ರಾಷ್ಟ್ರಮಟ್ಟದ ವಿeನ ವಿಚಾರಸಂಕಿರಣಕ್ಕೆ ರಾಮಕೃಷ್ಣ ವಿದ್ಯಾನಿಕೇತನದ ಗೋವರ್ಧನ ಗೌಡ- ಆತ್ಮೀಯ ಅಭಿನಂದನೆ

ಶಿವಮೊಗ್ಗ : ರಾಜ್ಯಮಟ್ಟದ ವಿeನ ವಿಚಾರಗೋಷ್ಠಿಯಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ರಾಷ್ಟ್ರಮಟ್ಟದ ವಿಚಾರ ಸಂಕೀರ್ಣಕ್ಕೆ ಶಿವಮೊಗ್ಗ ಗೋಪಾ ಲಗೌಡ ಬಡಾವಣೆಯ ಶ್ರೀ ರಾಮ ಕೃಷ್ಣ ವಿದ್ಯಾನಿಕೇತನದ ಹತ್ತನೇ ತರಗತಿ ವಿದ್ಯಾರ್ಥಿ ಗೋವರ್ಧನ ಗೌಡ ಆಯ್ಕೆಯಾಗಿದ್ದು ಅವರ ಸಾಧನೆಗೆ ಶಾಲಾ ಆಡಳಿತ ಮಂಡಳಿ ಶಿಕ್ಷಕರು ಅಭಿನಂದಿಸಿzರೆ.
ಗೋವರ್ಧನ್ ಗೌಡ ಅವರು ಜಿಮಟ್ಟದ ವಿeನ ವಿಚಾರ ಗೋಷ್ಠಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದು ಕಳೆದ ಸಪ್ಟೆಂಬರ್ ೨೬ರಂದು ಚಿತ್ರದುರ್ಗದ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ನಡೆದ ರಾಜ್ಯಮಟ್ಟದ ವಿಚಾರಗೋಷ್ಠಿಯಲ್ಲಿ ಪಾಲ್ಗೊ ಳ್ಳುವ ಮೂಲಕ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿzರೆ.
ಸಿರಿಧಾನ್ಯಗಳು ಅದ್ಭುತ ಆಹಾರವೇ ಅಥವಾ ರೂಡಿಗತ ಪಥ್ಯಾಹಾರವೇ ಎಂಬ ವಿಷಯ ವನ್ನು ಹಲವು ಉದಾಹರಣೆಗಳ ಸಹಿತ ಪ್ರಸ್ತುತಪಡಿಸಿದ ಗೋವ ರ್ಧನ್ ಗೌಡ ಅವರು ಶಿವಮೊಗ್ಗದ ಶ್ರೀಕಾಂತ್ ಹಾಗೂ ಸುಮನಾ ದಂಪತಿಗಳ ಪುತ್ರ.
ಗೋವರ್ಧನ್ ಗೌಡ ಅವರ ಸಾಧನೆಗೆ, ರಾಷ್ಟ್ರಮಟ್ಟಕ್ಕೆ ಆಯ್ಕೆ ಯಾಗುವ ಮೂಲಕ ಶಾಲೆಗೆ ಹಾಗೂ ಶಿವಮೊಗ್ಗ ಜಿಗೆ ಕೀರ್ತಿ ತಂದ ಹಿನ್ನೆಲೆಯಲ್ಲಿ ಇಂದು ಅವ ರನ್ನು ಹಾಗೂ ಅವರ ಪೋಷಕ ರನ್ನು ಮತ್ತು ಶಾಲಾ ವಿeನ ಶಿಕ್ಷಕಿ ಕೆ.ಜಿ. ಮಂಜುಳಾ ಅವರನ್ನು ರಾಮ ಕೃಷ್ಣ ಶಾಲಾ ಆಡಳಿತ ಮಂಡಳಿ ಪರವಾಗಿ ಅಧ್ಯಕ್ಷ ಡಾ. ಡಿ.ಆರ್ ನಾಗೇಶ್, ಕಾರ್ಯದರ್ಶಿ ಶೋಭಾ ವೆಂಕಟರಮಣ ಅವರು ನೇತೃತ್ವ ದಲ್ಲಿ ಆತ್ಮೀಯವಾಗಿ ಸನ್ಮಾನಿತು.
ಈ ಸಂದರ್ಭದಲ್ಲಿ ಶಾಲಾ ಮುಖ್ಯಶಿಕ್ಷಕ ತೀರ್ಥೇಶ್ ಹಾಗೂ ಶಿಕ್ಷಕ ವೃಂದ ಉಪಸ್ಥಿತರಿದ್ದರು.