ಓದಿನ ಜೊತೆಗೆ ನಾಯಕತ್ವ ಗುಣ ಮೈಗೂಡಿಸಿಕೊಳ್ಳಿ

ದಾವಣಗೆರೆ: ವಿದ್ಯಾರ್ಥಿ – ವಿದ್ಯಾರ್ಥಿನಿಯರು ಓದಿನ ಜೊತೆಗೆ ನಾಯಕತ್ವ ಗುಣಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಉನ್ನತ ಸಾಧನೆ ಮೆರೆಯಬೇಕು ಎಂದು ಸಂತ ಪೌಲರ ಪಪೂ ಕಾಲೇಜಿನ ಪ್ರಾಚಾರ್ಯ ಕೆ.ಟಿ. ಮೇಘನಾಥ್ ಕರೆ ನೀಡಿದರು.
ನಗರದ ಸಂತ ಪೌಲರ ಪದವಿ ಪೂರ್ವ ಕಾಲೇಜಿನಲ್ಲಿ ಹಿಮಾಲ ಯನ್ ಅಡ್ವೆಂಚರ್ ಅಂಡ್ ನೇಚರ್ ಅಕಾಡೆಮಿ ಹಮ್ಮಿಕೊಂ ಡಿದ್ದ ಸಾಹಸ ಕ್ರೀಡೆಗಳ ಕುರಿತ ತರಬೇತಿ ಕಾರ್ಯಾಗಾರ ಹಾಗೂ ಬೋಧಕರಿಗೆ ಸನ್ಮಾನ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿ ಮಾತ ನಾಡಿದ ಅವರು, ವಿದ್ಯಾರ್ಥಿನಿ ಯರಲ್ಲಿ ಸಾಹಸ ಗುಣ ಬೆಳೆಸಲು ಇಂತಹ ಕಾರ್ಯಾಗಾರ ಆಯೋಜಿಸಲಾಗಿದೆ ಎಂದರು.
ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲೂ ವಿದ್ಯಾರ್ಥಿ ಗಳು ಸಾಧನೆ ಮಾಡಬೇಕು. ಕಲೆ, ಕ್ರೀಡೆ, ಸಂಗೀತ, ಸಾಹಿತ್ಯ ಹೀಗೆ ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಗಮನ ಹರಿಸಬೇಕು. ತಮ್ಮ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ಮೊಬೈಲ್ ಬಳಕೆ ನಿಷೇಧಿಸಲಾಗಿದೆ. ನಿಮ್ಮ ಪಾಲಕರಿಗೂ ಸಹ ಮೊಬೈಲ್ ಕೊಡಿಸದಂತೆ ತಿಳಿ ಹೇಳುವ ಮೂಲಕ ನಿಮ್ಮ eನ ಸಾಧನೆಗೆ ಹೆಚ್ಚು ಒತ್ತು ನೀಡಲಾಗಿದೆ ಎಂದು ಅವರು ತಿಳಿಸಿದರು.
ಬೋಧಕರಿಗೆ ಸನ್ಮಾನಿಸಿ ಮಾತನಾಡಿದ ಕನ್ನಡಪ್ರಭ ಹಿರಿಯ ಪ್ರಧಾನ ವರದಿಗಾರ ನಾಗರಾಜ ಎಸ್.ಬಡದಾಳ್, ಸಾಹಸ ಕ್ರೀಡೆಗಳ ಬಗ್ಗೆ ಗಂಟೆಗಟ್ಟಲೇ ಕಾರ್ಯಾಗಾರದಲ್ಲಿ ಆಲಿಸಿದ್ದೀರಿ. ಭವಿಷ್ಯ, ಜೀವನ ಸಹ ಸವಾಲಿನದ್ದೇ ಆಗಿರುತ್ತದೆ. ಅದನ್ನೆ ಆತ್ಮವಿಶ್ವಾಸ ದಿಂದ ಎದುರಿಸುವ ಮೂಲಕ ಜೀವನ ಸಾಧನೆಯೆಂಬ ಸಾಹಸದಲ್ಲಿ ನೀವೆಲ್ಲರೂ ಯಶಸ್ವಿಯಾಗಬೇಕು. ಈ ಸಂಸ್ಥೆ ಯಲ್ಲಿ ಓದಿದ ಅದೆಷ್ಟೋ ಹಿರಿಯ ವಿದ್ಯಾರ್ಥಿನಿಯರು ದೇಶ, ವಿದೇಶದಲ್ಲಿ ಸಾಧನೆ ಮಾಡುತ್ತಿ zರೆ. ಆ ಎಲ್ಲರಿಗಿಂತ ಉನ್ನತ ಸಾಧನೆ ನಿಮ್ಮಿಂದ ಆಗಬೇಕು ಎಂದು ಕರೆ ನೀಡಿದರು.
ಮೊಬೈಲ್, ವಾಟ್ಸಪ್, ಫೇಸ್ ಬುಕ್, ಮೆಸ್ಸೆಂಜರ್ ನಂತಹ ಸಾಮಾಜಿಕ ಜಾಲತಾಣಗಳನ್ನು ಹಿತಮಿತವಾಗಿ ಬಳಸಬೇಕು. ಊಟದ ಎಲೆಯಲ್ಲಿ ಚಿಟಿಕೆ ಉಪ್ಪು ಇಟ್ಟಿರುತ್ತಾರೆ. ರುಚಿಗೆ ತಕ್ಕಷ್ಟು ಮಾತ್ರ ಉಪ್ಪನ್ನು ಹೇಗೆ ಬಳಸುತ್ತೇವೆಯೋ ಅದೇ ರೀತಿ ನಮ್ಮ eನ ಹೆಚ್ಚಿಸಿ ಕೊಳ್ಳಲಷ್ಟೇ ಸಾಮಾಜಿಕ ಜಲತಾಣ ಬಳಸಿ. ಅನಾವಶ್ಯಕವಾಗಿ ಯಾರೊಂದಿಗೂ ಎಂದು ಅವರು ಕಿವಿಮಾತು ಹೇಳಿದರು.
ಸಂಪನ್ಮೂಲ ವ್ಯಕ್ತಿಯಾಗಿದ್ದ ಹಿಮಾಲಯನ್ ಅಡ್ವೆಂಚರ್ ಅಂಡ್ ನೇಚರ್ ಅಕಾಡೆಮಿ ಕಾರ್ಯದರ್ಶಿ, ಸಾಹಸ ಕ್ರೀಡೆಗಳ ತರಬೇತುದಾರ ಎನ್.ಕೆ.ಕೊಟ್ರೇಶ್ ಮಾತನಾಡಿ, ಸಾಹಸ ಕ್ರೀಡೆಗಳಲ್ಲಿ ಹಲವಾರು ವಿಧಗಳಿವೆ. ಇವುಗಳ ಬಗ್ಗೆ ಕಾರ್ಯಾಗಾರದಲ್ಲಿ ಸವಿವರ ವಾಗಿ ಮಾಹಿತಿ ನೀಡಿದ್ದೇವೆ. ವಿದ್ಯಾರ್ಥಿ, ಯುವ ಜನರು, ಹಿರಿಯರು, ಗೃಹಿಣಿಯರು ಯಾರೇ ಆಗಲಿ ಟ್ರಕ್ಕಿಂಗ್ ಸೇರಿದಂತೆ ಯಾವುದೇ ಸಾಹಕ ಕ್ರೀಡೆ ತರಬೇತಿಗೆ ತಮ್ಮ ಅಕಾಡೆಮಿಯನ್ನು ಸಂಪರ್ಕಿಸಬಹುದು ಎಂದರು.
ರೆಡ್‌ಕ್ರಾಸ್ ಸಂಸ್ಥೆಯ ಸಂಚಾಲಕ ಶಿವಕುಮಾರ್, ಕಾಲೇಜಿನ ಬೋಧಕ- ಬೋಧ ಕೇತರ ಸಿಬ್ಬಂದಿ, ಪಿಯು ವಿದ್ಯಾರ್ಥಿ ನಿಯರು ಇದ್ದರು. ಇದೇ ವೇಳೆ ಕಾಲೇಜಿನ ಉಪನ್ಯಾಸಕ ಎಸ್. ಕಿರಣ್, ದೈಹಿಕ ಶಿಕ್ಷಕ ಎ.ಬಿ. ಸಿದ್ದೇಶ್‌ರನ್ನು ಸನ್ಮಾನಿಸಲಾಯಿತು.
ಸಲುಗೆ ಬೇಡ. ಜೀವನದಲ್ಲಿ ಎಂತಹದ್ದೇ ಸಮಸ್ಯೆ, ಸವಾಲುಗಳನ್ನು ಎದುರಿಸುತ್ತೇವೆಂಬ ಆತ್ಮವಿಶ್ವಾಸ ಮೈಗೂಡಿಸಿಕೊಂಡು ಸಾಧನೆ ಮಾಡಿ (೨ನೇ ಪುಟಕ್ಕೆ)