಾದಿ ಮಹಮ್ಮದ್ ಪೈಗಂಬರ್‌ರವರ ಜನ್ಮದಿನಾಚರಣೆ ಅಂಗವಾಗಿ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿನ ರೋಗಿ ಗಳಿಗೆ ಹಣ್ಣು ಹಂಪಲು ಬ್ರೆಡ್ ಬಿಸ್ಕತ್ ವಿತರಿಸಿ ಮಾತನಾಡಿದ ಅವರು, ಮನುಷ್ಯ ಭೂಮಿಗೆ ಬಂದಾಗ ಯಾವುದೇ ಧರ್ಮ, ಜಾತಿ ಇಲ್ಲದೆ ಮನುಷ್ಯರಾಗಿ ಬಂದಿದ್ದು, ಈ ದಿಸೆಯಲ್ಲಿ ಪ್ರತಿಯೊಬ್ಬರ ಬಗ್ಗೆ ಕರುಣೆ, ಸಹಾನುಭೂತಿ, ಮಾನವೀಯತೆಯನ್ನು ಬೆಳೆಸಿಕೊಳ್ಳು ವಂತೆ ಇಸ್ಲಾಂ ಧರ್ಮದಲ್ಲಿ ಸ್ಪಷ್ಟ ವಾಗಿ ತಿಳಿಸಿದೆ. ಪ್ರವಾದಿ ಮಹಮದ್ ಪೈಗಂಬರ್ ಅವರು ಭೂಮಿಯಲ್ಲಿ ಜನಿಸಿದ ಪ್ರತಿ ಯೊಬ್ಬರೂ ಸಹಜ ಮನುಷ್ಯ ರಾಗಿದ್ದು ಮಾನವ ಧರ್ಮ ಅತ್ಯಂತ ಶ್ರೇಷ್ಟ ಧರ್ಮ ಎಂದು ಕುರಾನ್ ಮೂಲಕ ಸಂದೇಶವನ್ನು ನೀಡಿzರೆ ಎಂದು ಹೇಳಿದರು.
ವೈದ್ಯರು ಜತಿ ಮತ ಧರ್ಮ ಬೇಧವಿಲ್ಲದೆ ಎಲ್ಲ ರೋಗಿಗಳಿಗೆ ಚಿಕಿತ್ಸೆ ನೀಡುವ ರೀತಿಯಲ್ಲಿ ನಾವು ಅದೇ ದೃಷ್ಟಿಯಲ್ಲಿ ಪ್ರತಿಯೊಬ್ಬರನ್ನು ಸಹೋದರ ಭಾವನೆಯಲ್ಲಿ ಗೌರವ ನೀಡಿದಾಗ ಮಾನವೀಯ ನೆಲೆಗಟ್ಟಿನ ಸಧೃಡ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಸಮಾಜವನ್ನು ಶಿಕ್ಷಣದಿಂದ ಮಾತ್ರ ತಿದ್ದಲು ಸಾಧ್ಯ, ಸಮಾಜದಲ್ಲಿನ ಮೌಡ್ಯ ಧರ್ಮದ ಅಂಧಶ್ರzಯನ್ನು ಹೋಗಲಾಡಿಸಿ ದಲ್ಲಿ ಶಾಂತಿ ನೆಲೆಸಲು ಸಾಧ್ಯ, ವೈeನಿಕ ನೆಲೆಗಟ್ಟಿನಲ್ಲಿ ಸಮಾಜ ಸಂಘಟಿಸಿದಾಗ ಮಾತ್ರ ನಿರುದ್ಯೋಗ ಸಮಸ್ಯೆಯಿಂದ ಹೊರ ಬಂದು ಸಧೃಡ ದೇಶವನ್ನು ಕಟ್ಟಲು ಸಾಧ್ಯ ಆರ್ಥಿಕವಾಗಿ ಸದೃಢವಾಗಲು ಸಾಧ್ಯ ಎಂದರು.
ಕಾರ್ಯದರ್ಶಿ ಮಕ್ಬೂಲ್ ಅಹ್ಮದ್ ಮಾತನಾಡಿ, ಕಳೆದ ಬಾರಿ ನಾವು ರಕ್ತದಾನ ಶಿಬಿರ ಆಯೋಜಿ ಸಿದ್ದು ಈ ಬಾರಿ ಹಣ್ಣು ವಿತರಣೆ ಕಾರ್ಯಕ್ರಮ ಹಮ್ಮಿಕೊಂಡಿ ದ್ದೇವೆ. ಮುಂದಿನ ಬಾರಿ ಆರೋಗ್ಯ ತಪಾಸಣಾ ಶಿಬಿರ ಸಹಿತ ಜನಪರ ಕಾರ್ಯಕ್ರಮ ಹಮ್ಮಿಕೊಂಡು ಅರ್ಥಪೂರ್ಣ ವಾಗಿ ಪ್ರತಿವರ್ಷ ಪ್ರವಾದಿಗಳ ಜನ್ಮದಿನವನ್ನು ಆಚರಿಸಲಾಗು ವುದು ಎಂದರು.
ರಾಜ್ಯ ಇದೀಗ ಬರಗಾಲವನ್ನು ಎದುರಿಸುತ್ತಿದೆ. ಪ್ರವಾದಿಗಳ ಜನ್ಮದಿನವಾದ ಇಂದಿನಿಂದ ಮಳೆ ಸಮೃದ್ಧವಾಗಿ ಬೆಳೆ ಮತ್ತು ಜನರ ಬದುಕು ಸಮೃದ್ಧವಾಗಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದರು.
ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಶಿವಾನಂದ್,ಪಿಎಸ್ಸೈ ಪ್ರಶಾಂತ್ ಕುಮಾರ್, ಅಂಜು ಮಾನ್ ಸಮಿತಿಯ ಉಪಾಧ್ಯಕ್ಷ ಹಬೀಬುಲ್ಲ, ಕರೀಂ ಸಾಬ್, ಖಜಂಚಿ ಅಶ್ರಫ್ ಉ, ಪುರಸಭಾ ಮಾಜಿ ಸದಸ್ಯ ಪಯಾಜ್ ಅಹ್ಮದ್, ಎಚ್.ಕೆ ಫೌಂಡೇಶನ್ ಅಧ್ಯಕ್ಷ ಫಯಾಜ್ ಅಹ್ಮದ್, ಕೆ.ಎಸ್ ಹುಚ್ರಾಯಪ್ಪ ವಿವಿಧ ಮಸೀದಿ ಅಧ್ಯಕ್ಷರು ಸಮಾಜದ ಮುಖಂಡರು ಆಸ್ಪತ್ರೆ ಸಿಬ್ಬಂದಿ ವರ್ಗ ಹಾಜರಿದ್ದರು.