ಶಿಕಾರಿಪುರ: ಶೌರ್ಯ ಜಾಗರಣಾ ರಥಯಾತ್ರೆ

ಶಿಕಾರಿಪುರ: ಸನಾತನ ಧರ್ಮದ ರಕ್ಷಣೆಗಾಗಿ ಶೌರ್ಯ ದಿಂದ ಹೋರಾಡಿ ತ್ಯಾಗ ಬಲಿದಾ ನದ ಮೂಲಕ ಶ್ರಮಿಸಿದ ಧರ್ಮ ರಕ್ಷಕರ ಬಗ್ಗೆ ಇಂದಿನ ಪೀಳಿಗೆಗೆ ಅರಿವು ಉಂಟು ಮಾಡಲು ಶೌರ್‍ಯ ಜಗರಣ ರಥ ಯಾತ್ರೆ ದೇಶಾದ್ಯಂತ ಸಂಚರಿಸುತ್ತಿದೆ ಎಂದು ವಿಹಿಂಪ ಕ್ಷೇತ್ರೀಯ ಸತ್ಸಂಗ ಪ್ರಮುಖ ಮಹಾ ಬಲೇಶ್ವರ್ ರಾವ್ ತಿಳಿಸಿದರು.
ವಿಹಿಂಪ ಭಜರಂಗದಳದ ಕರ್ನಾಟಕ ದಕ್ಷಿಣ ಪ್ರಾಂತ್ಯ ಶೌರ್ಯ ಜಗರಣಾ ರಥಯಾತ್ರೆ ಪಟ್ಟಣದ ಬಸ್ ನಿಲ್ದಾಣ ಬಳಿ ಧಾವಿಸಿದಾಗ ನಡೆದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.
ವಿಹಿಂಪ, ಭಜರಂಗ ದಳ ಹಿಂದೂಗಳನ್ನು ಸ್ವಾಭಿಮಾನಿ ಯಾಗಿಸುವ ಕಾರ್ಯದಲ್ಲಿ ಸಕ್ರೀಯ ವಾಗಿ ತೊಡಗಿಸಿ ಕೊಂಡಿದ್ದು, ಹಿಂದೂ ಧರ್ಮ ತ್ಯಾಗದ ಪರಂಪರೆ ಯನ್ನು ಹೊಂದಿದೆ ಎಂಬುದನ್ನು ಇಂದಿನ ಪೀಳಿಗೆಗೆ ತಿಳಿಸಿಕೊಡಬೇ ಕಾಗಿದೆ ಎಂದ ಅವರು, ಸನಾತನ ಹಿಂದೂ ಧರ್ಮದ ವಿರುದ್ದ ನೂರಾರು ವರ್ಷಗಳಿಂದ ನಿರಂತರ ವಾಗಿ ಪರಕೀಯರು, ಮೊಘಲರು, ಕ್ರೈಸ್ಥರು ದೌರ್ಜನ್ಯ, ಆಕ್ರಮಣ, ದಾಳಿ ನಡೆಸಿದ್ದು ಎಲ್ಲವನ್ನು ಸಹಿಸಿಕೊಂಡ ಹಿಂದೂ ಧರ್ಮ ಹೆಚ್ಚು ಹೆಚ್ಚು ಸದೃಢವಾಗಿದೆ. ಹಿಂದೂ ಧರ್ಮದ್ದು ಸೋಲಿನ ಇತಿಹಾಸವಲ್ಲ. ಪರಾಕ್ರಮದ ಇತಿಹಾಸ ಎನ್ನುವುದನ್ನು ಸಮಾಜಕ್ಕೆ ತೋರಿಸಿಕೊಡುವ ತುರ್ತು ಅಗತ್ಯವಿದೆ. ಅನ್ಯಧರ್ಮೀಯ ರಿಂದ ಹಿಂದೂ ಧರ್ಮದ ವಿರುದ್ದ ಸತತ ಆಕ್ರಮಣವಾಗಿದ್ದು ಜಗತ್ತಿನಲ್ಲಿ ಹಿಂದೂಗಳಿಗಿರುವ ಏಕೈಕ ದೇಶ ಭಾರತ ಮಾತ್ರ ಎಂದು ತಿಳಿಸಿದರು.
ಹಿಂದೂ ಧರ್ಮದ ರಕ್ಷಣೆಗಾಗಿ ಹಲವು ಸಾಧು-ಸಂತರ ತ್ಯಾಗ ಬಲಿದಾನವಿದ್ದು, ಈ ಬಗ್ಗೆ ಇಂದಿನ ಪೀಳಿಗೆಗೆ ಜಾಗೃತಿಯನ್ನು ಮೂಡಿಸ ಬೇಕಾಗಿದೆ ಎಂದ ಅವರು, ಮೊಘಲರ, ಕ್ರೈಸ್ಥರ ದಾಳಿಯನ್ನು ಶೌರ್ಯ ತ್ಯಾಗದ ಮೂಲಕ ಹಲವು ಮಹನೀಯರು ಎದುರಿಸಿದ್ದು ಹಿಂದೂ ಸಮಾಜ ವನ್ನು ಬಡಿದೆ ಬ್ಬಿಸಲು ಇದೀಗ ಶೌರ್‍ಯ ಜಗರಣ ರಥ ಯಾತ್ರೆ ದೇಶಾದ್ಯಂತ ನಡೆಯುತ್ತಿದೆ ಎಂದರು.
ಚಿತ್ರದುರ್ಗದಿಂದ ಶೌರ್ಯ ಜಗರಣಾ ರಥಯಾತ್ರೆ ಆರಂಭ ವಾಗಿದ್ದು, ವಿವಿಧ ಜಿಗಳಲ್ಲಿ ಸಂಚರಿಸಿ ಇತಿಹಾಸ ಪುರುಷರ ಶೌರ್ಯ ಸಾಹಸವನ್ನು ಜನತೆಗೆ ತಿಳಿಸಿಕೊಡಲಿದೆ ಪ್ರತಿ ತಾಲೂಕು ಗಳಲ್ಲಿ ಬಜರಂಗದಳ ಹೆಚ್ಚು ಸದೃಢ ವಾಗಬೇಕು ಎಂದ ಅವರು ವಿಹಿಂಪ ಸ್ಥಾಪನೆಗೊಂಡು ೬೦ ವರ್ಷವಾ ಗಿದ್ದು ಇದರೊಂದಿಗೆ ಅಯೋಧ್ಯೆ ಯಲ್ಲಿ ಭವ್ಯ ಶ್ರೀ ರಾಮಮಂದಿರ ನಿರ್ಮಾಣದ ಅಂತಿಮ ಹಂತ ತಲುಪಿದ ಹಿನ್ನಲೆ ಯಲ್ಲಿ ಶೌರ್ಯ ಜಗರಣಾ ರಥ ಯಾತ್ರೆ ದೇಶಾ ದ್ಯಂತ ಸಂಚರಿಸುತ್ತಿದೆ ಎಂದರು.
ಹೊನ್ನಾಳಿಯಿಂದ ಪಟ್ಟಣಕ್ಕೆ ಧಾವಿಸಿದ ರಥಯಾತ್ರೆಯನ್ನು ಕ್ಷೇತ್ರ ದೇವತೆ ಶ್ರೀ ಹುಚ್ಚುರಾಯಸ್ವಾಮಿ ದೇವಸ್ಥಾನದ ಬಳಿ ಸ್ವಾಗತಿಸಲಾ ಯಿತು. ನಂತರದಲ್ಲಿ ಡೊಳ್ಳು ಕುಣಿತ ಸಹಿತ ವಿವಿಧ ಮೇಳದೊಂದಿಗೆ ಭವ್ಯ ಮೆರವಣಿಗೆಯು ರಥಬೀದಿ ಮೂಲಕ ಬಸ್ ನಿಲ್ದಾಣ ತಲುಪಿತು. ಈ ಸಂದರ್ಭದಲ್ಲಿ ವಿಹಿಂಪ ಬಜರಂಗ ದಳ ದಕ್ಷಿಣ ಪ್ರಾಂತ್ಯ ಸಂಚಾಲಕ ಕೆ.ಆರ್ ಸುನೀಲ್ ಕುಮಾರ್, ಶಿವಮೊಗ್ಗ ವಿಭಾಗ ಸಂಚಾಲಕ ರಾಜೇಶ್ ಗೌಡ, ಜಿ ಮಠ-ಮಂದಿರ ಪ್ರಮುಖ್ ಕಾಳಿಂಗರಾಜ್, ವಿಹಿಂಪ ತಾಲೂಕು ಘಟಕದ ಅಧ್ಯಕ್ಷ ಭವರ್ ಸಿಂಗ್, ಉಪಾಧ್ಯಕ್ಷ ಪ್ರಕಾಶ್ ಜಿನ್ನು ಮುಖಂಡ ಎನ್.ವಿ ಈರೇಶ್, ಗಿರೀಶ್ ಧಾರವಾಡ, ಬಿ.ಪಿ ನಾರಾಯಣರಾವ್, ಎಸ್‌ವಿಕೆ ಮೂರ್ತಿ, ಪ್ರದೀಪ್, ಶರತ್, ಅಂಗಡಿ ರಾಮಣ್ಣ, ಅರ್ಜುನರಾವ್, ಶುಭಾ ರಘು, ನೇತ್ರಾವತಿ, ಗಾಯತ್ರಿದೇವಿ, ಗೀತಾ, ಸಿ.ಬಸವರಾಜ್ ಮತ್ತಿತರರು ಹಾಜರಿದ್ದರು.